ಟೀನಾ ದತ್ತಾ ತನ್ನ ಮುಂಬರುವ ವೆಬ್ ಸರಣಿ 'ನಕ್ಸಲ್' ಮೂಲಕ ಡಿಜಿಟಲ್ ಜಗತ್ತಿನಲ್ಲಿ ಪದಾರ್ಪಣೆಗೆ ಸಜ್ಜಾಗಿದ್ದಾರೆ.
ನವದೆಹಲಿ: ಖ್ಯಾತ ಕಿರುತೆರೆ ತಾರೆ ಟೀನಾ ದತ್ತಾ (Tina Datta) ಮುಂಬರುವ ವೆಬ್ ಸರಣಿಯೊಂದಿಗೆ ಡಿಜಿಟಲ್ ಮಾಧ್ಯಮಕ್ಕೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. 'ಉತರನ್' ಎಂಬ ದೂರದರ್ಶನ ಸಿರಿಯಲ್ ನ ಖ್ಯಾತ ನಟಿ, ಡಿಜಿಟಲ್ ಮಾಧ್ಯಮ ಪ್ರವೇಶಕ್ಕೆ ಉತ್ಸುಕರಾಗಿರುವುದಾಗಿ ಹೇಳುತ್ತಾಳೆ. ಮತ್ತೊಂದೆಡೆ, ಅವರ ಇತ್ತೀಚಿನ ಕೆಲ ಭಾವಚಿತ್ರಗಳು ಇನ್ಸ್ಟಾ ಗ್ರಾಮ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲಾರಂಭಿಸಿವೆ.
ಟೀನಾ ದತ್ತಾ 'ನಕ್ಸಲ್' ಹೆಸರಿನ ವೆಬ್ ಸಿರೀಸ್ ಮೂಲಕ ಡಿಜಿಟಲ್ ಮಾಧ್ಯಮಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ವೆಬ್ ಸೀರಿಸ್ ನಲ್ಲಿ ತಮ್ಮ ಪಾತ್ರದ ಕುರಿತು ಹೇಳಿಕೆ ನೀಡುವ ಟೀನಾ, 'ನಕ್ಸಲ್' ನಲ್ಲಿ ತಾವು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿರುವುದಾಗಿ ಹೇಳಿದ್ದಾರೆ. ಇದಕ್ಕೂ ಮೊದಲು ತಾವು ಅಂತಹ ಪಾತ್ರ ಎಂದಿಗೂ ನಿಭಾಯಿಸಿಲ್ಲ ಎನ್ನುತ್ತಾರೆ ಟೀನಾ.
ವೆಬ್ ಸಿರೀಸ್ ನಲ್ಲಿ ತಾವು ಓರ್ವ ಪೊಲೀಸ್ ಅಧಿಕಾರಿಯ ಒಳ್ಳೆಯ ಹಾಗೂ ಪ್ರೀತಿಯ ಗೆಳತಿ ಕೇತಕಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ.
'ನನ್ನ ಪಾತ್ರ ಷೋ ಕಥೆಯಲ್ಲಿ ಸಾಕಷ್ಟು ತಿರುವುಗಳಿಂದ ಕೂಡಿದ್ದು, ಇದೊಂದು ಪ್ರಮುಖ ಪಾತ್ರವಾಗಿದೆ. ಎಲ್ಲರೂ ನೋಡಲೇಬೇಕಾಗಿರುವ ಪಾತ್ರ ಹಾಗೂ ನಾನೂ ಕೂಡ ತುಂಬಾ ಉತ್ಸಾಹಿತಳಾಗಿದ್ದೇನೆ ಎನ್ನುತ್ತಾರೆ ಟೀನಾ.
'ನನ್ನ ಪಾತ್ರ ಷೋ ಕಥೆಯಲ್ಲಿ ಸಾಕಷ್ಟು ತಿರುವುಗಳಿಂದ ಕೂಡಿದ್ದು, ಇದೊಂದು ಪ್ರಮುಖ ಪಾತ್ರವಾಗಿದೆ. ಎಲ್ಲರೂ ನೋಡಲೇಬೇಕಾಗಿರುವ ಪಾತ್ರ ಹಾಗೂ ನಾನೂ ಕೂಡ ತುಂಬಾ ಉತ್ಸಾಹಿತಳಾಗಿದ್ದೇನೆ ಎನ್ನುತ್ತಾರೆ ಟೀನಾ.
ಈ ವೆಬ್ ಸಿರೀಸ್ ಚಿತ್ರೀಕರಣ ಗೋವಾದಲ್ಲಿ ನಡೆಯಲಿದೆ. ಇದರಲ್ಲಿ ಅಮೀರ್ ಅಲಿ ಹಾಗೂ ರಾಜೀವ್ ಖಂಡೇಲ್ವಾಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.