T20 ವಿಶ್ವಕಪ್ 2022 ಈಗಾಗಲೇ ಪ್ರಾರಂಭವಾಗಿದೆ. ಭಾರತವು ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಆಡಬೇಕಾಗಿದೆ. ಇನ್ನು ಭಾರತವು 2007 ರಲ್ಲಿ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದುವರೆಗೆ 7 ಸೀಸನ್ಗಳಲ್ಲಿ ವೆಸ್ಟ್ ಇಂಡೀಸ್ ತಂಡ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದೆ. ವೆಸ್ಟ್ ಇಂಡೀಸ್ ಹೊರತುಪಡಿಸಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿವೆ.
ಇನ್ನು ಟಿ20 ವಿಶ್ವಕಪ್ ನಲ್ಲಿ ಅನೇಕ ದಾಖಲೆಗಳು ರೂಪುಗೊಂಡಿವೆ. ಇದರಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ಬೌಲರ್ಸ್ ಗಳು ಕೂಡ ಸೇರಿದ್ದಾರೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಐವರು ಬೌಲರ್ಸ್ ಗಳು ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದಾರೆ. ಅವರ ಪಟ್ಟಿ ಇಂತಿದೆ.
ಆಸ್ಟ್ರೇಲಿಯಾದ ಕ್ರಿಕೆಟರ್ ಬ್ರೆಟ್ ಲೀ (2007)
ಸೌತ್ ಆಫ್ರಿಕನ್ ಆಟಗಾರ ಕರ್ಟಿಸ್ ಕ್ಯಾಂಫರ್ (2021)
ಶ್ರೀಲಂಕಾ ಆಟಗಾರ ವನಿಂದು ಹಸರಂಗ (2021)
ಸೌತ್ ಆಫ್ರಿಕಾ ತಂಡದ ಕಗಿಸೋ ರಬಡಾ (2021)
ಯುಎಇ ತಂಡದ ಕಾರ್ತಿಕ್ ಮೇಯಪ್ಪನ್ (2022)