ಈ ಐದು ರಾಶಿಯವರು ಖಂಡಿತಾ ಕೋಪದ ಕೈಗೆ ಬುದ್ದಿಕೊಡಬಾರದು. ಈ 5 ರಾಶಿಗಳಲ್ಲಿ ನಿಮ್ಮ ರಾಶಿ ಇದೆಯಾ ಚೆಕ್ ಮಾಡಿಕೊಳ್ಳಿ.
5 Zodiac Signs With Temper Problem: ಕೋಪ ಸರ್ವತ್ರ ಅಪಾಯ ತಂದು ಬಿಡುತ್ತದೆ. ಕೋಪ ಯಾವುದೇ ರೀತಿಯಲ್ಲೂ ಒಳ್ಳೆಯದಲ್ಲ. ಸಂಯಮ, ತಾಳ್ಮೆಯಿಂದ ವ್ಯವಹರಿಸಿದರೆ ಯಾವುದನ್ನು ಗೆಲ್ಲಬಹುದು. ಕೋಪದ ಕೈಗೆ ಬುದ್ದಿ ಕೊಟ್ಟರೆ ಅನಾಹುತ ಆಗಿ ಬಿಡುತ್ತದೆ. ನಾವು ಇವತ್ತು ಗ್ರಹ ಗತಿಗಳ ಲೆಕ್ಕಾಚಾರದಲ್ಲಿ ಕೋಪ ಯಾರಿಗೆ ಅಪಾಯ..? ಯಾರು ಕೋಪಕ್ಕೆ ಕಡಿವಾಣ ಹಾಕಿಕೊಳ್ಳಬೇಕು ಎಂಬುದನ್ನು ನೋಡೋಣ. ಈ ಐದು ರಾಶಿಯವರು ಖಂಡಿತಾ ಕೋಪದ ಕೈಗೆ ಬುದ್ದಿಕೊಡಬಾರದು. ಈ 5 ರಾಶಿಗಳಲ್ಲಿ ನಿಮ್ಮ ರಾಶಿ ಇದೆಯಾ ಚೆಕ್ ಮಾಡಿಕೊಳ್ಳಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ವೃಷಭ ರಾಶಿ :ಈ ರಾಶಿಚಕ್ರದವರು ಸಹಜವಾಗಿ ತುಂಬಾ ಹಠಮಾರಿ. ಕೋಪ ಬಂದಾಗ ಸಾಕಷ್ಟು ಆಕ್ರಮಣಕಾರಿ ಆಗುತ್ತಾರೆ. ಇವರ ಕೋಪ ಏರಿದಷ್ಟೇ ಬೇಗ ಇಳಿಯುತ್ತದೆ. ಆದರೆ ಈ ರಾಶಿಯ ಜನರು ಕೋಪದಿಂದ ಯಾರ ಮಾತನ್ನೂ ಕೇಳುವುದಿಲ್ಲ. ಸರಿಯಾದ ವಿಷಯದ ಮೇಲೆ ಇವರ ಕೋಪ ಏರುತ್ತದೆ. ಇವರು ಕೋಪವನ್ನು ಕಂಟ್ರೋಲಿನಲ್ಲಿಟ್ಟುಕೊಳ್ಳಬೇಕು.
ಸಿಂಹ : ಕೋಪ ಬಂದರೆ ಈ ರಾಶಿಯ ಜನ ಉಲ್ಟಾಪಲ್ಟ ಮಾತಾಡಿಬಿಡುತ್ತಾರೆ. ಕೋಪ ಬಂದಾಗ ಸಂಬಂಧ ಕೂಡಾ ಹಾಳು ಮಾಡಿಕೊಂಡು ಬಿಡುತ್ತಾರೆ. ತಮ್ಮ ತಪ್ಪನ್ನು ಸುಲಭದಲ್ಲಿ ಒಪ್ಪುವ ಜಾಯಮಾನದವರು ಇವರಲ್ಲ. ಇವರ ಕೋಪದಿಂದ ಪಾರಾಗಬೇಕಾದರೆ, ತುಂಬಾ ಚಾಲಾಕಿಯಿಂದ ಕೆಲಸ ಮಾಡಬೇಕು.
ವಶ್ಚಿಕ : ಈ ರಾಶಿಚಕ್ರದ ಜನ ತಮ್ಮ ಕೋಪವನ್ನು ಬೇಗನೇ ವ್ಯಕ್ತ ಪಡಿಸುವುದಿಲ್ಲ. ತಮ್ಮೆದುರು ಏನಾದರೂ ತಪ್ಪಾಗುತ್ತಿದ್ದರೆ ಈ ಜನರು ತಮ್ಮ ಸಂಯಮ ಕಳೆದುಕೊಳ್ಳುತ್ತಾರೆ. ಇವರಿಗೆ ಬೇಗ ಕೋಪ ಬರುವುದಿಲ್ಲ. ಬಂದರೆ ಅದರ ಮೇಲೆ ನಿಯಂತ್ರಣ ಸಾಧಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ಇವರು ಯಾರನ್ನು ಇಷ್ಟ ಪಡುವುದಿಲ್ಲವೋ, ಅವರ ಮರ್ಯಾದೆ ಹರಾಜು ಮಾಡಿಬಿಡುತ್ತಾರೆ.
ಧನು ರಾಶಿ : ಈ ರಾಶಿಚಕ್ರದ ಜನರು ಕೋಪಗೊಂಡಾಗ, ಎಲ್ಲವನ್ನೂ ಹಾಳುಮಾಡುತ್ತಾರೆ. ಕೋಪದಲ್ಲಿ, ಯಾವುದೂ ಅವರ ನಿಯಂತ್ರಣದಲ್ಲಿರಲ್ಲ. ವಸ್ತುಗಳನ್ನು ಬರ್ಬಾದ್ ಮಾಡಿ ಬಿಡುತ್ತಾರೆ. ತಮ್ಮ ತಪ್ಪಿನ ಅರಿವು ಕೂಡಾ ಅವರಿಗೆ ಅತಿಬೇಗ ಉಂಟಾಗುತ್ತದೆ. ಕೋಪ ತಣ್ಣಗಾದ ಮೇಲೆ ಅವರೊಂದಿಗೆ ವ್ಯವಹರಿಸಬಹುದು.
ಮಕರ : ಈ ರಾಶಿಚಕ್ರದ ಜನರಿಗೆ ಕೋಪ ಬೇಗ ಬರುತ್ತದೆ. ಕೋಪ ಬಂದಾಗ ಯಾವುದೂ ಇವರ ಕೈಯಲ್ಲಿರುವುದಿಲ್ಲ. ಕೋಪ ಬಂದಾಗ ತೀರಾ ಅಪಾಯಕಾರಿ ಇವರು. ಇವರ ಅತಿದೊಡ್ಡ ವೀಕ್ನೆಸ್ ಕೋಪ. ಅತಿ ಬೇಗ ಕೋಪ ಶಮನ ಕೂಡಾ ಆಗುತ್ತದೆ. ಇವರು ಕೋಪ ಕಡಿಮೆ ಮಾಡಿಕೊಳ್ಳಲೇಬೇಕು.