ಈ ಚಿತ್ರಕ್ಕಾಗಿ ಕಾಸ್ಟಿಂಗ್ ಸಮಯದಲ್ಲಿ ಅನೇಕ ನಟಿಯರನ್ನು ಸಂಪರ್ಕಿಸಲಾಗಿತ್ತು. ಆದರೆ ಒಂದಲ್ಲ ಒಂದು ಕಾರಣದಿಂದ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲ.
ಬೆಂಗಳೂರು : ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ 'ಆರ್ಆರ್ಆರ್' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಮೊದಲ ವಾರದಲ್ಲಿ ಚಿತ್ರ 700 ಕೋಟಿ ಗಳಿಸಿ ಇತಿಹಾಸ ಸೃಷ್ಟಿಸಿದೆ. ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಮುಂತಾದ ತಾರೆಯರು ಚಿತ್ರದಲ್ಲಿದ್ದಾರೆ. ಈ ಚಿತ್ರಕ್ಕಾಗಿ ಕಾಸ್ಟಿಂಗ್ ಸಮಯದಲ್ಲಿ ಅನೇಕ ನಟಿಯರನ್ನು ಸಂಪರ್ಕಿಸಲಾಗಿತ್ತು. ಆದರೆ ಒಂದಲ್ಲ ಒಂದು ಕಾರಣದಿಂದ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಆಲಿಯಾ ಭಟ್ ಮತ್ತು ಒಲಿವಿಯಾ ಮೋರಿಸ್ ಪಾತ್ರಕ್ಕಾಗಿ ಅನೇಕ ನಟಿಯರನ್ನು ಸಂಪರ್ಕಿಸಲಾಗಿತ್ತು. ಆದರೆ ಅವರು ಪ್ರಸ್ತಾಪವನ್ನು ತಿರಸ್ಕರಿಸಿದ್ದರು.
'ಆರ್ಆರ್ಆರ್' ತಂಡವು ಶ್ರದ್ಧಾ ಕಪೂರ್ಗೆ ಜೂನಿಯರ್ ಎನ್ಟಿಆರ್ oposite ಪಾತ್ರವನ್ನು ನೀಡಲಾಗಿತ್ತು. ಆದರೆ ಡೇಟ್ ಸಮಸ್ಯೆಯಿಂದಾಗಿ ಶ್ರದ್ಧಾ ಕಪೂರ್ ಈ ಪಾತ್ರವನ್ನು ನಿರಾಕರಿಸಿದ್ದರು.
ಒಲಿವಿಯಾ ಮೋರಿಸ್ ಪಾತ್ರಕ್ಕಾಗಿ ಕತ್ರಿನಾ ಕೈಫ್ ಅವರ ಸಹೋದರಿ ಇಸಾಬೆಲ್ಲೆ ಕೈಫ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಈ ಪಾತ್ರವನ್ನು ನಿರಾಕರಿಸಿದ್ದರು.
ಚಿತ್ರದಲ್ಲಿ ಸೀತಾ ಪಾತ್ರಕ್ಕೆ ಆಲಿಯಾ ಭಟ್ ಬದಲಿಗೆ ಪರಿಣಿತಿ ಚೋಪ್ರಾ ಅವರನ್ನು ಪರಿಗಣಿಸಲಾಗಿತ್ತು.
'ಆರ್ಆರ್ಆರ್' ನಿರ್ಮಾಪಕರು ಜೂನಿಯರ್ ಎನ್ಟಿಆರ್ ಎದುರು ಆಮಿ ಜಾಕ್ಸನ್ ಅವರನ್ನು ಚಿತ್ರದಲ್ಲಿ ಹಾಕಲು ಬಯಸಿದ್ದರು. ಆದರೆ, ಅವರು ಗರ್ಭಿಣಿಯಾಗಿರುವುದರಿಂದ ಈ ಯೋಜನೆಯನ್ನು ಕೈಬಿಡಬೇಕಾಯಿತು.