MS Dhoni ಮತ್ತು Virat Kohli ಸೇರಿದಂತೆ ಈ ಆಟಗಾರರ ಬಳಿಯಿದೆ ದುಬಾರಿ ವಾಚ್, ಇವುಗಳ ಬೆಲೆ CEOನ ವಾರ್ಷಿಕ ವೇತನಕ್ಕಿಂತಲೂ ಹೆಚ್ಚು

ಇತ್ತೀಚಿಗೆ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ವಾಚ್ ನ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

ನವದೆಹಲಿ : ಇತ್ತೀಚಿಗೆ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ವಾಚ್ ನ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಇಂಟರ್ ನೆಟ್ ನಲ್ಲಿ ಭಾರೀ ಸುದ್ದಿ ಮಾಡಿದೆ. ಹಾರ್ದಿಕ್ ಪಾಂಡ್ಯ ಮಾತ್ರವಲ್ಲ ಅನೇಕ ಭಾರತೀಯ ಕ್ರಿಕೆಟಿಗರು ದುಬಾರಿ ಕೈಗಡಿಯಾರಗಳನ್ನು ಇಷ್ಟಪಡುತ್ತಾರೆ. ಕೋಟಿ ಕೋಟಿ ಮೌಲ್ಯದ ಕೈಗಡಿಯಾರಗಳನ್ನು ಧರಿಸುವ ಆಟಗಾರರು ಯಾರು ನೋಡೋಣ .. .
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಹಾರ್ದಿಕ್ ಪಾಂಡ್ಯ ಅಬುಧಾಬಿಯಲ್ಲಿ ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711 (Patek Philippe Nautilus Platinum 5711) ಬ್ರಾಂಡ್‌ನ ಐಷಾರಾಮಿ ಗಡಿಯಾರವನ್ನು ಖರೀದಿಸಿದ್ದಾರೆ. ಮಾರುಕಟ್ಟೆಯಲ್ಲಿ ಈ ಗಡಿಯಾರಕ್ಕೆ ಸಾಕಷ್ಟು ಬೇಡಿಕೆಯಿದೆ.  ಇದರ ಬೆಲೆ ಸುಮಾರು 5 ಕೋಟಿ ಎಂದು ಹೇಳಲಾಗುತ್ತಿದೆ. ಹಾರ್ದಿಕ್ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರು. ಅವರ ಕಠಿಣ ಪರಿಶ್ರಮವೇ ಅವರನ್ನು ಇಂದು ಈ ಹಂತಕ್ಕೆ ತಂದಿದೆ.  

2 /5

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಿ ಪಾಟೆಕ್ ಫಿಲಿಪ್ ಅಕ್ವಾನಾಟ್ (Philippe Aquanaut Ref. 5167 Limited Edition)  ವಾಚ್ ಆಗಿದೆ. ಈ ವಾಚ್‌ನ ಕೇವಲ 500 ಪೀಸ್ ಮಾತ್ರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದರ ನಿಜವಾದ ಬೆಲೆ ಎಷ್ಟು ಎನ್ನುವುದನ್ನು ಕೊಹ್ಲಿ ಹೇಳಲಿಲ್ಲ. ಆದರೆ ಅಂದಾಜಿನ ಪ್ರಕಾರ ಇದರ ಬೆಲೆ  5 ರಿಂದ 10 ಕೋಟಿ ರೂಪಾಯಿಗಳ ನಡುವೆ ಇದೆ ಎನ್ನಲಾಗಿದೆ.   

3 /5

ಟೀಮ್ ಇಂಡಿಯಾದ ಆಟಗಾರ ಕೆಎಲ್ ರಾಹುಲ್ ಸ್ಟೈಲ್ ವಿಷಯದಲ್ಲಿ ಯಾರಿಗೂ ಕಡಿಮೆ ಇಲ್ಲ. ಅವರು Rolex, Panerai, Hublot ಮತ್ತು  Patek Philippe ನಂತಹ ಅತ್ಯಂತ ದುಬಾರಿ ಬ್ರಾಂಡ್‌ಗಳ ಕೈಗಡಿಯಾರಗಳನ್ನು ಹೊಂದಿದ್ದಾರೆ. ಈ ಚಿತ್ರದಲ್ಲಿ, ರಾಹುಲ್ Audemars Piguet Royal Oak Limited Edition ವಾಚ್ ಧರಿಸಿದ್ದಾರೆ. ಇ-ಕಾಮರ್ಸ್ ವೆಬ್‌ಸೈಟ್ ಪ್ರಕಾರ, ಇದರ ಬೆಲೆ 3 ಕೋಟಿ ರೂ.

4 /5

'ಹಿಟ್ ಮ್ಯಾನ್' ಎಂದೇ ಜನಪ್ರಿಯವಾಗಿರುವ ರೋಹಿತ್ ಶರ್ಮಾ 'ಹಬ್ಲೊ' ವಾಚ್ ನ ಅಭಿಮಾನಿ. ಇತ್ತೀಚೆಗೆ, ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ Hublot Big Band Gold Ceramic limited edition ವಾಚ್ ಅನ್ನು ಪ್ರದರ್ಶಿಸಿದ್ದರು. ಲಕ್ಸುರಿ ಲೈಫ್ಸ್ಟೈಲ್ ಪೋರ್ಟಲ್‌ಗಳ ಪ್ರಕಾರ, ಇದರ ಬೆಲೆ 2 ರಿಂದ 3 ಕೋಟಿಗಳ ನಡುವೆ ಇರುತ್ತದೆ.  

5 /5

'ಕ್ಯಾಪ್ಟನ್ ಕೂಲ್' ಎಂದೇ ಜನಪ್ರಿಯವಾಗಿರುವ ಎಂಎಸ್ ಧೋನಿ ಅವರನ್ನು 'ಟ್ರೆಂಡ್ ಸೆಟ್ಟರ್' ಎಂದೂ ಕರೆಯುತ್ತಾರೆ. ಅವರು ತಮ್ಮ ಮಗಳು Ziva Singh Dhoni ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು  Panerai Luminor GMT limited edition ವಾಚ್ ಧರಿಸಿರುವುದು ಕಂಡುಬರುತ್ತದೆ. ಲಕ್ಸುರಿ ಲೈಫ್ಸ್ಟೈಲ್ ಪೋರ್ಟಲ್‌ಗಳ ಪ್ರಕಾರ,  ಇದರ ಬೆಲೆ 1 ರಿಂದ 2 ಕೋಟಿಗಳ ನಡುವೆ ಇರುತ್ತದೆ.