ಶ್ರಾವಣದಲ್ಲಿ ಈ ಮೂರು ರಾಶಿಗಳ ಮೇಲಿರಲಿದೆ ಮಹಾದೇವನ ಕೃಪೆ..! ಮುಟ್ಟಿದ್ದೆಲ್ಲಾ ಚಿನ್ನ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ಪೂಜೆ ಮತ್ತು ಉಪವಾಸ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.


ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಪ್ರತಿ ತಿಂಗಳು ಮಂಗಳಕರವಾಗಿದ್ದರೆ, ಕೆಲವರಿಗೆ ಇದು ಅಶುಭವಾಗಿರುತ್ತದೆ.  ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನದ ಆಧಾರದ ಮೇಲೆ,  ಆಯಾ ರಾಶಿಯವರ ಲಾಭ ನಷ್ಟ ಶುಭ ಅಶುಭವನ್ನು ಹೇಳಲಾಗುತ್ತದೆ.  ಹಿಂದೂ ಧರ್ಮದಲ್ಲಿ ಶ್ರಾವಣ  ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಬಾರಿ ಶ್ರಾವಣ ಜುಲೈ 14ರಿಂದ ಆರಂಭವಾಗಿದ್ದು, ಆಗಸ್ಟ್ 12ರವರೆಗೆ ನಡೆಯಲಿದೆ. ಈ ತಿಂಗಳಲ್ಲಿ 4 ಶ್ರಾವಣ ಸೋಮವಾರಗಳು ಬರುತ್ತವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ಪೂಜೆ ಮತ್ತು ಉಪವಾಸ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಈ ತಿಂಗಳು 3 ರಾಶಿಯವರಿಗೆ ಶಿವನ ಆಶೀರ್ವಾದ ಸಿಗಲಿದೆ.   ಈ ಸಮಯದಲ್ಲಿ, ಮೂರು ರಾಶಿಯವರ ಎಲ್ಲಾ ಕೆಲಸದಲ್ಲಿಯೂ ಸಾಕಷ್ಟು ಪ್ರಗತಿ ಸಿಗುತ್ತದೆ.  

2 /4

ಮೇಷ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸವು ಮೇಷ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಭಗವಾನ್ ಶಂಕರನ ಕೃಪೆಯು ಅತಿಯಾಗಿರುತ್ತದೆ. ಬಹಳ ದಿನಗಳಿಂದ ನೆರವೇರದೇ ಇರುವ ಮನದ ಇಚ್ಛೆ ಈ ಸಮಯದಲ್ಲಿ, ಈಡೇರಲಿದೆ. 

3 /4

ಕರ್ಕ ರಾಶಿ - ಶ್ರಾವಣ ಮಾಸದಲ್ಲಿ ಈ ರಾಶಿಯವರಿಗೆ ಶಿವನು ದಯೆ ತೋರಲಿದ್ದಾನೆ. ಈ ಸಮಯದಲ್ಲಿ ಕೆಲಸಗಳಲ್ಲಿ ಬರುತ್ತಿದ್ದ ಅಡೆತಡೆಗಳು ದೂರವಾಗುತ್ತವೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆದಾಯದಲ್ಲಿ ಹಠಾತ್ ಹೆಚ್ಚಳವಾಗಬಹುದು. ವ್ಯಾಪಾರ-ವ್ಯವಹಾರದಲ್ಲಿ ಲಾಭವಾಗಿ ಉತ್ತಮ ಆದಾಯ ಕೈ ಸೇರಬಹುದು.    

4 /4

ಕನ್ಯಾ - ಈ ರಾಶಿಯವರಿಗೆ ಶ್ರಾವಣ ಮಾಸವು ಸಂತಸದಿಂದ ಕೂಡಿರಲಿದೆ. ಈ ಅವಧಿಯಲ್ಲಿ,  ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನವನ್ನು ಪಡೆಯುವುದು ಸಾಧ್ಯವಾಗುತ್ತದೆ. ಹೂಡಿಕೆಗೆ ಈ ಸಮಯ ತುಂಬಾ ಅನುಕೂಲಕರವಾಗಿರಲಿದೆ.   (ಸೂಚನೆ : ಈ ಮೇಲಿನ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)