ಒಂದು ವರ್ಷದ ಬಳಿಕ ತನ್ನ ಸ್ವಂತ ರಾಶಿಯಲ್ಲಿ ಸೂರ್ಯನ ಪ್ರವೇಶ, ಈ ರಾಶಿಗಳಿಗೆ ಅಪಾರ ಧನಲಾಭ-ಉನ್ನತಿಯ ಯೋಗ!

Surya Sankranti In Simha 2023: ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಪರಿವರ್ತಿಸುತ್ತಾನೆ, ಹೀಗಿರುವಾಗ ಇದೀಗ ಒಂದು ವರ್ಷದ ಸುದೀರ್ಘ ಅವಧಿಯ ಬಳಿಕ ತನ್ನ ಸ್ವರಾಶಿಯಾಗಿರುವ ಸಿಂಹ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಸೂರ್ಯನ ಈ ಗೋಚರ ಹಲವು ರಾಶಿಗಳ ಜೀವನದಲ್ಲಿ ಒಳ್ಳೆಯ ದಿನಗಳನ್ನು ತರಲಿದೆ. ಆದರೆ ನಾಲ್ಕು ರಾಶಿಗಳ ಜಾತಕದವರ ಜೀವನದಲ್ಲಿ ಸೂರ್ಯನ ಈ ಗೋಚರ ಅಪಾರ ಧನಲಾಭ ನೀಡಲಿದ್ದು, ಇದರಿಂದ ಅವರ ಜೀವನದಲ್ಲಿ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
 

Sorya Gochar In Simha 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಸೂರ್ಯ ಪ್ರತಿ ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸೂರ್ಯನ ಈ ಗೋಚರವನ್ನು ಸೂರ್ಯ ಸಂಕ್ರಮಣ ಎಂದು ಕರೆಯಲಾಗುತ್ತದೆ. ಹೀಗಿರುವಾಗ ಆತ ಯಾವ ರಾಶಿಗೆ ಪ್ರವೇಶಿಸುತ್ತಾನೆ ಆ ರಾಶಿಯ ಹೆಸರು ಸಂಕ್ರಾಂತಿಯ ಜೊತೆಗೆ ಸೇರ್ಪಡೆಯಾಗುತ್ತದೆ. ಪ್ರಸ್ತುತ ಸೂರ್ಯ ಕರ್ಕ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಬರುವ ಆಗಸ್ಟ್ 17ರಂದು ಆತ ತನ್ನ ಸ್ವ ರಾಶಿಯಾಗಿರುವ ಸಿಂಹ ರಾಶಿಯಲ್ಲಿ ಪ್ರವೇಶಿಸಲಿದ್ದಾನೆ. ಒಂದು ವರ್ಷದ ಅವಧಿಯ ಬಳಿಕ ಸೂರ್ಯನ ಈ ಸಂಕ್ರಮಣ ನೆರವೇರಲಿದೆ. ಸೂರ್ಯನ ಈ ಗೋಚರದಿಂದ ಕೆಲ ರಾಶಿಗಳ ಜನರಿಗೆ ಧನ-ಸಂಪತ್ತು ಪ್ರಾಪ್ತಿಯಾಗುವುದರ ಜೊತೆಗೆ ಸಮಾಜದಲ್ಲಿ ಸ್ಥಾನಮಾನ ಪ್ರಾಪ್ತಿಯಾಗಲಿದೆ. ಬನ್ನಿ ಸೂರ್ಯನ ಈ ಗೋಚಾರದಿಂದ ಯಾವ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ. 

 

ಇದನ್ನೂ ಓದಿ-Mercury-Venus Conjunction: ಆಗಸ್ಟ್ 7ರವರೆಗೆ 5 ರಾಶಿಗಳ ಮೇಲೆ ಬುಧ-ಶುಕ್ರ ದೆಸೆಯಿಂದ ಅಪಾರ ಧನವೃಷ್ಟಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮಿಥುನ ರಾಶಿ: ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಸೂರ್ಯನ ಈ ಸಂಕ್ರಮಣ ನೆರವೇರಲಿದೆ. ಇದರಿಂದ ನಿಮಗೆ ವಿಶೇಷ ಲಾಭ ಸಿಗಲಿದೆ. ನೌಕರ ವರ್ಗದ ಜನರ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಪದೋನ್ನತಿಯ ಎಲ್ಲಾ ಸಾಧ್ಯತೆಗಳಿವೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸಗಳು ಪುನಃ ಆರಂಭಗೊಳ್ಳಲಿವೆ. ಕುಟುಂಬ ಹಾಗೂ ಬಂಧುಮಿತ್ರರ ಜೊತೆಗೆ ಒಂದು ಅವಿಸ್ಮರಣೀಯ ಯಾತ್ರೆ ಜರುಗುವ ಎಲ್ಲಾ ಸಾಧ್ಯತೆಗಳಿವೆ.  

2 /5

ಕರ್ಕ ರಾಶಿ: ನಿಮ್ಮ ಗೋಚರ ಜಾತಕದ ದ್ವಿತೀಯ ಭಾವದಲ್ಲಿ ಸೂರ್ಯನ ಈ ಸಂಕ್ರಮಣ ನೆರವರುತ್ತಿದೆ. ಸಾಮಾನ್ಯವಾಗಿ ಜೋತಿಷ್ಯದಲ್ಲಿ ಈ ಭಾವವನ್ನು ಉಳಿತಾಯ, ಮಾತು ಹಾಗೂ ಕೌಟುಂಬಿಕ ಭಾವ ಎಂದು ಭಾವಿಸಲಾಗುತ್ತದೆ. ಹೀಗಿರುವಾಗ ನಿಮಗೆ ಆಕಷ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ನೌಕರ ವರ್ಗದ ಜನರ ಜೀವನದಲ್ಲಿ ಖುಷಿಗಳ ಆಗಮನವಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ ಹಾಗೂ ಅವರ ಬೆಂಬಲ ನಿಮಗೆ ಸಿಗಲಿದೆ. ಆದರೆ ಮಾತು ಹಾಗೂ ವ್ಯವಹಾರದ ಮೇಲೆ ಹಿಡಿತವಿರಲಿದೆ. ಸಂಬಂಧ ಹಾಳುಮಾಡಬಹುದು.   

3 /5

ಸಿಂಹ ರಾಶಿ: ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಸೂರ್ಯನ ಈ ಗೋಚರ ನೆರವೇರುತ್ತಿದೆ. ಸೂರ್ಯ ನಿಮ್ಮ ರಾಶಿಗೆ ರಾಶ್ಯಾಧಿಪನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಉತ್ತಮ ಆರೋಗ್ಯ, ಶಕ್ತಿ, ಆತ್ಮವಿಶ್ವಾಸ ಲಭಿಸಲಿದೆ. ನೀವು ನಿಮ್ಮ ಕೆಲಸದ ಆಧಾರದ ಮೇಲೆ ಯಶಸ್ಸನ್ನು ಸಂಪಾದಿಸುವಿರಿ. ಹೊಸ ಅವಕಾಶಗಳೂ ಕೂಡ ಒದಗಿ ಬರಲಿವೆ ಮತ್ತು ಆದಷ್ಟು ಅವುಗಳನ್ನು ಹಿಡಿದಿಟ್ಟುಕೂಳಲು ಪ್ರಯತ್ನಿಸಿ. ಆರೋಗ್ಯ ಉತ್ತಮವಾಗಿರಲಿದೆ. ಬೇರೆಯವರ ಸಹಾಯಕ್ಕೆ ಇಳಿದು ನೀವು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿವಿರಿ.   

4 /5

ತುಲಾ ರಾಶಿ: ಸೂರ್ಯ ಸಂಕ್ರಾಂತಿ ತುಲಾ ರಾಶಿಯವರ ಜಾತಕದ ಏಕಾದಶ ಭಾವದಲ್ಲಿ ನೆರವೇರುತ್ತಿದೆ. ಸಾಮಾನ್ಯವಾಗಿ ಈ ಭಾವವನ್ನು ಧನ ಲಾಭ, ತಂದೆ, ಕುಟುಂಬದ ಇತರ ಸದಸ್ಯರಿಗೆ ಸಂಬಂಧಿಸಿದೆ. ಹೀಗಿರುವಾಗ ಸೂರ್ಯನ ಈ ಸಿಂಹ ಸಂಕ್ರಮಣ ನಿಮ್ಮ ಪಾಲಿಗೆ ಅತ್ಯಂತ ಲಾಭಕಾರಿ ಸಿದ್ಧ ಸಾಬೀತಾಗಲಿದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸ ಕಾರ್ಯಗಳಿಗೆ ಮತ್ತೆ ಗತಿ ಸಿಗಲಿದೆ. ನಿಮ್ಮ ಕಠಿಣ ಪರಿಶ್ರಮ ತಕ್ಕ ಪ್ರತಿಫಲ ನೀಡಲಿದೆ. ಬಿಸ್ನೆಸ್ ನಲ್ಲಿ ಅಪಾರ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಹಾಗೂ ಮಕ್ಕಳ ಜೊತೆಗೆ ಉತ್ತಮ ಕಾಲ ಕಳೆಯುವಿರಿ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)