Luana Alonso : ಪರಾಗ್ವೆ ಈಜುಗಾರ್ತಿ ಲುವಾನಾ ಅಲೋನ್ಸೊರನ್ನ ಪ್ಯಾರಿಸ್ ಒಲಿಂಪಿಕ್ಸ್ 2024 ನಿಂದ ಹೊರ ಹಾಕಲಾಗಿದೆ. ಅಷ್ಟಕ್ಕೂ ಈ ಸುಂದರಿ ಆಟದಲ್ಲಿ ಯಾವುದೇ ಅನರ್ಹತೆ ಹೊಂದಿಲ್ಲ, ಅದರೇ.. ಈಕೆಯನ್ನ ನಿಭಾಯಿಸುವುದೇ ಒಲಿಂಪಿಕ್ಸ್ ಕಮೀಟಿಗೆ ದೊಡ್ಡ ತಲೆನೋವಾಗಿತ್ತಂತೆ.. ಅಷ್ಟಕ್ಕೂ ಆಗಿದ್ದೇನು..? ಬನ್ನಿ ತಿಳಿಯೋಣ..
ಲುವಾನಾ ಅಲೋನ್ಸೊಗೆ ಪ್ಯಾರಿಸ್ ಒಲಿಂಪಿಕ್ಸ್ 2024 ನಿಂದ ಗೇಟ್ ಪಾಸ್ ನೀಡಲಾಗಿದೆ.. ಈಕೆಯ ಸೌಂದರ್ಯ ತನ್ನದೇ ತಂಡದಲ್ಲಿನ ಆಟಗಾರು ತಬ್ಬಿಬ್ಬುಗೊಳಿಸುತ್ತಿದೆ ಎಂಬ ವರದಿಗಳಿವೆ..
ʼಅನುಚಿತʼ ನಡವಳಿಕೆಗಾಗಿ 20 ವರ್ಷದ ಲುವಾನಾ ಅಲೋನ್ಸೊಗೆ ಒಲಿಂಪಿಕ್ ತೊರೆಯುವಂತೆ ಕಮೀಟಿ ನಿರ್ದೇಶನ ನೀಡಿದೆ ಎನ್ನಲಾಗಿದೆ.. ಈಕೆ 100 ಮೀಟರ್ ಬಟರ್‌ಫ್ಲೈ ಸ್ಪರ್ಧೆಯ ಸೆಮಿಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು.
ಒಲಿಂಪಿಕ್ಸ್‌ನಿಂದ ಈ ಸುಂದರಿಗೆ ಗೇಟ್ ಪಾಸ್ ನೀಡಲು ಆಟದಲ್ಲಿನ ವಿಫಲತೆ ಕಾರಣವಲ್ಲ, ತನ್ನ ನಡವಳಿಕೆಯಿಂದ ಹೊರ ಹೋಗಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ನಿಖರವಾದ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ,
ಕೆಲವು ವರದಿಗಳ ಪ್ರಕಾರ, ಈಕೆ ಇತರ ಕ್ರೀಡಾಪಟುಗಳೊಂದಿಗೆ ಬೆರೆಯುತ್ತಿದ್ದಳು ಮತ್ತು ಕಡಿಮೆ ಬಟ್ಟೆಗಳನ್ನು ಧರಿಸುತ್ತಿದ್ದಳು ಎಂದು ಹೇಳಲಾಗಿದೆ. ಇದು ಅಲ್ಲದೆ, ಒಲಿಂಪಿಕ್ಸ್ ವಿಲೇಜ್‌ನಲ್ಲಿ ಉಳಿದುಕೊಂಡಿದ್ದಾಗ ಡಿಸ್ನಿಲ್ಯಾಂಡ್‌ಗೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ..
ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಲೋನ್ಸೊ, "ನನ್ನನ್ನು ಒಲಿಂಪಿಕ್ಸ್‌ನಿಂದ ಹೊರಹಾಕಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ, ದಯವಿಟ್ಟು ಸುಳ್ಳು ಮಾಹಿತಿಯನ್ನು ಹರಡುವುದನ್ನು ನಿಲ್ಲಿಸಿ. ಈ ಕುರಿತು ನಾನು ಯಾವುದೇ ಹೇಳಿಕೆಯನ್ನ ನೀಡಲು ಬಯಸುವುದಿಲ್ಲ. ಆದರೆ ಈ ಸುಳ್ಳುಗಳು ನನ್ನ ಮೇಲೆ ಪರಿಣಾಮ ಬೀರಲು ನಾನು ಬಿಡುವುದಿಲ್ಲʼʼ ಎಂದು ಹೇಳಿದ್ದಾರೆ..
ಈ ಘಟನೆ ಬೆನ್ನಲ್ಲೆ ಲುವಾನಾ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ʼನಾನು ನಿವೃತ್ತಿ ಹೊಂದುತ್ತಿದ್ದೇನೆ, ಬೆಂಬಲಕ್ಕಾಗಿ ಎಲ್ಲರಿಗೂ ತುಂಬಾ ಧನ್ಯವಾದಗಳು! ಕ್ಷಮಿಸಿ ಪರಾಗ್ವೆ.. ನಾನು ನಿಮಗೆ ಮಾತ್ರ ಧನ್ಯವಾದ ಹೇಳಬೇಕು..ʼ ಎಂದು ಬರೆದುಕೊಂಡಿದ್ದಾರೆ..