Sun Transit In Sagitarius: ಮಂದ ಸೂರ್ಯನೂ ಕೂಡ ಭಾಗ್ಯ ಬೆಳಗುತ್ತಾನೆ, ಯಾವ ರಾಶಿಗಳ ಮೇಲೆ ಕೃಪಾವೃಷ್ಟಿ ತಿಳಿಯಲು ಲೇಖನ ಓದಿ

ನವದೆಹಲಿ: Surya Gochar - ನಿನ್ನೆ ಅಂದರೆ ಡಿಸೆಂಬರ್ 16, 2021 ರಂದು ಗ್ರಹಗಳ ರಾಜ ಸೂರ್ಯ ರಾಶಿಯನ್ನು(Sun Transit) ಬದಲಿಸಿ ಧನು ರಾಶಿಗೆ ಪ್ರವೇಶಿಸಿದ್ದಾನೆ. ಇದರೊಂದಿಗೆ ಖರ್ಮಾಸ್ ಆರಂಭವಾಗಿದ್ದು, ಇನ್ನು ಒಂದು ತಿಂಗಳ ಕಾಲ ಎಲ್ಲಾ ಶುಭ ಕಾರ್ಯಗಳು ನಿಷಿದ್ಧ.  ಧನು ರಾಶಿಯಲ್ಲಿ ಒಂದು ತಿಂಗಳು ತಂಗುವ ಸಮಯದಲ್ಲಿ, ಸೂರ್ಯನ ಪ್ರಖರತೆಯಲ್ಲಿ ಇಳಿಕೆಯಾಗಲಿದೆ.

ನವದೆಹಲಿ: Surya Gochar - ನಿನ್ನೆ ಅಂದರೆ ಡಿಸೆಂಬರ್ 16, 2021 ರಂದು ಗ್ರಹಗಳ ರಾಜ ಸೂರ್ಯ ರಾಶಿಯನ್ನು(Sun Transit) ಬದಲಿಸಿ ಧನು ರಾಶಿಗೆ ಪ್ರವೇಶಿಸಿದ್ದಾನೆ. ಇದರೊಂದಿಗೆ ಖರ್ಮಾಸ್ ಆರಂಭವಾಗಿದ್ದು, ಇನ್ನು ಒಂದು ತಿಂಗಳ ಕಾಲ ಎಲ್ಲಾ ಶುಭ ಕಾರ್ಯಗಳು ನಿಷಿದ್ಧ.  ಧನು ರಾಶಿಯಲ್ಲಿ (Zodiac Sign) ಒಂದು ತಿಂಗಳು ತಂಗುವ ಸಮಯದಲ್ಲಿ, ಸೂರ್ಯನ ಪ್ರಖರತೆಯಲ್ಲಿ ಇಳಿಕೆಯಾಗಲಿದೆ. ಹೀಗಾಗಿ ಆತ  ಕೆಟ್ಟ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತಾನೆ ಎದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಮಂದ ಸೂರ್ಯನೂ ಕೂಡ ಕೆಲ ರಾಶಿಗಳ (Lucky Zodiac Signs Of December 2021) ಜಾತಕ ಹೊಂದಿದವರ  ಭಾಗ್ಯ ಬೆಳಗಲಿದ್ದಾನೆ.  ಮುಂದಿನ ಒಂದು ತಿಂಗಳು ಯಾವ ರಾಶಿಗೆ ಈ ಸೂರ್ಯ ರಾಶಿ (Lucky Zodiac Of 2022) ಪರಿವರ್ತನೆ ಶುಭ ತರಲಿದೆ ತಿಳಿದುಕೊಳ್ಳೋಣ ಬನ್ನಿ.

 

(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ಓದಿ-Deepika Padukone: ಬ್ಯಾಕ್‌ಲೆಸ್ ಫ್ರಿಲ್ ಗೌನ್‌ನಲ್ಲಿ ದೀಪಿಕಾ ಪಡುಕೋಣೆ ಮನಮೋಹಕ ಲುಕ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇಷ - ಧನು ರಾಶಿಯ ಸೂರ್ಯನು ಮೇಷ ರಾಶಿಯವರಿಗೆ ಅದೃಷ್ಟವನ್ನು ಹೆಚ್ಚಿಸಲಿದ್ದಾನೆ. ಘನತೆ-ಗೌರವ ಹೆಚ್ಚಾಗಲಿದೆ. ಜ್ಞಾನ ವೃದ್ಧಿಯಾಗಲಿದೆ. ತಂದೆಯೊಂದಿಗಿನ ಸಂಬಂಧವು ಉತ್ತಮವಾಗಿರಲಿದೆ.

2 /5

ವೃಷಭ - ವೃಷಭ ರಾಶಿಯವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ದೂರಾಗಲಿದೆ.  ಗೃಹ ನಿರ್ಮಾಣದ ಕನಸು ನನಸಾಗಲಿದೆ. ಸೂರ್ಯನಿಗೆ ಅರ್ಘ್ಯ ಅರ್ಪಿಸುವುದರಿಂದ ಹೆಚ್ಚಿನ ಲಾಭ ಸಿಗಲಿದೆ.

3 /5

ಕರ್ಕ - ಧನು ರಾಶಿಯಲ್ಲಿ ವಾಸಿಸುತ್ತಿರುವ ಸೂರ್ಯ ಕರ್ಕ ರಾಶಿಯವರಿಗೆ ಪ್ರಯೋಜನವನ್ನು ನೀಡಲಿದ್ದಾನೆ. ಸಾಲದ ಹೊರೆಯಿಂದ ಮುಕ್ತಿ ಸಿಗಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.  ತಂದೆ ನೀಡಿರುವ ಸಲಹೆಗಳನ್ನು ಪಾಲಿಸುವುದರಿಂದ ನಿಮಗೆ ಲಾಭ ಸಿಗಲಿದೆ.

4 /5

ಸಿಂಹ - ಸಿಂಹ ರಾಶಿಯ ಜನರಲ್ಲಿ ಹೆಚ್ಚಿದ ಆತ್ಮವಿಶ್ವಾಸವು ಅವರಿಂದ ಎಂತಹ ದೊಡ್ಡ ಕೆಲಸವನ್ನಾದರೂ ಕೂಡ ಮಾಡಿಸಬಹುದು. ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ. ವ್ಯಕ್ತಿತ್ವ ಬೆಳಗಲಿದೆ. 

5 /5

ತುಲಾ - ತುಲಾ ರಾಶಿಯ ಜನರ ಸಾಮರ್ಥ್ಯ ಹೆಚ್ಚಾಗಲಿದೆ. ಧನ-ಲಾಭದ ಸಂಕೇತಗಳಿವೆ.  ಬಡ್ತಿ-ಗೌರವ ಹೆಚ್ಚಾಗಲಿದೆ. ಪ್ರಭಾವದ ವ್ಯಾಪ್ತಿ ಹೆಚ್ಚಾಗುತ್ತದೆ.