Surya Grahana 2022: ಈ ರಾಶಿಗಳ ಜನರಿಗೆ ಅತ್ಯಂತ ಶುಭವಾಗಿದೆ ಸೂರ್ಯ ಗ್ರಹಣ, ಅಪಾರ ಧನವೃಷ್ಟಿ

Solar Eclipse April 2022: ಧರ್ಮ, ಜ್ಯೋತಿಷ್ಯ ಹಾಗೂ ಖಗೋಳದ ದೃಷ್ಟಿಯಿಂದ ಸೂರ್ಯಗ್ರಹಣ ಒಂದು ಪ್ರಮುಖ ಘಟನೆ ಎಂದೇ ಹೇಳಲಾಗುತ್ತದೆ. ಧರ್ಮಶಾಸ್ತ್ರಗಳ ಪ್ರಕಾರ ಗ್ರಹಣದ ಅವಧಿಯಲ್ಲಿ ಯಾವದೇ ರೀತಿಯ ಶುಭಕಾರ್ಯಗಳನ್ನು  ಮಾಡಲಾಗುವುದಿಲ್ಲ.  

Solar Eclipse April 2022: ಧರ್ಮ, ಜ್ಯೋತಿಷ್ಯ ಹಾಗೂ ಖಗೋಳದ ದೃಷ್ಟಿಯಿಂದ ಸೂರ್ಯಗ್ರಹಣ ಒಂದು ದೊಡ್ಡ ಘಟನೆ ಎಂದೇ ಹೇಳಲಾಗುತ್ತದೆ. ಧರ್ಮಶಾಸ್ತ್ರಗಳ ಪ್ರಕಾರ ಗ್ರಹಣದ ಅವಧಿಯಲ್ಲಿ ಯಾವುದೇ ರೀತಿಯ ಶುಭಕಾರ್ಯಗಳನ್ನು ಮಾಡಲಾಗುವುದಿಲ್ಲ. ಅಷ್ಟೇ ಅಲ್ಲ ಆಹಾರ-ಪಾನೀಯಗಳನ್ನು ಕೂಡ ಸೇವಿಸಲಾಗುವುದಿಲ್ಲ. ದೇವಸ್ಥಾನಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಜೋತಿಷ್ಯ ಶಾಸ್ತ್ರದ (Astrology) ಪ್ರಕಾರ ಗ್ರಹಣ ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ ಎನ್ನಲಾಗಿದೆ. ಏಪ್ರಿಲ್ 30ರಂದು ಸಂಭವಿಸಲಿರುವ (Surya Grahaha 2022 Date) ವರ್ಷ 2022ನೇ ಸಾಲಿನ ಮೊದಲ ಗ್ರಹಣದ ಪ್ರಭಾವ ಕೂಡ ಎಲ್ಲಾ ಜಾತಕದವರ (Zodiac Signs) ಮೇಲೆ ಇರಲಿದೆ. ಆದರೆ, ಈ ಕೆಳಗೆ ನೀಡಲಾಗಿರುವ ಐದು ರಾಶಿಗಳ ಮೇಲೆ ಗ್ರಹಣ (Surya Grahana) ಅತ್ಯಂತ ಶುಭ ಪರಿಣಾಮಗಳನ್ನು ನೀಡಲಿದೆ.

 

ಇದನ್ನೂ ಓದಿ-Hanuman Jayanti 2022: ಈ ರೀತಿ ಹನುಮನನ್ನು ಪೂಜಿಸಿದರೆ ಶನಿ ದೋಷದಿಂದ ಕೂಡ ಮುಕ್ತಿ ಸಿಗುತ್ತದೆ

 

(Declaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಮೇಷ ರಾಶಿ  - ಮೇಷ ರಾಶಿಯ ಜಾತಕದವರಿಗೆ ವರ್ಷದ ಮೊಟ್ಟಮೊದಲ ಸೂರ್ಯಗ್ರಹಣ ಹಲವು ಲಾಭಗಳನ್ನು ಹೊತ್ತು ತರಲಿದೆ.ಕೆಲಸ ಕಾರ್ಯಗಳಲ್ಲಿ ಬಡ್ತಿಯ ಯೋಗವಿದೆ. ಧನಲಾಭ ಉಂಟಾಗಲಿದೆ. ಧರ್ಮದಲ್ಲಿ ಅಭಿರುಚಿ ಹೆಚ್ಚಾಗಲಿದೆ.

2 /5

2. ವೃಷಭ ರಾಶಿ - ಈ ಸೂರ್ಯಗ್ರಹಣ ವೃಷಭ ಜಾತಕದ ಜನರ ವೃತ್ತಿಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಲಿದೆ. ನೀವು ಬಯಸುವ ನೌಕರಿ ಭಾಗ್ಯ ನಿಮ್ಮದಾಗುವ ಎಲ್ಲಾ ಸಾಧ್ಯತೆಗಳಿವೆ. ಹಲವು ಕಡೆಗಳಿಂದ ಧನಾಗಮನವಾಗಲಿದೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭ ಸಿಗಲಿದೆ.

3 /5

3. ವೃಶ್ಚಿಕ ರಾಶಿ - ಏಪ್ರಿಲ್ 30ರ ಬಳಿಕ ವೃಶ್ಚಿಕ ಜಾತಕದವರಿಗೆ ಅಪಾರ ಧನಲಾಭ ಪ್ರಾಪ್ತಿಯಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವರ್ಕ್ ಪ್ಲೇಸ್ ನಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯಾಪಾರದಲ್ಲಿ ಲಾಭ ನಿಮ್ಮದಾಗಲಿದೆ.

4 /5

4. ಧನು ರಾಶಿ - ಧನು ರಾಶಿಯ ಜಾತಕದವರಿಗೆ ಈ ಸಮಯ ವರದಾನ ಸಾಬೀತಾಗಲಿದೆ. ಬಡ್ತಿ-ಹಣಕಾಸು, ಮಾನ-ಸನ್ಮಾನಗಳು ಪ್ರಾಪ್ತಿಯಾಗಲಿವೆ. ಹೂಡಿಕೆಗಾಗಿ ಈ ಸಮಯ ಉತ್ತಮವಾಗಿರಲಿದೆ.

5 /5

5. ಮಕರ ರಾಶಿ -  ಮಕರ ರಾಶಿಯ ಜಾತಕದವರಿಗೆ ಸೂರ್ಯ ಗ್ರಹಣ ಲಾಭ ತರಲಿದೆ. ನೌಕರಿಯಲ್ಲಿ ಪದೋನ್ನತಿ ಪ್ರಾಪ್ತಿಯಾಗಲಿದೆ. ವ್ಯಾಪಾರಿಗಳಿಗೆ ಸಕತ್ ಲಾಭ ಸಿಗಲಿದೆ. ಧನಲಾಭದ ಜೊತೆಗೆ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ.