Banana Side Effect: ಅನೇಕ ಜನರಿಗೆ ಬಾಳೆಹಣ್ಣು ಎಂದರೆ ಪಂಚಪ್ರಾಣ. ಈ ಹಣ್ಣು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವಾಗಿದೆ. ಇದರಿಂದಾಗಿ ಇದನ್ನು ಪ್ರಪಂಚದಾದ್ಯಂತ ಹೆಚ್ಚು ಇಷ್ಟಪಡುತ್ತಾರೆ ಮತ್ತು ತಿನ್ನುತ್ತಾರೆ. ಬಾಳೆಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಈ 5 ಆರೋಗ್ಯ ಸಮಸ್ಯೆ ಇರುವ ಜನರು ಬಾಳೆಹಣ್ಣನ್ನು ತಪ್ಪಿಯೂ ಸೇವಿಸಬಾರದು.
ಅನೇಕ ಜನರಿಗೆ ಬಾಳೆಹಣ್ಣು ಎಂದರೆ ಪಂಚಪ್ರಾಣ. ಈ ಹಣ್ಣು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವಾಗಿದೆ. ಇದರಿಂದಾಗಿ ಇದನ್ನು ಪ್ರಪಂಚದಾದ್ಯಂತ ಹೆಚ್ಚು ಇಷ್ಟಪಡುತ್ತಾರೆ ಮತ್ತು ತಿನ್ನುತ್ತಾರೆ. ಬಾಳೆಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಈ 5 ಆರೋಗ್ಯ ಸಮಸ್ಯೆ ಇರುವ ಜನರು ಬಾಳೆಹಣ್ಣನ್ನು ತಪ್ಪಿಯೂ ಸೇವಿಸಬಾರದು.
ಮಧುಮೇಹ: ಬಾಳೆಹಣ್ಣಿನಲ್ಲಿ ಸ್ವಾಭಾವಿಕವಾಗಿ ಹೆಚ್ಚಿನ ಸಕ್ಕರೆ ಇರುತ್ತದೆ. ಆದ್ದರಿಂದ ಮಧುಮೇಹಿಗಳು ಇದನ್ನು ಸೇವಿಸಬಾರದು. ಒಂದು ವೇಳೆ ತಿನ್ನಬೇಕು ಎಂದೆನಿಸಿದರೆ, ಸಕ್ಕರೆ ಪ್ರಮಾಣ ಕಡಿಮೆಯಿರುವ ಬಾಳೆಹಣ್ಣನ್ನು ತಿನ್ನಿರಿ.
ಕಿಡ್ನಿ ಸಮಸ್ಯೆ: ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ. ಇದು ಮೂತ್ರಪಿಂಡದ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಹಾನಿಕಾರಕವಾಗಿದೆ. ದೇಹದಿಂದ ಹೆಚ್ಚುವರಿ ಪೊಟ್ಯಾಸಿಯಮ್ ಅನ್ನು ಹೊರಹಾಕಲು ಕಷ್ಟವಾಗುವ ಜನರು ಬಾಳೆಹಣ್ಣನ್ನು ಸೇವಿಸಬಾರದು.
ಮಲಬದ್ಧತೆ: ವಾಯು ಮತ್ತು ಮಲಬದ್ಧತೆಯ ಸಮಸ್ಯೆ ಹೊಂದಿರುವ ಜನರು ಬಾಳೆಹಣ್ಣಿನ ಸೇವನೆಯನ್ನು ತಪ್ಪಿಸಬೇಕು. ಬಾಳೆಹಣ್ಣು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುವ ಬದಲು ಹೆಚ್ಚು ಮಾಡಬಹುದು
ಅಲರ್ಜಿ: ಅಲರ್ಜಿ ಇರುವವರು ಬಾಳೆಹಣ್ಣನ್ನು ಸಂಪೂರ್ಣವಾಗಿ ತ್ಯಜಿಸಬೇಕು. ತಿಂದರೆ ಊತ, ಉಸಿರಾಟದ ತೊಂದರೆ ಮತ್ತು ಅನಾಫಿಲ್ಯಾಕ್ಸಿಸ್ನಂತಹ ತೀವ್ರವಾದ ರೋಗಲಕ್ಷಣಗಳನ್ನು ಉಂಟುಮಾಡಬಹುದು.
ಉಬ್ಬಸ: ಅಸ್ತಮಾ ರೋಗಿಗಳು ಬಾಳೆಹಣ್ಣನ್ನು ತಿನ್ನಬಾರದು. ಏಕೆಂದರೆ ಅವರ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)