Sugar Free Mangoes: Diabetes ರೋಗಿಗಳಿಗೊಂದು ಸಂತಸದ ಸುದ್ದಿ

Sugar Free Mangoes: ಮಾವಿನ ಹಣ್ಣನ್ನು ಹಣ್ಣುಗಳ ರಾಜ (King Of Fruits) ಎಂದು ಕರೆಯಲಾಗುತ್ತದೆ. ಮಾವಿನಹಣ್ಣನ್ನು ಬೇಸಿಗೆಯಲ್ಲಿ ಪ್ರತಿಯೊಂದು ಮನೆಯಲ್ಲಿ ತಿನ್ನಲಾಗುತ್ತದೆ. ಭಾರತದ ಜನರು ಮಾವಿನ ರುಚಿಯನ್ನು ತೆಗೆದುಕೊಳ್ಳುವುದರ ಜೊತೆಗೆ ಮಾವಿನ ಶೇಕ್, ಚಟ್ನಿ, ಮಾರ್ಮಲೇಡ್ ಮತ್ತು ಉಪ್ಪಿನಕಾಯಿ ತಯಾರಿಸುತ್ತಾರೆ.

ಇಸ್ಲಾಮಾಬಾದ್: Sugar Free Mangoes - ತುಂಬಾ ರುಚಿಕರವಾಗಿದ್ದರೂ, ಮಧುಮೇಹದಿಂದಾಗಿ  (Diabetes)ವಿಶ್ವದ ಲಕ್ಷಾಂತರ ಜನರಿಗೆ ಮಾವಿನ ಹಣ್ಣನ್ನು ಸೇವಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸಮಸ್ಯೆಗಳಿಂದಾಗಿ, ಮಾವಿನಹಣ್ಣು ತಿನ್ನುವುದನ್ನು ತ್ಯಜಿಸಲು ವೈದ್ಯರು ಸಹ ಹೇಳುತ್ತಾರೆ. ಇದರಿಂದಾಗಿ ಪ್ರತಿ ವರ್ಷ ಮಾವಿನ ಹಣ್ಣಿನ (Mangoes) ಋತುವಿನ ಆಗಮನದ ಹೊರತಾಗಿಯೂ ಕೂಡ ಲಕ್ಷಾಂತರ ಜನರ ಮನಸ್ಸು ಕಸಿವಿಸಿ ಅನುಭವಿಸುತ್ತದೆ. 

 

ಇದನ್ನೂ ಓದಿ- ಮಾವಿನಹಣ್ಣು ತಿಂದ ಮೇಲೆ ಈ 5 ವಸ್ತುಗಳನ್ನು ಸೇವಿಸಲೇಬಾರದು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 


 

1 /5

1. ಇನ್ಮುಂದೆ ಸಕ್ಕರೆ ಕಾಯಿಲೆ (Diabetes) ಇರುವವರೂ ಕೂಡ ಮಾವು ಸೇವಿಸಬಹುದು - ಇದೀಗ ಮಧುಮೇಹ ರೋಗಿಗಳು ಕೂಡ ಬೇಸಿಗೆಯಲ್ಲಿ ಮಾವಿನಹಣ್ಣು ತಿನ್ನುವ ಹವ್ಯಾಸವನ್ನು ಪೂರೈಸಬಹುದು. ಪಾಕಿಸ್ತಾನದಲ್ಲಿ (Pakistan) ಮೂರು ಹೊಸ ಜಾತಿಯ ಸಕ್ಕರೆ ಮುಕ್ತ ಮಾವಿನಹಣ್ಣನ್ನು ತಯಾರಿಸಲಾಗಿದೆ. ಯಾವುದೇ ಮಧುಮೇಹ ರೋಗಿಯು ಈ ಜಾತಿಯ ಮಾವಿನಹಣ್ಣನ್ನು ಸುಲಭವಾಗಿ ತಿನ್ನಬಹುದು. ವರದಿಯ ಪ್ರಕಾರ, ಸಿಂಧ್‌ನ ತಾಂಡೋ ಅಲ್ಲಾಹಾರ್‌ನಲ್ಲಿರುವ ಖಾಸಗಿ ಜಮೀನಿನಲ್ಲಿ ವೈಜ್ಞಾನಿಕವಾಗಿ ಮಾರ್ಪಡಿಸುವ ಮೂಲಕ ಈ ಮೂರು ಪ್ರಜಾತಿಯ ಮಾವನ್ನು ತಯಾರಿಸಲಾಗಿದೆ.

2 /5

2. ಪಾಕಿಸ್ತಾನದಲ್ಲಿ ಸಿದ್ಧಗೊಂಡಿವೆ ಶುಗರ್ ಫ್ರೀ ಮಾವು - ತಾಂಡೋ ಅಲ್ಲಾಹಾರ್‌ನಲ್ಲಿ ಮಾವಿನ ಕೃಷಿ ಮಾಡುತ್ತಿರುವ ರೈತ ಗುಲಾಮ್ ಸರ್ವಾರ್ (Ghulam Sarvar) ಈ ಹೊಸ ಪ್ರಭೇದದ ಮಾವಿನ ಹಣ್ಣುಗಳನ್ನು ಸಿದ್ಧಪಡಿಸಿದ್ದಾರೆ. ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸರ್ವಾರ್ ಅವರು ಈ ಮೂರು ಜಾತಿಗಳಿಗೆ ಸೋನಾರೊ (Sonaro), ಗ್ಲೆನ್ (Glen) ಮತ್ತು ಕೀಟ್ (Keeth) ಎಂದು ಹೆಸರಿಸಿರುವುದಾಗಿ ಹೇಳಿದ್ದಾರೆ. ಈ ಪ್ರಭೇದಗಳನ್ನು ಬೆಳೆಯಲು ವಿಶೇಷ ತಂತ್ರಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ. ಮಧುಮೇಹ ರೋಗಿಗಳ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹಣ್ಣುಗಳಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಅನೇಕ ಪ್ರಯೋಗಗಳನ್ನು ಮಾಡಲಾಗಿದೆ.

3 /5

3. ಐದು ವರ್ಷಗಳ ಪ್ರಯತ್ನದ ಬಳಿಕ ದೊರೆತ ಫಲ - ಈ ಮೂರು ಪ್ರಭೇದಗಳನ್ನು ತಾವು ಖುದ್ದಾಗಿ ಅಭಿವೃದ್ಧಿಪಡಿಸಿರುವುದಾಗಿ ಸರ್ವಾರ್ ಹೇಳಿದ್ದಾರೆ. ಇದರಲ್ಲಿ ಅವರಿಗೆ ಸರ್ಕಾರದಿಂದ ಸಹಾಯ ಸಿಕ್ಕಿಲ್ಲ. ಈ ಸಕ್ಕರೆ ಮುಕ್ತ ಮಾವಿನಹಣ್ಣನ್ನು (Mangoes) ತಯಾರಿಸಲು ಸುಮಾರು ಐದು ವರ್ಷಗಳ ಸಮಯಾವಕಾಶ ತಗುಲಿದೆ ಎಂದು ಅವರು ಹೇಳಿದ್ದಾರೆ. ಈ ಮಾವಿನಹಣ್ಣನ್ನು ಶೀಘ್ರದಲ್ಲೇ ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ.ಗೆ 150 ರೂ.ಗೆ ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

4 /5

4. ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿ ಇಲ್ಲ - ಮಾರುಕಟ್ಟೆಯಲ್ಲಿ ಕಂಡು ಬರುವ ಚೌಸಾ ಮಾವಿನ ಹಣ್ಣಿನಲ್ಲಿ  ಸಕ್ಕರೆಯ ಪ್ರಮಾಣ ಶೇ. 12 ರಿಂದ ಶೇ.15 ರವರೆಗೆ ಇರುತ್ತದೆ ಎಂದು ಗುಲಾಮ್ ಸರ್ವಾರ್ ಹೇಳಿದ್ದಾರೆ. ಈ ಕಾರಣಕ್ಕಾಗಿ ಮಧುಮೇಹಿಗಳಿಗೆ ಇದನ್ನು ತಿನ್ನದಂತೆ ಸೂಚಿಸಲಾಗುತ್ತದೆ. ಹೀಗಿರುವಾಗ, ಸೋನಾರೊದಲ್ಲಿ ಶೇ. 5.6, ಗ್ಲೆನ್‌ನಲ್ಲಿ ಶೇ. 6  ಮತ್ತು ಕೀತ್‌ನಲ್ಲಿ ಕೇವಲ ಶೇ. 4.7 ರಷ್ಟು ಸಕ್ಕರೆಯ ಪ್ರಮಾಣ (Sugar Level) ಇರುತ್ತದೆ ಎಂದು ಸರ್ವಾರ್ ಹೇಳುತ್ತಾರೆ.

5 /5

5. ಮಾವಿನಲ್ಲಿ ಹೇರಳ ಪ್ರಮಾಣದ ವಿಟಮಿನ್ ಗಳಿವೆ - ಮಾವಿನಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ. ಈ ವಿಟಮಿನ್ ದೇಹವ ಗಾಯಗಳನ್ನು (Wounds) ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಮಾವಿನಲ್ಲಿ  ವಿಟಮಿನ್ ಕೆ ಕೂಡ ಇದೆ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಮತ್ತು ರಕ್ತಹೀನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಾವಿನ ಹಳದಿ ಮತ್ತು ಕಿತ್ತಳೆ ಭಾಗಗಳಲ್ಲಿ ಬೀಟಾ ಕ್ಯಾರೋಟಿನ್ ಕಂಡುಬರುತ್ತದೆ. ಈ ಅಂಶವು ಮಾವಿನಲ್ಲಿ ಕಂಡುಬರುವ ಅನೇಕ ರೀತಿಯ ಆಂಟಿ-ಆಕ್ಸಿಡೆಂಟ್‌ಗಳಲ್ಲಿ (Anti-Oxidents) ಒಂದಾಗಿದೆ. ಈ ಆಂಟಿ-ಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತವೆ. ಫ್ರೀ ರಾಡಿಕಲ್ ಗಳು  (Free Radicals) ಕ್ಯಾನ್ಸರ್ (Cancer) ಕೋಶ ಬೆಳವಣಿಗೆಗೆ ಕಾರಣ ಎನ್ನಲಾಗುತ್ತದೆ.