ಹಸ್ತದಲ್ಲಿ ಈ ಚಿಹ್ನೆ ಇದ್ದರೆ ಸದಾ ಇರಲಿದೆ ಲಕ್ಷ್ಮೀ ಕೃಪೆ

 ಕೈಯಲ್ಲಿರುವ ಈ  ವಿಶೇಷ ಚಿಹ್ನೆಗಳ ಕಾರಣದಿಂದಾಗಿ ವ್ಯಕ್ತಿಯು ಅದೃಷ್ಟವನ್ನು ಪಡೆಯುತ್ತಾನೆ.  

ಬೆಂಗಳೂರು  : ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿರುವ ರೇಖೆಗಳು ವ್ಯಕ್ತಿಯ ಭವಿಷ್ಯವನ್ನು ಹೇಳುತ್ತದೆ ಎನ್ನಲಾಗುತ್ತದೆ. ಕೈಯಲ್ಲಿರುವ ರೇಖೆಗಳ ಹೊರತಾಗಿ, ಅದೃಷ್ಟ ಮತ್ತು ಸಂಪತ್ತಿನ ಬಗ್ಗೆ ಹೇಳುವ ಅನೇಕ ಗುರುತುಗಳು ಹಸ್ತದಲ್ಲಿ ಇರುತ್ತವೆ. ಕೈಯಲ್ಲಿರುವ ಈ  ವಿಶೇಷ ಚಿಹ್ನೆಗಳ ಕಾರಣದಿಂದಾಗಿ ವ್ಯಕ್ತಿಯು ಅದೃಷ್ಟವನ್ನು ಪಡೆಯುತ್ತಾನೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ಇಂಗ್ಲಿಷ್‌ನ ಎಂ ಅಕ್ಷರದ ಆಕಾರವು ಅನೇಕ ಜನರ ಅಂಗೈಯಲ್ಲಿ ಕಾಣಿಸುತ್ತದೆ. ಲಜೀವನ್ ರೇಖೆ, ಮಸ್ತಿಷ್ಕ್ ರೇಖೆ ಮತ್ತು ಹೃದಯದ ರೇಖೆ ಜೊತೆಯಾಗಿ ಮೂಡಲ್ಪಟ್ಟ  M ಆಕಾರವನ್ನು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ತಮ್ಮ ಅಂಗೈಯಲ್ಲಿ ಈ ಗುರುತು ಹೊಂದಿರುವ ಜನರು ನಾಯಕತ್ವದ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಇದರೊಂದಿಗೆ, ಈ ಜನರು ಹಣ ಮತ್ತು ಗೌರವವನ್ನು ಸಹ ಗಳಿಸುತ್ತಾರೆ.   

2 /5

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಶಂಖದ ಗುರುತು ತುಂಬಾ ಮಂಗಳಕರವಾಗಿದೆ. ಅಂಗೈಯಲ್ಲಿ ಶಂಖಡ ಗುರುತನ್ನು ಹೊಂದಿರುವ ಜನರು ಬಹಳ ಶ್ರೀಮಂತರಾಗಿರುತ್ತಾರೆ. ಅಲ್ಲದೆ ಇವರು ಕಡಿಮೆ ಪ್ರಯತ್ನದ ಮೂಲಕ ಹೆಚ್ಚು ಯಶಸ್ಸನ್ನು ಪಡೆಯುತ್ತಾರೆ.

3 /5

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಸ್ವಸ್ತಿಕದ ಗುರುತು ಇದ್ದರೆ ಅದು ತುಂಬಾ ಮಂಗಳಕರವಾಗಿರುತ್ತದೆ. ಅಂತಹ ಜನರು ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. ಅವರು ತಮ್ಮ ಸ್ವಂತ ಪರಿಶ್ರಮದಿಂದ ಹೆಚ್ಚಿನ ಎತ್ತರಕ್ಕೆ ಬೆಳೆಯುತ್ತಾರೆ. ಇದಲ್ಲದೇ ಇವರ ಜೀವನದಲ್ಲಿ ಹಣಕ್ಕೆ ಯಾವ ರೀತಿಯ ಕೊರತೆಯೂ ಇರುವುದಿಲ್ಲ. 

4 /5

ಅಂಗೈಯಲ್ಲಿರುವ ಕಮಲದ ಚಿಹ್ನೆಯನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೈಯಲ್ಲಿ ಕಮಲದ ಚಿಹ್ನೆಯನ್ನು ಹೊಂದಿರುವವರು ಯಾವಾಗಲೂ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಇವರ ಜೀವನದಲ್ಲೂ ಹಣಕ್ಕೆ ಸಮಸ್ಯೆ ಇರುವುದಿಲ್ಲ. 

5 /5

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಚಕ್ರದ  ಗುರುತು ಇರುವುದು ಮಂಗಳಕರವಾಗಿರುತ್ತದೆ. ತಮ್ಮ ಅಂಗೈಯಲ್ಲಿ ಚಕ್ರದ ಗುರುತು ಹೊಂದಿರುವ ಜನರು ಶ್ರೀಮಂತರಾಗಿರುತ್ತಾರೆ.