ಭಾರತದ ಮಾರುಕಟ್ಟೆಗೆ ಬಿಡುಗೆಯಾಗಿದೆ Skoda Kushaq, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ

ಸ್ಕೋಡಾ ತನ್ನ ಹೊಸ ಕಾರು ಕುಶಾಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ವಾಹನದ ಬೆಲೆ ರೂ .10.50 ಲಕ್ಷದಿಂದ ಪ್ರಾರಂಭವಾಗುತ್ತದೆ. ಆದರೆ ಟಾಪ್ ಮಾಡೆಲ್ ಬೆಲೆ 17.60 ಲಕ್ಷ ರೂ ಆಗಿರಲಿದೆ. 

ನವದೆಹಲಿ : ಸ್ಕೋಡಾ ತನ್ನ ಹೊಸ ಕಾರು ಕುಶಾಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ವಾಹನದ ಬೆಲೆ ರೂ .10.50 ಲಕ್ಷದಿಂದ ಪ್ರಾರಂಭವಾಗುತ್ತದೆ. ಆದರೆ ಟಾಪ್ ಮಾಡೆಲ್ ಬೆಲೆ 17.60 ಲಕ್ಷ ರೂ ಆಗಿರಲಿದೆ. ತಜ್ಞರ ಪ್ರಕಾರ, ಕಾಂಪ್ಯಾಕ್ಟ್ ಎಸ್‌ಯುವಿ ಇಲ್ಲಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ರೆನಾಲ್ಟ್ ಡಸ್ಟರ್‌ಗಳೊಂದಿಗೆ ನೇರವಾಗಿ ಸ್ಪರ್ಧಿಸಲಿದೆ. MQB-A0-IN ನ ಪ್ಲಾಟ್‌ಫಾರ್ಮ್‌ನಲ್ಲಿ ಸಿದ್ಧಪಡಿಸಿದ ಮೊದಲ ಮಾದರಿ ಸ್ಕೋಡಾ ಕುಶಾಕ್ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

 Skoda Kushaq ಅತ್ಯುತ್ತಮ ಲುಕ್ ಅನ್ನು ಹೊಂದಿದೆ. 2020 ರಲ್ಲಿ ಬಿಡುಗಡೆಯಾದ ಆಟೋ ಎಕ್ಸ್‌ಪೋ ಮತ್ತು ರಿಜಿನಲ್ Kushaq  ಮಧ್ಯೆ ಹೆಚ್ಚಿನ ವ್ಯತ್ಯಾಸವಿಲ್ಲ. SUV ಯಲ್ಲಿ ಎಲ್‌ಇಡಿ ಹೆಡ್ ಲ್ಯಾಂಪ್ಗಳನ್ನು ಅಳವಡಿಸಲಾಗಿದೆ. ಡೇ ಟೈಂ ರನ್ನಿಂಗ್  ಲ್ಯಾಂಪ್ ನೊಂದಿಗೆ ಬರಲಿದೆ. ಅಲ್ಲದೆ, ಇದರಲ್ಲಿ ಪ್ರತ್ಯೇಕ Trapezoidal ಎಲ್ಇಡಿ ಫಾಗ್ಲ್ಯಾಂಪ್ ಅನ್ನು ಅದರಲ್ಲಿ ನೀಡಲಾಗಿದೆ. ಎಸ್‌ಯುವಿ ಹನಿ ಆರೆಂಜ್ ಮತ್ತು Tornado  ಕೆಂಪು ಬಣ್ಣಗಳಲ್ಲಿ ಬರಲಿದೆ.   

2 /6

 ಇದರಲ್ಲಿ, ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಬಣ್ಣವನ್ನು ಇನ್ನೂ ಅನೇಕ ಬಣ್ಣಗಳಿಗೆ ನೀಡಲಾಗಿದೆ. ಸ್ಕೋಡಾ ಕುಶಾಕ್ ಎಂಟ್ರಿ ಲೆವೆಲ್ ಟ್ರಿಮ್ ಲೈನ್ ಆಕ್ಟಿವ್ 16 ಇಂಚಿನ ಸ್ಟೀಲ್ ಚಕ್ರಗಳಲ್ಲಕಿ ಬರುತ್ತದೆ. ಇದಲ್ಲದೆ, ಇದು 16 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು 17-ಇಂಚಿನ ಅಟ್ಲಾಸ್ ಎರಡು ಟೋನ್ ಅಲಾಯ್  ಸ್ಟ್ಯಾಂಡರ್ಡ್ ನಲ್ಲಿದೆ. ಈ ಸ್ಕೋಡಾ ವಾಹನದಲ್ಲಿ 95 ಪ್ರತಿಶತ local ಕಂಟೆಂಟ್ ಬಳಸಲಾಗಿದೆ. ವಾಹನವು 4225 ಎಂಎಂ ಉದ್ದ, 1760 ಎಂಎಂ ಅಗಲ ಮತ್ತು 1612 ಎಂಎಂ ಎತ್ತರದಲ್ಲಿ ಲಭ್ಯವಿದೆ.  

3 /6

ಇದರ ಕ್ಯಾಬಿನ್  ಡ್ಯುಯಲ್ ಟೋನ್ ಸ್ಕೀಮ್ನೊಂದಿಗೆ ಬರುತ್ತದೆ. ವಾಹನದೊಳಗೆ ಉನ್ನತ ದರ್ಜೆಯ ಮೆಟಿರಿಯಲ್ ಗಳನ್ನು ಬಳಸಲಾಗಿದೆ. ಸೀಟಿನಲ್ಲಿ ಲುಂಬರ್ ಸಪೋರ್ಟ್ ಮತ್ತು ಸೈಡ್ ಸಪೋರ್ಟ್ ಇರಲಿದೆ. ಇದರ ಕುಶನಿಂಗ್ ಕೂಡಾ ಅತ್ಯುತ್ತಮವಾಗಿದ್ದು, ಆರಾಮದಾಯಕಾವಗಿದೆ. ವಾಹನವು ಪಿಯಾನೋ ಬ್ಲ್ಯಾಕ್ ಫಿನಿಶ್ ಮತ್ತು ಬ್ರಷ್ಡ್ ಕ್ರೋಮ್ ಅನ್ನು ಹೊಂದಿದೆ. ವಾಹನಕ್ಕೆ 5 ಜನರ ಸೀಟಿಂಗ್ ವ್ಯವಸ್ಥೆಯಿದೆ.

4 /6

ಈ ಕಾರಿನ ವೈಶಿಷ್ಟ್ಯಗಳು ಅತ್ಯುತ್ತಮವಾಗಿವೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗೆ ಬರುವ 10 ಇಂಚಿನ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯನ್ನು ಹೊಂದಿದೆ. ಮತ್ತೊಂದೆಡೆ, ಮಿರರ್ಲಿಂಕ್, ವೆಂಟಿಲೆಟೆಡ್ ಫ್ರಂಟ್ ಸೀಟ್, ಎಸಿ ವೆಂಟ್ಸ್, ಎಂಐಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಕ್ರೂಸ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್ ಮತ್ತು ಏಳು ಸ್ಪೀಕರ್ ಮ್ಯೂಸಿಕ್ ಸಿಸ್ಟಮ್ ಅನ್ನು ಒಳಗೊಂಡಿದೆ. ವಾಹನವು ಎರಡು ಸ್ಪೋಕ್ ಸ್ಟೀರಿಂಗ್ ವೀಲ್, ಆಟೋ ಡಿಮ್ಮಿಂಗ್ IRVMs,, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ವೈರ್ಲೆಸ್ ಚಾರ್ಜರ್ ಮತ್ತು ಮೈ ಸ್ಕೋಡಾ ಕನೆಕ್ಟ್ ಅನ್ನು ಪಡೆಯುತ್ತದೆ. 

5 /6

ಈ ವಾಹನದ ಎಂಜಿನ್ ಸಹ ಶಕ್ತಿಯುತವಾಗಿದೆ. ಅಂಡರ್ ದಿ ಹುಡ್ ಸ್ಕೋಡಾ ಕುಶಾಕ್ ಎಸ್ಯುವಿಯಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ.  1.0-ಲೀಟರ್ ಮೂರು ಸಿಲಿಂಡರ್ ಟಿಎಸ್ಐ ಮತ್ತು 1.5-ಲೀಟರ್ ನಾಲ್ಕು ಸಿಲಿಂಡರ್ ಟಿಎಸ್ಐ ನೀಡಲಾಗುತ್ತದೆ. ಇದರಲ್ಲಿ ನೀವು 113bhp ಮತ್ತು 175 Nm ಟಾರ್ಕ್ ಅನ್ನು ಪಡೆಯುತ್ತೀರಿ. ವಾಹನವು 148 ಬಿಹೆಚ್‌ಪಿ ಮತ್ತು 250 ಎನ್ಎಂ ಪೀಕ್ ಟಾರ್ಕ್ ಪಡೆಯುತ್ತದೆ. ಟ್ರಾನ್ಸ್ ಮಿಶನ್ ನಲ್ಲಿ 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ನೊಂದಿಗೆ ಲಭ್ಯವಿದೆ.  

6 /6

ಈ ಕಾರಿನ ಸುರಕ್ಷತೆಯ ಬಗ್ಗೆ ಹೇಳುವುದಾದರೆ, ಈ ಕಾರು ಅದ್ಭುತವಾಗಿದೆ. ಇದರಲ್ಲಿ ಡ್ಯುಯಲ್ ಏರ್‌ಬ್ಯಾಗ್, ಇಎಸ್‌ಸಿ, ಎಲ್ಲಾ 5 ಪ್ರಯಾಣಿಕರಿಗೆ ಮೂರು ಪಾಯಿಂಟ್ ಸೀಟ್‌ಬೆಲ್ಟ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ ಸೇರಿದೆ. ಇದಲ್ಲದೆ, ಹಿಲ್ ಹೋಲ್ಡ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್, 6 ಏರ್‌ಬ್ಯಾಗ್, ಆಟೋ ಹೆಡ್‌ಲ್ಯಾಂಪ್ ಮತ್ತು ವೈಪರ್‌ಗಳೊಂದಿಗೆ ಮಲ್ಟಿ-ಕೊಲಿಜನ್ ಬ್ರೇಕಿಂಗ್ ಸಿಸ್ಟಮ್ ಲಭ್ಯವಿದೆ.