Rashi Parivartan: 4 ಗ್ರಹಗಳ ರಾಶಿಚಕ್ರ ಬದಲಾವಣೆ, ಈ ರಾಶಿಯವರಿಗೆ ತರಲಿದೆ ಅದೃಷ್ಟ

              

Rashi Parivartan: 2021 ರ ಜುಲೈ ತಿಂಗಳು ಅನೇಕ ವಿಷಯಗಳಿಗೆ ವಿಶೇಷವಾಗಿದೆ. ಇದೇ ತಿಂಗಳಲ್ಲಿ, 4 ಪ್ರಮುಖ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತಿವೆ. ಸೂರ್ಯ, ಮಂಗಳ, ಬುಧ ಮತ್ತು ಶುಕ್ರ (Rashi Parivartan) ರಾಶಿಚಕ್ರ ಬದಲಾವಣೆಗಳು ಜನರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತಿವೆ. ಈ ಬದಲಾವಣೆಗಳು ಕೆಲವು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಈ ಸಮಯ  ಹಣದ ವಿಷಯದಲ್ಲಿ ಯಾವ ರಾಶಿಯವರಿಗೆ ಹೆಚ್ಚು ಪ್ರಯೋಜನ ನೀಡಲಿದೆ ಎಂದು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಈ ರಾಶಿಚಕ್ರದ ಜನರಿಗೆ, ಜುಲೈ ತಿಂಗಳು ಅನೇಕ ವಿಷಯಗಳಲ್ಲಿ ಶುಭವಾಗಿದೆ. ಆದರೆ ಹಣದ ದೃಷ್ಟಿಯಿಂದ ಇದು ನಿಮಗೆ ತುಂಬಾ ಒಳ್ಳೆಯ ಸಮಯ. ಮೇಷ ರಾಶಿಯವರಿಗೆ ಹಲವು ಮೂಲಗಳಿಂದ ಆರ್ಥಿಕ ಲಾಭವಾಗುವ ಸಾಧ್ಯತೆಯಿದೆ. ಇದಲ್ಲದೆ ಇದು ವೃತ್ತಿಜೀವನಕ್ಕೂ ಉತ್ತಮ ಸಮಯ.

2 /6

ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ವೃಷಭ ರಾಶಿಯವರಿಗೆ ಈ ತಿಂಗಳು ತುಂಬಾ ಒಳ್ಳೆಯ ಸಮಯ. ಅದೇ ಸಮಯದಲ್ಲಿ, ಜುಲೈ 16 ರಂದು ರಾಶಿಚಕ್ರದಲ್ಲಿ ಸೂರ್ಯನ ರಾಶಿ ಪರಿವರ್ತನೆ ನಂತರ, ಉದ್ಯೋಗ-ವ್ಯವಹಾರದಲ್ಲಿ ವಿಶೇಷ ಯಶಸ್ಸಿನ ಸಾಧ್ಯತೆಗಳಿವೆ. ಕೆಲವರಿಗೆ ಆರ್ಥಿಕ ಲಾಭವಾಗಲಿದೆ. ಸಂಪತ್ತನ್ನು ಕೂಡಿಡಲು ಇದು ನಿಮಗೆ ಒಳ್ಳೆಯ ಸಮಯ.

3 /6

ಈ ಸಮಯದಲ್ಲಿ ಕರ್ಕಾಟಕ ರಾಶಿಯವರಿಗೆ ವೃತ್ತಿಜೀವನದಲ್ಲಿ ಉದ್ವಿಗ್ನತೆ ಇರಬಹುದು. ಆದರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಣದ ವಿಷಯದಲ್ಲಿ ಈ ತಿಂಗಳ ಸಂಪೂರ್ಣ ಸಮಯವು ನಿಮಗೆ ತುಂಬಾ ಒಳ್ಳೆಯದು ಎಂದು ಸಹ ಹೇಳಬಹುದು. ದೀರ್ಘಕಾಲದಿಂದ ನಿಮ್ಮ ಕೈ ಸೇರಬೇಕಿದ್ದ ಹಣ ಈ ತಿಂಗಳು ಯಾವುದೇ ಅಡೆತಡೆ ಇಲ್ಲದೆ ನಿಮ್ಮ ಕೈ ಸೇರಲಿದೆ. ಇದನ್ನೂ ಓದಿ-  Best Zodiac Sign: ದ್ವಾದಶ ರಾಶಿಗಳಲ್ಲಿ ಈ ರಾಶಿಚಕ್ರವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತೆ, ಇದರ ವಿಶೇಷತೆ ತಿಳಿಯಿರಿ

4 /6

ನಾಲ್ಕು ಗ್ರಹಗಳ ರಾಶಿ ಪರಿವರ್ತನೆಯಿಂದ (Rashi Parivartan) ಕನ್ಯಾ ರಾಶಿಯವರಿಗೆ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಉತ್ತಮ ಸಮಯ ಎಂದು ಸಾಬೀತುಪಡಿಸಬಹುದು. ನಿಮಗೆ ಬಡ್ತಿ ಸಿಗುವ ಸಾಧ್ಯತೆಯಿದ್ದು, ಸಂಬಳವೂ ಹೆಚ್ಚಾಗಬಹುದು. ಆದರೆ ವೆಚ್ಚ ಕೂಡ ಅಧಿಕವಾಗುತ್ತದೆ. ಹಾಗಾಗಿ ಯೋಚಿಸಿ ಖರ್ಚು ಮಾಡಿ. 

5 /6

ಈ ತಿಂಗಳು ಮಕರ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುವ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಕಠಿಣ ಪರಿಶ್ರಮದಿಂದ ಲಾಭ ಹೆಚ್ಚಾಗುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕೆಲಸ ಪೂರ್ಣಗೊಳ್ಳಲಿದೆ. ಇದನ್ನೂ ಓದಿ- Mangal Rashi Parivartan: ಇಂದು ಸಿಂಹ ರಾಶಿಗೆ ಮಂಗಳನ ಪ್ರವೇಶ, ಯಾವ ರಾಶಿಗೆ ಏನು ಫಲ

6 /6

ಈ ತಿಂಗಳು ಕೆಲಸದ ಸ್ಥಳದಲ್ಲಿ ನಿಮಗೆ ಬಹಳ ಶುಭ. ನೀವು ಬಹಳ ಸಮಯದಿಂದ ಕಾಯುತ್ತಿದ್ದ ಕೆಲಸಕ್ಕೆ ಸಂಬಂಧಿಸಿದಂತೆ ಯಶಸ್ಸು ಪ್ರಾಪ್ತಿಯಾಗಲಿದೆ. ಹಲವು ಮೂಲಗಳಿಂದ ಹಣ ಹರಿದುಬರುವ ಸಾಧ್ಯತೆಯಿದೆ. (ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ.  ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)