Tongue Colors: ನಾಲಿಗೆ ಬಣ್ಣ ನೋಡ್ಕೊಂಡ್ರೆ ಆರೋಗ್ಯ ಹೇಗಿದೆ ಅಂತಾ ಗೊತ್ತಾಗುತ್ತೆ? ಯಾವ ಬಣ್ಣ ಏನು ಸೂಚಿಸುತ್ತೆ ಗೊತ್ತಾ?

Tongue Colors: ಆಹಾರದ ರುಚಿ ತಿಳಿಸುವ ನಾಲಿಗೆ ನಿಮ್ಮ ಆರೋಗ್ಯದ ಸ್ಥಿತಿಯನ್ನೂ ತಿಳಿಸುತ್ತೆ. ಅದು ಹೇಗೆ ಗೊತ್ತಾ? 

Tongue Colors: ಮಾನವನ ಅಂಗಗಳಲ್ಲಿ ನಾಲಿಗೆ ಬಹಳ ಮುಖ್ಯವಾದ ಅಂಗ. ಬ್ರಷ್ ಮಾಡುವಾಗ ಬಿಟ್ಟರೆ ನಾವು ಅದರ ಬಗ್ಗೆ ಯೋಚಿಸುವುದೇ ಇಲ್ಲ. ಆಹಾರದ ರುಚಿಯನ್ನು ತಿಳಿಸುವ ನಾಲಿಗೆ ನಮ್ಮ ಆರೋಗ್ಯದ ಬಗ್ಗೆಯೂ ಮಾಹಿತಿ ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /10

ಸಾಮಾನ್ಯವಾಗಿ ಏನೇ ಆರೋಗ್ಯ ಸಮಸ್ಯೆ ಇದ್ದಾಗಲೂ ವೈದ್ಯರ ಬಳಿ ಹೋದಾಗ ಅವರು ಮೊದಲು ನಾಲಿಗೆ ತೋರಿಸುವಂತೆ ಕೇಳುತ್ತಾರೆ. ಅಷ್ಟಕ್ಕೂ ಇದಕ್ಕೆ ಪ್ರಮುಖ ಕಾರಣ ನಾಲಿಗೆಯ ಬಣ್ಣವೇ ನಿಮ್ಮ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. ಹಾಗಿದ್ದರೆ, ಯಾವ ಬಣ್ಣದ ನಾಲಿಗೆ ಏನು ಸೂಚಿಸುತ್ತದೆ ಎಂದು ತಿಳಿಯೋಣ. 

2 /10

ನಾಲಿಗೆ ಪಿಂಕ್ ಅಥವಾ ಗುಲಾಬಿ ಬಣ್ಣದಲ್ಲಿದ್ದರೆ ಅದು ನೀವು ಆರೋಗ್ಯವಾಗಿದ್ದೀರಿ. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದರ್ಥ. 

3 /10

ಬಿಳಿ ನಾಳಿಗೆಯು ಅಜೀರ್ಣದ ಸಮಸ್ಯೆಗಳು ಹಾಗೂ ದೇಹದಲ್ಲಿ ಹಿಮೋಗ್ಲೋಬಿನ್ ಎಂದರೆ ರಕ್ತ ಕಡಿಮೆ ಇದೆ ಎಂಬುದನ್ನು ಸೂಚಿಸುತ್ತದೆ. 

4 /10

ನಾಲಿಗೆ ಹಳದಿ ಬಣ್ಣದಲ್ಲಿದ್ದರೆ ಇದು ವೈರಲ್ ಇನ್ಫೆಕ್ಷನ್ ಅನ್ನು ಸೂಚಿಸುತ್ತದೆ. ಆದರೆ, ಹಳದಿ ಬಣ್ಣ ಗಾಢವಾಗಿದ್ದರೆ ಇದು ಜಾಂಡಿಸ್ ಸಮಸ್ಯೆಯ ಎಚ್ಚರಿಕೆಯ ಗಂಟೆಯೂ ಆಗಿರಬಹುದು. 

5 /10

ನಾಲಿಗೆ ಕೆಂಪು ಬಣ್ಣದಲ್ಲಿದ್ದರೆ ದೇಹದಲ್ಲಿ ವಿಟಮಿನ್ ಬಿ ಕೊರತೆಯಿದೆ ಎಂದರ್ಥ. 

6 /10

ನಾಲಿಗೆ ಪರ್ಪಲ್ ಎಂದರೆ ನೇರಳೆ ಬಣ್ಣದಲ್ಲಿದ್ದರೆ ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ಆಗುತ್ತಿಲ್ಲ. ಹೃದಯ ಸಂಬಂಧಿತ ಸಮಸ್ಯೆಗಳಿರಬಹುದು ಎಂಬುದನ್ನೂ ಸೂಚಿಸುತ್ತದೆ. 

7 /10

ನಾಲಿಗೆ ನೀಲಿ ಬಣ್ಣದಲ್ಲಿ ಇದ್ದರೆ ರಕ್ತದಲ್ಲಿ ಆಕ್ಸಿಜನ್ ಕಡಿಮೆ ಇದ್ದು, ಕಿಡ್ನಿ ಸಂಬಂಧಿತ ಸಮಸ್ಯೆಗಳಿರಬಹುದು ಎಂಬುದರ ಸಂಕೇತ. 

8 /10

ಫಂಗಲ್ ಸೋಂಕು ಹೆಚ್ಚಾದಾಗ ನಾಲಿಗೆಯು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕೆಲವು ಸಮಯದಲ್ಲಿ ಇದು ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವೂ ಆಗಿರಬಹುದು. 

9 /10

ಹೆಚ್ಚು ಟೀ-ಕಾಫಿ ಕುಡಿಯುವವರ ನಾಲಿಗೆ ಕಂದು ಬಣ್ಣದಲ್ಲಿರುತ್ತದೆ. ಅಷ್ಟೇ ಅಲ್ಲ, ಅತಿಯಾಗಿ ಧೂಮಪಾನ ಮಾಡುವವರಲ್ಲಿಯೂ ನಾಲಿಗೆ ಬಣ್ಣ ಕಂದಾಗಿರುತ್ತದೆ. 

10 /10

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.