Surya Rashi Parivartane: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯ ದೇವನು ನಾಳೆ ಎಂದರೆ ಅಕ್ಟೋಬರ್ 17, 2023ರಂದು ರಾಶಿ ಪರಿವರ್ತನೆ ಹೊಂದಲಿದ್ದಾನೆ. ಇದರ ಪರಿಣಾಮ ನಿಮ್ಮ ಮೇಲೆ ಹೇಗೆ ಕಂಡು ಬರಲಿದೆ ಎಂದು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಗ್ರಹಗಳ ರಾಜ ಸೂರ್ಯ ಅಕ್ಟೋಬರ್ 17, 2023ರಂದು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ನಾಳೆ ಮಧ್ಯರಾತ್ರಿ 01:29ರ ಸುಮಾರಿಗೆ ತುಲಾ ರಾಶಿಯನ್ನು ಪ್ರವೇಶಿಯಲಿರುವ ಸೂರ್ಯ ಮುಂದಿನ ಒಂದು ತಿಂಗಳು ನವೆಂಬರ್ 16, 2023ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ತುಲಾ ರಾಶಿಯಲ್ಲಿ ಸೂರ್ಯನ ಸಂಕ್ರಮಣ ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ ಎಂದು ತಿಳಿಯೋಣ...
ಸೂರ್ಯ ಸಂಚಾರವು ಮೇಷ ರಾಶಿಯವರಿಗೆ ದಾಂಪತ್ಯದಲ್ಲಿ ಬಿರುಕುಂಟುಮಾಡಬಹುದು. ಇದಲ್ಲದೆ, ಆರೋಗ್ಯವೂ ಕೈಕೊಡಬಹುದು ಹಾಗಾಗಿ, ಸ್ವಲ್ಪ ಎಚ್ಚರಿಕೆಯಿಂದ ಇರಿ.
ಸೂರ್ಯ ರಾಶಿ ಪರಿವರ್ತನೆ ವೃಷಭ ರಾಶಿಯವರಿಗೆ ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ. ಸ್ವಂತ ಉದ್ಯೋಗ ಮಾಡುವವರಿಗೆ ಅದೃಷ್ಟದ ಸಮಯ.
ಮಿಥುನ ರಾಶಿಯವರಿಗೆ ಸೂರ್ಯನ ಸಂಚಾರ ಶುಭ ಫಲಗಳನ್ನು ತರಲಿದೆ. ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ.
ಸೂರ್ಯ ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೆ ಅಷ್ಟು ಶುಭಕರವಲ್ಲ. ಆದಾಗ್ಯೂ, ಉದ್ಯೋಗ ಕ್ಷೇತ್ರದಲ್ಲಿ ನಿಮ್ಮನ್ನು ನೀವು ಸಾಬೀತುಪಡಿಸುವಿರಿ.
ಸೂರ್ಯ ರಾಶಿ ಬದಲಾವಣೆಯು ಸಿಂಹ ರಾಶಿಯವರಿಗೆ ಅಷ್ಟು ಉತ್ತಮವಾಗಿಲ್ಲ. ಈ ಸಮಯದಲ್ಲಿ ನಿಮ್ಮ ಕಿರಿಯ ಸಹೋದರನ ಆರೋಗ್ಯದ ಬಗ್ಗೆ ಗಮನಹರಿಸಿ.
ಸೂರ್ಯ ರಾಶಿ ಬದಲಾವಣೆಯ ಪರಿಣಾಮವಾಗಿ ಕನ್ಯಾ ರಾಶಿಯವರಿಗೆ ಪೂರ್ವಿಕಾರ ಆಸ್ತಿಯಿಂದ ಲಾಭವಾಗಲಿದೆ. ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಗಳಿಸುವರು.
ಸೂರ್ಯ ಸಂಚಾರವು ತುಲಾ ರಾಶಿಯವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ದೈಹಿಕ ನೋವಿನ ಬಗ್ಗೆ ಸದಾ ಜಾಗರೂಕರಾಗಿರಿ.
ಸೂರ್ಯ ಸಂಚಾರವು ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಗಳನ್ನು ತರಲಿದೆ. ಈ ಸಮಯದಲ್ಲಿ ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ.
ಧನು ರಾಶಿಯ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಈ ಸಮಯ ಅತ್ಯುತ್ತಮವಾಗಿದೆ. ನಿಮ್ಮ ಮನೆಯ ಹಿರಿಯರ ಆರೋಗ್ಯದ ಬಗ್ಗೆ ನಿಗಾವಹಿಸಿ.
ಮಕರ ರಾಶಿಯ ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಸೂರ್ಯ ಸಂಚಾರ ಶುಭ ಫಲಗಳನ್ನು ನೀಡಲಿದೆ. ಆಸ್ತಿ, ಭೂಮಿ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯಗಳು ಬಗೆಹರಿಯಲಿವೆ.
ಕುಂಭ ರಾಶಿಯವರಿಗೆ ಸೂರ್ಯ ಸಂಚಾರದ ಪ್ರಭಾವದಿಂದಾಗಿ ಹೊಸ ಜನರೊಂದಿಗೆ ಸಂವಹನ ಹೆಚ್ಚಾಗಲಿದೆ. ಅದೃಷ್ಟದ ಬೆಂಬಲವೂ ದೊರೆಯಲಿದೆ.
ಮೀನ ರಾಶಿಯವರಿಗೆ ಸೂರ್ಯ ಗೋಚಾರವನ್ನು ಶುಭ ಎಂದು ಹೇಳಲಾಗುವುದಿಲ್ಲ. ಆದಾಗ್ಯೂ, ಭೂಮಿ-ಆಸ್ತಿಗೆ ಸಂಬಂಧಿಸಿದ ಯಾವುದೇ ವ್ಯಾಜ್ಯಗಳಲ್ಲಿ ನೀವು ಜಯ ಸಾಧಿಸುವಿರಿ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.