ಯಾವ ವಿಚಾರಕ್ಕೂ ತಲೆಕೆಡಿಸಿಕೊಳ್ಳುವುದೇ ಇಲ್ಲ ಈ ರಾಶಿಯವರು

 ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳನ್ನು ಹೊಂದಿರುವ ಜನರು ಅಂತಹ ಸ್ವಭಾವವನ್ನು ಸ್ವಾಭಾವಿಕವಾಗಿ ಪಡೆದಿರುತ್ತಾರೆ. ಇವರಿ ಎಂಥಹ ಸಂದರ್ಭವೇ ಬರಲಿ ಶಾಂತರಾಗಿರುತ್ತಾರೆ.

ನವದೆಹಲಿ : ಕೆಲವರನ್ನು ಭೇಟಿಯಾದ ಕೂಡಲೇ ಏನೋ ಒಂದು ತರಹ ಉಲ್ಲಾಸವಿರುತ್ತದೆ. ಅದೇ ಇನ್ನು ಕೆಲವರನ್ನು ಭೇಟಿಯಾದಾಗ ವಿರುದ್ಧ ಬಾವನೆ ಮೂಡುತ್ತದೆ. ಇದರ ಹಿಂದಿನ ಮುಖ್ಯ ಕಾರಣ ವ್ಯಕ್ತಿಯ ವರ್ತನೆಯೇ ಆಗಿರುತ್ತದೆ. ಶಾಂತ, ಸಂತೋಷ ಸ್ವಭಾವದ ಜನರು ಎಲ್ಲರಿಗೂ ಇಷ್ಟವಾಗುತ್ತಾರೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳನ್ನು ಹೊಂದಿರುವ ಜನರು ಅಂತಹ ಸ್ವಭಾವವನ್ನು ಸ್ವಾಭಾವಿಕವಾಗಿ ಪಡೆದಿರುತ್ತಾರೆ. ಇವರಿ ಎಂಥಹ ಸಂದರ್ಭವೇ ಬರಲಿ ಶಾಂತರಾಗಿರುತ್ತಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಜ್ಯೋತಿಷ್ಯದ ಪ್ರಕಾರ, ಎಲ್ಲಾ 12 ರಾಶಿಗಳಲ್ಲಿ ಅತಿ ಹೆಚ್ಚು ಶಾಂತ ಸ್ವಭಾವದವರೆಂದರೆ ಕರ್ಕಾಟಕ ರಾಶಿಯವರು. ಈ ರಾಶಿಯವರಿಗೆ ಕೋಪ ಬರುವುದು ಬಹಳ ಕಡಿಮೆ. ಇವರನ್ನು ಬಹಳಷ್ಟು ಜನ ಇಷ್ಟಪಡುತ್ತಾರೆ. 

2 /5

ಕನ್ಯಾ ರಾಶಿಯವರೂ ತುಂಬಾ ಸೌಮ್ಯವಾಗಿರುತ್ತಾರೆ. ಅವರು ಬುದ್ಧಿವಂತರು ಮತ್ತು ಬಹಳ ಚಿಂತನಶೀಲವಾಗಿ ಪ್ರತಿಕ್ರಿಯಿಸುತ್ತಾರೆ. ಎಂದಾದರೂ ಕೋಪಗೊಂಡರೂ ಬಹಳ ಬೇಗನೇ ಶಾಂತರಾಗುತ್ತಾರೆ. 

3 /5

ತುಲಾ ರಾಶಿಯವರು ಕೂಡ ಸಾಮಾನ್ಯವಾಗಿ ಯಾವುದೇ ವಿಸಯಗಳಿಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ನಡವಳಿಕೆಯು ತುಂಬಾ ಸಮತೋಲಿತವಾಗಿರುತ್ತದೆ. ಗೊಂದಲಗಳನ್ನು ಮೈಮೇಲೆ ಎಳೆದುಕೊಳ್ಳಲು ಹೋಗುವುದೇ ಇಲ್ಲ ಇವರು.

4 /5

ಕುಂಭ ರಾಶಿಯವರು ತಮ್ಮ ತತ್ವಗಳನ್ನು ಅನುಸರಿಸುತ್ತಾರೆ ಮತ್ತು ಬಹಳ ಶಾಂತವಾಗಿರುತ್ತಾರೆ. ಈ ರಾಶಿಯವರು ಇತರರಿಗೆ ಸಹಾಯ ಮಾಡುತ್ತಾರೆ. ಅವರ ಶಾಂತ ಮತ್ತು ಸಹಕಾರ ಮನೋಭಾವ ಎಲ್ಲರಿಗೂ ಇಷ್ಟವಾಗುತ್ತದೆ. 

5 /5

ಮೀನ ರಾಶಿಯವರು ಇತರರ ನಡವಳಿಕೆಯಿಂದ ಅತೃಪ್ತರಾಗಿದ್ದರೂ ಸಹ ವ್ಯಕ್ತಪಡಿಸುವುದಿಲ್ಲ. ಸುಮ್ಮನಿದ್ದು ಬಿಡುತ್ತಾರೆ. ಎಂಥ ಸನ್ನಿವೇಶ ಬಂದರೂ ಸ್ಥಿರವಾಗಿರುತ್ತಾರೆ. ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹರಿಸಲು ಇಷ್ಟಪಡುತ್ತಾರೆ.