12 ವರ್ಷಗಳ ನಂತರ ಸೂರ್ಯ-ಗುರು ಸಂಯೋಗ ಮೇಷ ರಾಶಿಯಲ್ಲಿ ನಡೆಯುತ್ತಿದೆ. ಸೂರ್ಯ ಮತ್ತು ಗುರುವಿನ ಈ ಸಂಯೋಗವು ಕೆಲವು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ.
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಗ್ರಹಗಳ ರಾಜನಾದ ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಮತ್ತೊಂದೆಡೆ, ದೇವಗುರು ಗುರುವು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. 2023 ರ ನಂತರ, ಇದೀಗ ಗುರು ಮೇಷ ರಾಶಿಯನ್ನು ಪ್ರವೇಶಿಸುತ್ತಿದೆ. ಈ ರೀತಿ 12 ವರ್ಷಗಳ ನಂತರ ಸೂರ್ಯ-ಗುರು ಸಂಯೋಗ ಮೇಷ ರಾಶಿಯಲ್ಲಿ ನಡೆಯುತ್ತಿದೆ. ಸೂರ್ಯ ಮತ್ತು ಗುರುವಿನ ಈ ಸಂಯೋಗವು ಕೆಲವು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಸೂರ್ಯ ಮತ್ತು ಗುರುವಿನ ಸಂಯೋಜನೆಯಿಂದ ಲಾಭ ಪಡೆಯುವ ಅದೃಷ್ಟದ ರಾಶಿಗಳು ಯಾವುವು ನೋಡೋಣ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೇಷ ರಾಶಿ : ಮೇಷ ರಾಶಿಯಲ್ಲಿ ಸೂರ್ಯ ಮತ್ತು ಗುರು ಗ್ರಹಗಳ ಸಂಯೋಗದಿಂದ ಈ ರಾಶಿಯವರಿಗೆ ಬಹಳಷ್ಟು ಲಾಭವಾಗಲಿದೆ. ನಿಮ್ಮ ಕೆಲಸದಿಂದ ಮೇಲಾಧಿಕಾರಿಗಳ ಮನ ಗೆಲ್ಲುವುದು ಸಾಧ್ಯವಾಗುತ್ತದೆ. ಗೌರವ ಹೆಚ್ಚಾಗಲಿದೆ. ಸಾಕಷ್ಟು ಹಣ ಹರಿದು ಬರಲಿದೆ. ಈ ಸಮಯದಲ್ಲಿ ನೀವು ದೊಡ್ಡ ಹುದ್ದೆಗೆ ಏರುವುದು ಸಾಧ್ಯವಾಗುತ್ತದೆ. ಈ ಸಮಯವು ವೃತ್ತಿಜೀವನಕ್ಕೆ ತುಂಬಾ ಅನುಕೂಲಕರವಾಗಿರುತ್ತದೆ.
ಮಕರ ರಾಶಿ : ಸೂರ್ಯ-ಗುರುಗಳ ಸಂಯೋಜನೆಯು ಮಕರ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರ ಜೀವನದಲ್ಲಿನ ಸೌಕರ್ಯಗಳು ಹೆಚ್ಚಾಗುತ್ತವೆ. ಹೊಸ ಮನೆ ಅಥವಾ ಕಾರು ಖರೀದಿಸುವ ಸಾಧ್ಯತೆಗಳು ಹೆಚ್ಚಿವೆ. ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು. ಹೊಸ ಕೆಲಸದ ಆಫರ್ ಬರಬಹುದು. ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ದೊಡ್ಡ ಆಸ್ತಿಯನ್ನು ಖರೀದಿಸಬಹುದು.
ಧನು ರಾಶಿ : ಸೂರ್ಯ ಮತ್ತು ಗುರುವಿನ ಸಂಯೋಜನೆಯು ಧನು ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಪ್ರೇಮವಿವಾಹ ಆಗಲು ಬಯಸುವವರಿಗೆ ಯಶಸ್ಸು ಸಿಗುತ್ತದೆ. ಕುಟುಂಬದೊಂದಿಗೆ ಆಹ್ಲಾದಕರ ಮತ್ತು ಸ್ಮರಣೀಯ ಪ್ರವಾಸಕ್ಕೆ ಹೋಗಬಹುದು. ದೊಡ್ಡ ಸಂಸ್ಥೆಯಿಂದ ನಿಮಗೆ ಆಫರ್ ಬರಬಹುದು.