SSY : ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಈ 5 ಪ್ರಮುಖ ಬದಲಾವಣೆಗಳು..!

ಹೌದು ಎಂದಾದರೆ, ಅದರಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ನಿಮಗ್ಗಲಿ ಮಾಹಿತಿ ಇಲ್ಲಿದೆ ನೋಡಿ...

Sukanya Samriddhi Yojana : ನಿಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದೀರಾ. ಹೌದು ಎಂದಾದರೆ, ಅದರಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ನಿಮಗ್ಗಲಿ ಮಾಹಿತಿ ಇಲ್ಲಿದೆ ನೋಡಿ...

1 /6

ಸೆಪ್ಟೆಂಬರ್‌ಗೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಬಡ್ಡಿದರದಲ್ಲಿ ಹೆಚ್ಚಳವನ್ನು ಸರ್ಕಾರ ಘೋಷಿಸುವ ನಿರೀಕ್ಷೆಯಿದೆ. ಕೇಂದ್ರವು ಹೆಣ್ಣು ಮಕ್ಕಳಿಗಾಗಿ ನಡೆಸಲಾಗುವ ಈ ಯೋಜನೆಯು ಪ್ರಸ್ತುತ ಶೇ.7.60 ರಷ್ಟು ಬಡ್ಡಿದರವನ್ನು ಹೊಂದಿದೆ. ಅದರಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುತ್ತೀರಿ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿನ 5 ಪ್ರಮುಖ ಬದಲಾವಣೆಗಳ ಬಗ್ಗೆ ನಿಮಗ್ಗವು ಮಾಹಿತಿ ಇಲ್ಲಿದೆ ನೋಡಿ..

2 /6

ಸುಕನ್ಯಾ ಸಮೃದ್ಧಿ ಯೋಜನೆಯ ಹೊಸ ನಿಯಮಗಳ ಅಡಿಯಲ್ಲಿ, ಖಾತೆಯಲ್ಲಿನ ತಪ್ಪು ಬಡ್ಡಿಯನ್ನು ಹಿಂತಿರುಗಿಸುವ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಇದಲ್ಲದೆ, ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಯ ವಾರ್ಷಿಕ ಬಡ್ಡಿಯನ್ನು ಜಮಾ ಮಾಡಲಾಗುತ್ತದೆ. ಈ ಮೊದಲು ತ್ರೈಮಾಸಿಕ ಆಧಾರದ ಮೇಲೆ ಖಾತೆಗೆ ಜಮಾ ಮಾಡಲಾಗುತ್ತಿತ್ತು.

3 /6

ಹಿಂದಿನ ನಿಯಮಗಳ ಪ್ರಕಾರ, ಮಗಳು 10 ವರ್ಷಗಳಲ್ಲಿ ಖಾತೆಯನ್ನು ನಿರ್ವಹಿಸಬಹುದು. ಆದರೆ ಹೊಸ ನಿಯಮದಲ್ಲಿ ಇದನ್ನು ಬದಲಾಯಿಸಲಾಗಿದೆ. ಈಗ ಹೆಣ್ಣುಮಕ್ಕಳು 18 ವರ್ಷಕ್ಕಿಂತ ಮೊದಲು ಖಾತೆಯನ್ನು ನಿರ್ವಹಿಸಲು ಅನುಮತಿಸುವುದಿಲ್ಲ. ಪಾಲಕರು ಮಾತ್ರ 18 ವರ್ಷ ವಯಸ್ಸಿನವರೆಗೆ ಖಾತೆಯನ್ನು ನಿರ್ವಹಿಸುತ್ತಾರೆ.

4 /6

ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಗೆ ವಾರ್ಷಿಕ ಕನಿಷ್ಠ 250 ಮತ್ತು ಗರಿಷ್ಠ 1.5 ಲಕ್ಷ ಠೇವಣಿ ಇಡಲು ಅವಕಾಶವಿದೆ. ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ ಖಾತೆ ಡೀಫಾಲ್ಟ್ ಆಗುತ್ತದೆ. ಹೊಸ ನಿಯಮಗಳ ಪ್ರಕಾರ, ಖಾತೆಯನ್ನು ಮತ್ತೆ ಸಕ್ರಿಯಗೊಳಿಸದಿದ್ದರೆ, ಮುಕ್ತಾಯದವರೆಗೆ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಅನ್ವಯವಾಗುವ ದರದಲ್ಲಿ ಬಡ್ಡಿಯನ್ನು ಪಾವತಿಸುವುದನ್ನು ಮುಂದುವರಿಸಲಾಗುತ್ತದೆ. ಮೊದಲು ಹೀಗಿರಲಿಲ್ಲ.

5 /6

ಈ ಹಿಂದೆ, 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವು ಇಬ್ಬರು ಹೆಣ್ಣುಮಕ್ಕಳ ಖಾತೆಯಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಮೂರನೇ ಮಗಳು ಹುಟ್ಟಿದ ಮೇಲೂ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಬಹುದಾಗಿದೆ. ವಾಸ್ತವವಾಗಿ, ಈಗ ಮೊದಲ ಮಗಳ ನಂತರ ಜನಿಸಿದ ಇಬ್ಬರು ಅವಳಿ ಹೆಣ್ಣುಮಕ್ಕಳಿಗೆ ಖಾತೆಯನ್ನು ತೆರೆಯುವ ಅವಕಾಶವಿದೆ. ಈ ರೀತಿಯಾಗಿ ಒಬ್ಬ ವ್ಯಕ್ತಿಯು ಮೂರು ಹೆಣ್ಣುಮಕ್ಕಳ ಖಾತೆಯನ್ನು ತೆರೆಯಬಹುದು.

6 /6

'ಸುಕನ್ಯಾ ಸಮೃದ್ಧಿ ಯೋಜನೆ'ಯ ಖಾತೆಯನ್ನು ಮಗಳ ಮರಣ ಅಥವಾ ಮಗಳು ನಿವಾಸ ಬದಲಾಯಿಸಿದ ಮೇಲೆ ಮೊದಲೇ ಮುಚ್ಚಬಹುದು. ಆದರೆ ಈಗ ಖಾತೆದಾರರ ಮಾರಣಾಂತಿಕ ಕಾಯಿಲೆಯೂ ಇದರಲ್ಲಿ ಸೇರಿಕೊಂಡಿದೆ. ರಕ್ಷಕನ ಮರಣದ ಸಂದರ್ಭದಲ್ಲಿಯೂ ಖಾತೆಯನ್ನು ಅವಧಿಗೆ ಮುನ್ನ ಮುಚ್ಚಬಹುದು.