ಈ ರಾಶಿಯಲ್ಲಿ ಶಶ ಮಹಾಪುರುಷ ರಾಜಯೋಗ! ಒಲಿದು ಬರುವುದು ಧನ ರಾಶಿ

ವೈದಿಕ ಜ್ಯೋತಿಷ್ಯದ ಪ್ರಕಾರ ಜನವರಿ 17ರಂದು ಶನಿದೇವನು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಕುಂಭ ಶನಿಯ ಮೂಲ ರಾಶಿಯಾಗಿದೆ. ಈ ರಾಶಿಯಲ್ಲಿ ಶನಿ ಸಂಕ್ರಮಣದಿಂದ ಶಶ ಮಹಾಪುರುಷ ರಾಜಯೋಗ ಸೃಷ್ಟಿಯಾಗುತ್ತಿದೆ.

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ ಜನವರಿ 17ರಂದು ಶನಿದೇವನು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಕುಂಭ ಶನಿಯ ಮೂಲ ರಾಶಿಯಾಗಿದೆ. ಈ ರಾಶಿಯಲ್ಲಿ ಶನಿ ಸಂಕ್ರಮಣದಿಂದ ಶಶ ಮಹಾಪುರುಷ ರಾಜಯೋಗ ಸೃಷ್ಟಿಯಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಶಶ ಮಹಾಪುರುಷ ರಾಜಯೋಗ : ಶಶ ಮಹಾಪುರುಷ ರಾಜಯೋಗವನ್ನು ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರ  ಎಂದು ಪರಿಗಣಿಸಲಾಗಿದೆ. ಇದರ ಪರಿಣಾಮ ಎಲ್ಲಾ  ರಾಶಿಯವರ ಮೇಲೆ ಗೋಚರಿಸುತ್ತದೆ. ಅದರಲ್ಲೂ ಮೂರು 3 ರಾಶಿಯವರ ಜೀವನದ ಮೇಲೆ ವಿಶೇಷ ಪರಿಣಾಮ  ಬೀರುತ್ತದೆ.   

2 /4

ಮೇಷ ರಾಶಿ : ಈ ರಾಶಿಯವರ ಆದಾಯದ ಮನೆಯಲ್ಲಿ ಶನಿ ಸಂಕ್ರಮಣ ವಾಗಿದೆ. ಮೇಷ ರಾಶಿಯವರಿಗೆ ಶಶ ಮಹಾಪುರುಷ ರಾಜಯೋಗವು ಆರ್ಥಿಕವಾಗಿ ಅನುಕೂಲವಾಗಿರುವುದು. ಈ ಸಮಯದಲ್ಲಿ ಅನಿರೀಕ್ಷಿತ ಮೂಲಗಳಿಂದ ಧನಾಗಮನವಾಗುವುದು. ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರ  ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. 

3 /4

ಧನು ರಾಶಿ : ಶನಿ ಸಂಚಾರದಿಂದ ವಿಶೇಷ ಲಾಭ ಪಡೆಯುವವರು ಎಂದರೆ ಧನು ರಾಶಿಯವರು. ಧನು ರಾಶಿಯವರು ಕಳೆದ ಏಳೂವರೆ ವರ್ಷಗಳಿಂದ ಅನುಭವಿಸಿದ್ದ ನೋವು ಕಷ್ಟ ನಷ್ಟಗಳಿಗೆ ವಿರಾಮ ಬಿದ್ದಿದೆ.  ಈ ರಾಶಿಯ 3ನೇ ಮನೆಯಲ್ಲಿ ಶನಿಯ ಸಂಚಾರವಿದೆ. ಹೀಗಾಗಿ ಈ ರಾಶಿಯವರ ಧೈರ್ಯ ಮತ್ತು ಶೌರ್ಯವು ಹೆಚ್ಚಾಗಬಹುದು. ಯಾವ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗಲಿದೆ. 

4 /4

ಕುಂಭ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಶ ಮಹಾಪುರುಷ ರಾಜಯೋಗವು ಕುಂಭ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಶನಿ ಸಂಕ್ರಮಣದ  ನಂತರ ಈ ಜಾತಕದ ಲಗ್ನ ಮನೆಯಲ್ಲಿ ಶನಿ ಸಂಚಾರವಾಗಲಿದೆ. ಹೀಗಾಗಿ ಈ  ರಾಶಿಯವರ ಗೌರವ ಹೆಚ್ಚಾಗುತ್ತದೆ. ಮಾಡುವ ಕೆಲಸಗಳಲ್ಲಿ ಶನಿದೇವ ಕೈ ಹಿಡಿಯಲಿದ್ದಾನೆ. ವೃತ್ತಿ ಜೀವನದಲ್ಲಿ ಪ್ರಗತಿಯಾಗುವುದು. ಹೊಸ ಹೊಸ ಅವಕಾಶಗಳು ಎದುರಾಗುವುದು. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಉನ್ನತ ಸ್ಥಾನಕ್ಕೆ ಏರಲಿದ್ದಾರೆ. ವಿವಾಹಿತರಿಗೆ ಈ ಸಮಯವು ಹೆಚ್ಚು ಮಂಗಳಕರವಾಗಿರುತ್ತದೆ.  ( ಸೂಚನೆ : ಇಲ್ಲಿ ನೀಡಲಾಗಿರುವ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)