Indian Cricket Team: T20 ಕ್ರಿಕೆಟ್ ಅನ್ನು ಯಾವಾಗಲೂ ಬ್ಯಾಟ್ಸ್ಮನ್ಗಳ ಆಟವೆಂದು ಪರಿಗಣಿಸಲಾಗಿದೆ. ಆದರೆ ಬೌಲರ್ಗಳು ಅನೇಕ ಸಂದರ್ಭಗಳಲ್ಲಿ ಪ್ರಾಬಲ್ಯ ಸಾಧಿಸಿದ್ದೂ ಇದೆ. ಇನ್ನು ಐವರು ಭಾರತೀಯ ಬ್ಯಾಟ್ಸ್ಮನ್ಗಳು ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಮೇಡನ್ ಓವರ್ಗಳನ್ನು ಆಡಿದ್ದಾರೆ. ಈ ಪಟ್ಟಿಯಲ್ಲಿ ಹಲವು ದಿಗ್ಗಜ ಬ್ಯಾಟ್ಸ್ಮನ್ಗಳು ಸೇರಿದ್ದಾರೆ.
ಕೆಎಲ್ ರಾಹುಲ್ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ 5 ಮೇಡನ್ ಓವರ್ಗಳನ್ನು ಆಡಿದ್ದಾರೆ. ಅವರು ಟಿ20 ಕ್ರಿಕೆಟ್ನಲ್ಲಿ 2200 ಕ್ಕೂ ಹೆಚ್ಚು ರನ್ ಮತ್ತು ಎರಡು ಶತಕಗಳನ್ನು ಹೊಂದಿದ್ದಾರೆ.
ಭಾರತ ತಂಡದ ಸ್ಟಾರ್ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಟಿ20 ಕ್ರಿಕೆಟ್ ನಲ್ಲಿ 2 ಮೇಡನ್ ಓವರ್ ಆಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಭಾರತ ಪರ 1759 ರನ್ ಗಳಿಸಿದ್ದಾರೆ.
ರೋಹಿತ್ ಶರ್ಮಾ ಟಿ20 ಕ್ರಿಕೆಟ್ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. 1 ಮೇಡನ್ ಓವರ್ ಕೂಡ ಆಡಿದ್ದಾರೆ.
ಶುಭಮನ್ ಗಿಲ್ ಟಿ20 ಕ್ರಿಕೆಟ್ನಲ್ಲಿ ಮೇಡನ್ ಓವರ್ಗಳನ್ನು ಆಡಿದ್ದಾರೆ. ಆದರೆ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುವಲ್ಲಿಯೂ ಕೂಡ ಗಿಲ್ ಪ್ರಸಿದ್ಧರಾಗಿದ್ದಾರೆ.
ಸೂರ್ಯಕುಮಾರ್ ಯಾದವ್ 2022 ರಲ್ಲಿ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೇಡನ್ ಓವರ್ ಆಡಿದ್ದರು. ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರಿಗೆ ಒಂದೇ ಒಂದು ರನ್ ಗಳಿಸಲು ಅವಕಾಶ ನೀಡಲಿಲ್ಲ.