ಈ ಐದು ರಾಶಿಯವರ ಮನೆಯಲ್ಲಿ ತುಂಬಿ ತುಳುಕುವುದು ಹಣ, ಬುಧ ಕರುಣಿಸಲಿದ್ದಾನೆ ಅದೃಷ್ಟ

ಅಕ್ಟೋಬರ್ 2 ರಂದು, ಬುಧ ಕನ್ಯಾರಾಶಿಯಲ್ಲಿಯೇ ನೇರ ನಡೆ ಆರಂಭಿಸಲಿದ್ದಾನೆ

ಬೆಂಗಳೂರು : ಬುಧ ಗ್ರಹವು ಬುದ್ಧಿವಂತಿಕೆ, ಸಂಪತ್ತು, ವ್ಯವಹಾರದ ಅಂಶವಾಗಿದೆ.  ಪ್ರಸ್ತುತ ಬುಧ ಕನ್ಯಾರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದೆ. ಅಕ್ಟೋಬರ್ 2 ರಂದು, ಬುಧ ಕನ್ಯಾರಾಶಿಯಲ್ಲಿಯೇ ನೇರ ನಡೆ ಆರಂಭಿಸಲಿದ್ದಾನೆ. ಇದರ ನಂತರ ಅಕ್ಟೋಬರ್ 3 ರಂದು ಮಹಾ ಅಷ್ಟಮಿ, ಅಕ್ಟೋಬರ್ 4 ರಂದು ಮಹಾ ನವಮಿ ಮತ್ತು ಅಕ್ಟೋಬರ್ 5 ರಂದು ದಸರಾ. ನವರಾತ್ರಿಯಲ್ಲಿ ಬುಧ ಗ್ರಹದ ಸಂಚಾರವು 5 ರಾಶಿಚಕ್ರದ ಜನರ ಅದೃಷ್ಟವನ್ನು ಬೆಳಗಿಸುತ್ತದೆ. ಈ ಜನರು ವೃತ್ತಿಯಲ್ಲಿ ಹೊಸ ಅವಕಾಶಗಳನ್ನು ಹಣವನ್ನು ಪಡೆಯುತ್ತಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೇಷ ರಾಶಿ : ಬುಧದ ಮಾರ್ಗವು ಮೇಷ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ಜನರ ವೃತ್ತಿ ಜೀವನದಲ್ಲಿ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಬಡ್ತಿ ಸಿಗುವ, ವೇತನ ಹೆಚ್ಚಳದ ಪ್ರಬಲ ಅವಕಾಶಗಳಿವೆ. ಹೊಸ ಉದ್ಯೋಗಾವಕಾಶ ದೊರೆಯಲಿದೆ. ಉದ್ಯೋಗ, ವ್ಯವಹಾರದಲ್ಲಿ ಇದ್ದ ಸಮಸ್ಯೆಗಳು ಈಗ ಕೊನೆಗೊಳ್ಳಲಿವೆ .   

2 /5

ವೃಷಭ ರಾಶಿ : ಕನ್ಯಾರಾಶಿಯಲ್ಲಿ ಬುಧದ ನೇರ ಚಲನೆಯು ವೃಷಭ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಅವರು ಹಠಾತ್ ಹಣಕಾಸಿನ ಲಾಭವನ್ನು ಪಡೆಯುತ್ತಾರೆ. ಆದಾಯ ಹೆಚ್ಚಲಿದೆ. ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ.  ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಯಶಸ್ಸು ಸಿಗಲಿದೆ. 

3 /5

ಕನ್ಯಾ ರಾಶಿ - ಕನ್ಯಾ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ವೃತ್ತಿಯಲ್ಲಿ ಸಾಧನೆಯ  ಉತ್ತುಂಗಕ್ಕೆ ಏರಬಹುದು. ಗೌರವ ಹೆಚ್ಚಾಗಲಿದೆ. ಹಳೆಯ ರೋಗಗಳಿಂದ ಮುಕ್ತಿ ಸಿಗಲಿದೆ. ಪೋಷಕರ ಆರೋಗ್ಯವೂ ಉತ್ತಮವಾಗಿರುತ್ತದೆ.   

4 /5

ವೃಶ್ಚಿಕ ರಾಶಿ - ಬುಧಗ್ರಹದ ನೇರ ಸಂಚಾರವು ವೃಶ್ಚಿಕ ರಾಶಿಯವರಿಗೆ ಆರ್ಥಿಕ ಲಾಭ ತರಲಿದೆ. ವ್ಯಾಪಾರದಲ್ಲಿ ವಿಶೇಷ ಲಾಭಗಳಿರುತ್ತವೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಈ ಸಮಯವು ಉತ್ತಮ ಪರಿಹಾರವನ್ನು ನೀಡುತ್ತದೆ.

5 /5

ಮಕರ ರಾಶಿ - ಬುಧಣ ಸಂಚಾರವು ಮಕರ ರಾಶಿಯವರ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭವನ್ನು ನೀಡಲಿದ್ದಾನೆ. ಈ ಸಮಯವು ಉದ್ಯೋಗಾಕಾಂಕ್ಷಿಗಳಿಗೂ  ಶುಭ ಫಲ ನೀಡುತ್ತದೆ. ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ಸಿಗಬಹುದು.   ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)