Sun Transit 2024: ಸೂರ್ಯನ ಸಂಚಾರದಿಂದ ಈ 3 ರಾಶಿಯವರ ಮೇಲೆ ಹಣದ ಸುರಿಮಳೆಯಾಗಲಿದೆ!

Sun Transit In Nakshatra 2024: ಸೂರ್ಯನು ಶನಿಯ ನಕ್ಷತ್ರಕ್ಕೆ ಸಂಚರಿಸುವಾಗ ಎಲ್ಲಾ ರಾಶಿಗಳ ಮೇಲೂ ಅದರ ಪ್ರಭಾವ ಕಂಡುಬರುತ್ತದೆ. ಈ ಪೈಕಿ ಕೆಲ ರಾಶಿಯವರಿಗೆ ಕಷ್ಟವಾಗಿದ್ದರೆ, ಇನ್ನೂ ಕೆಲವರಿಗೆ ಅದೃಷ್ಟವನ್ನು ನೀಡುತ್ತದೆ. ಸೂರ್ಯನ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಅನ್ನೋದರ ಬಗ್ಗೆ ತಿಳಿಯಿರಿ...

Sun Transit In Nakshatra 2024: ಜ್ಯೋತಿಷ್ಯದ ಪ್ರಕಾರ ನಿರ್ದಿಷ್ಟ ಸಮಯದಲ್ಲಿ ರಾಶಿ ಬದಲಾಯಿಸುವುದರ ಜೊತೆಗೆ ಗ್ರಹಗಳು ನಕ್ಷತ್ರಗಳನ್ನು ಸಹ ಬದಲಾಯಿಸುತ್ತವೆ. ಹೀಗೆ ನಕ್ಷತ್ರಗಳನ್ನು ಬದಲಾಯಿಸಿದಾಗ ಅದರ ಪರಿಣಾಮ ಎಲ್ಲ ರಾಶಿಗಳ ಮೇಲೂ ಕಾಣಿಸುತ್ತದೆ. ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲ್ಪಟ್ಟಿರುವ ಸೂರ್ಯನು ಪ್ರಸ್ತುತ ಮಿಥುನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಜುಲೈ 16ರಂದು ಸೂರ್ಯನು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದಕ್ಕೂ ಮುನ್ನ ಜುಲೈ 14ರಂದು ಸೂರ್ಯನ ನಕ್ಷತ್ರ ಸಂಕ್ರಮಣ ನಡೆಯಲಿದೆ. ಈ ಸಮಯದಲ್ಲಿ ಸೂರ್ಯನು ಪುಷ್ಯ ನಕ್ಷತ್ರಕ್ಕೆ ಹೋಗಲಿದ್ದಾನೆ. ಪುಷ್ಯ ನಕ್ಷತ್ರವು ಅತ್ಯಂತ ಮಂಗಳಕರವಾದ ನಕ್ಷತ್ರವಾಗಿದ್ದು, ಈ ನಕ್ಷತ್ರದ ಅಧಿಪತಿ ಶನಿ ಗ್ರಹವಾಗಿದೆ. ಸೂರ್ಯನ ಈ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಸೂರ್ಯನು ಶನಿಯ ನಕ್ಷತ್ರಕ್ಕೆ ಸಂಚರಿಸುವಾಗ ಎಲ್ಲಾ ರಾಶಿಗಳ ಮೇಲೂ ಅದರ ಪ್ರಭಾವ ಕಂಡುಬರುತ್ತದೆ. ಈ ಪೈಕಿ ಕೆಲ ರಾಶಿಯವರಿಗೆ ಕಷ್ಟವಾಗಿದ್ದರೆ, ಇನ್ನೂ ಕೆಲವರಿಗೆ ಅದೃಷ್ಟವನ್ನು ನೀಡುತ್ತದೆ. ಸೂರ್ಯನು ಪುಷ್ಯ ನಕ್ಷತ್ರಕ್ಕೆ ಹೋಗುವುದರಿಂದ ಅದೃಷ್ಟವನ್ನು ಪಡೆಯುವ ರಾಶಿಯ ಜನರು ಯಾರು ಅಂತಾ ತಿಳಿಯಿರಿ.

2 /4

ಮಿಥುನ ರಾಶಿಯವರಿಗೆ ಸೂರ್ಯನ ನಕ್ಷತ್ರ ಸಂಚಾರವು ಉತ್ತಮವಾಗಿರುತ್ತದೆ. ನೀವು ಅನಿರೀಕ್ಷಿತ ಆರ್ಥಿಕ ಲಾಭ ಪಡೆಯುತ್ತೀರಿ. ವ್ಯಾಪಾರದಲ್ಲಿ ಭರ್ಜರಿ ಲಾಭ ಪಡೆಯುವ ಸಾಧ್ಯತೆಯಿದೆ. ಉದ್ಯೋಗಿಗಳ ಬಡ್ತಿಗೆ ಅವಕಾಶವಿದ್ದು, ಆರ್ಥಿಕ ಸ್ಥಿತಿ ಗಣನೀಯವಾಗಿ ಹೆಚ್ಚಲಿದೆ. ನೀವು ಹೊಸ ಸ್ನೇಹಿತರನ್ನು ಹೊಂದುತ್ತೀರಿ, ಇದು ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ. ನಿಮ್ಮ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಜೀವನದಲ್ಲಿ ನೀವು ಉತ್ತಮ ಪ್ರಗತಿ ಕಾಣುವಿರಿ. ನಿಮ್ಮ ಬಹುಕಾಲದ ಆಸೆಗಳು ಈಡೇರುತ್ತವೆ.

3 /4

ಕರ್ಕಾಟಕ ರಾಶಿಯವರು ಸೂರ್ಯನ ನಕ್ಷತ್ರ ಸಂಚಾರದಿಂದ ಸಮಾಜದಲ್ಲಿ ಉತ್ತಮ ಗೌರವ-ಪ್ರತಿಷ್ಠೆ ಗಳಿಸುತ್ತಾರೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುತ್ತಾರೆ. ಇದು ಎಲ್ಲಾ ವಿಷಯಗಳಲ್ಲಿ ನಿಮಗೆ ಯಶಸ್ಸನ್ನು ತರುತ್ತದೆ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ವಿವಾಹಿತರ ಜೀವನ ಸುಖಮಯವಾಗಿರುತ್ತದೆ. ನಾಯಕತ್ವ ಗುಣಗಳು ಉತ್ತಮಗೊಳ್ಳುತ್ತವೆ. ಅವಿವಾಹಿತರಿಗೆ ಒಲ್ಳೆಯ ಗುಣವುಳ್ಳ ಸಂಗಾತಿ ಸಿಗುತ್ತಾರೆ. ಸಾಕಷ್ಟು ಹಣ ಗಳಿಸುವ ಅವಕಾಶವನ್ನು ಪಡೆಯುವ ಉದ್ಯೋಗಿಗಳಿಗೆ ಸಂಬಳ ಹೆಚ್ಚಳವಾಗುವ ಸಾಧ್ಯತೆಯಿದೆ.

4 /4

ಸೂರ್ಯನ ನಕ್ಷತ್ರ ಸಂಕ್ರಮಣವು ವೃಶ್ಚಿಕ ರಾಶಿಯವರಿಗೆ ಅನುಕೂಲಕರ ಫಲಿತಾಂಶ ನೀಡುತ್ತದೆ. ಅದೃಷ್ಟದ ಸಂಪೂರ್ಣ ಸಹಕಾರದಿಂದ ಬಹುಕಾಲದಿಂದ ಪೂರ್ಣಗೊಳ್ಳದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ಸಿಗಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಕೈಗೊಳ್ಳಬೇಕಾಗಬಹುದು. ಈ ಪ್ರವಾಸವು ನಿಮಗೆ ಉತ್ತಮ ಆರ್ಥಿಕ ಲಾಭ ನೀಡುತ್ತದೆ. ವಿದೇಶ ಪ್ರವಾಸಕ್ಕೂ ಅವಕಾಶ ದೊರೆಯಲಿದೆ. ನೀವು ಬಹಳಷ್ಟು ಹಣ ಉಳಿಸುವ ಅವಕಾಶವನ್ನು ಪಡೆಯುತ್ತೀರಿ. ಇದು ನಿಮ್ಮ ಆರ್ಥಿಕ ಸ್ಥಿತಿ ಮತ್ತಷ್ಟು ಬಲಪಡಿಸುತ್ತದೆ.