Sara to Deepika Padukone:ಪ್ರಸಿದ್ಧ ರೂಪದರ್ಶಿ, ನಟರಾದ ಕ್ರೀಡಾಪಟುಗಳ ಮಕ್ಕಳು

ಪ್ರಸಿದ್ಧ ಕ್ರೀಡಾಪಟುಗಳ ಮಕ್ಕಳು ಸಂಪೂರ್ಣವಾಗಿ ಬೇರೆ ಕ್ಷೇತ್ರದಲ್ಲಿ ಹೆಸರುವಾಸಿಯಾದ ಉದಾಹರಣೆಗಳು ಸಾಕಷ್ಟಿವೆ.  

ಸೆಲೆಬ್ರಿಟಿ ಮಗುವಾದರೆ (celebrity kid) ಕೆಲವು ನಿರ್ಣಾಯಕ ವಿಚಾರಗಳಿವೆ. ಹೆತ್ತವರ ವೃತ್ತಿಯಲ್ಲಿಯೇ ಮುಂದುವರೆಯುವುದಾ, ಬೇಡವಾ ಎಂಬ ಪ್ರಶ್ನೆ ಸಾಮಾನ್ಯ. ಪ್ರಸಿದ್ಧ ಕ್ರೀಡಾಪಟುಗಳ ಮಕ್ಕಳು ಸಂಪೂರ್ಣವಾಗಿ ಬೇರೆ ಕ್ಷೇತ್ರದಲ್ಲಿ ಹೆಸರುವಾಸಿಯಾದ ಉದಾಹರಣೆಗಳು ಸಾಕಷ್ಟಿವೆ. ಅಂತೆಯೇ ಕ್ರೀಡಾಪಟುಗಳ ಮಕ್ಕಳು ಪ್ರಸಿದ್ಧ ರೂಪದರ್ಶಿ, ನಟರಾಗಿದ್ದಾರೆ. ಅವರಾರು ಇಲ್ಲಿದೆ ನೋಡಿ...

1 /5

ವಿಂದು ದಾರಾ ಸಿಂಗ್: ವಿಂದು ದಾರಾ ಸಿಂಗ್ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಉದ್ಯಮದಲ್ಲಿ ತಿಳಿದಿರುವ ಹೆಸರು. ಅವರು ಬಿಗ್ ಬಾಸ್ ಮೂರನೇ ಸೀಸನ್ ವಿಜೇತರಾಗಿದ್ದಾರೆ. ಇವರು ದಾರಾ ಸಿಂಗ್ ಅವರ ಮಗ.  ದಾರಾ ಸಿಂಗ್ ಅವರು ವೃತ್ತಿಪರ ಕುಸ್ತಿಪಟು ಮಾತ್ರವಲ್ಲದೆ, ನಟ ಮತ್ತು ರಾಜಕಾರಣಿಯೂ ಆಗಿದ್ದರು.

2 /5

ಸೋಹಾ ಅಲಿ ಖಾನ್: ಬಾಲಿವುಡ್ ಸೂಪರ್‌ಸ್ಟಾರ್ ಸೈಫ್ ಅಲಿ ಖಾನ್ ಸಹೋದರಿ ಮತ್ತು ಪಟೌಡಿಯವರ ಮಗಳು ಸೋಹಾ. ಅವರು ಹಿಂದಿ, ಬಂಗಾಳಿ ಮತ್ತು ಇಂಗ್ಲಿಷ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  

3 /5

ಸೈಫ್ ಅಲಿ ಖಾನ್: ಬಾಲಿವುಡ್ ಸೂಪರ್‌ಸ್ಟಾರ್ ಸೈಫ್ ಅಲಿ ಖಾನ್ ಅವರು ಭಾರತದ ಪ್ರಸಿದ್ಧ ಕ್ರಿಕೆಟಿಗ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿದ್ದ ನವಾಬ್ ಮೊಹಮ್ಮದ್ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಮಗ. ಪಟೌಡಿ 21 ನೇ ವಯಸ್ಸಿನಲ್ಲಿ ಭಾರತದ ಕ್ರಿಕೆಟ್ ನಾಯಕನಾಗಿ ನೇಮಕಗೊಂಡರು ಮತ್ತು "ಶ್ರೇಷ್ಠ" ಕ್ರಿಕೆಟರ್ ಎಂಬ ಕೀರ್ತಿಗೆ ಪಾತ್ರರಾದವರು.

4 /5

ದೀಪಿಕಾ ಪಡುಕೋಣೆ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಭಾರತದ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಅವರ ಮಗಳು. ಅವರು 1980 ರಲ್ಲಿ ವಿಶ್ವದ ನಂ. 1 ಶ್ರೇಯಾಂಕವನ್ನು ಪಡೆದರು. ಅದೇ ವರ್ಷ ಅವರು ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ಮೊದಲ ಭಾರತೀಯರಾದರು.

5 /5

ಸಾರಾ ತೆಂಡೂಲ್ಕರ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಜನಪ್ರಿಯ ಬಟ್ಟೆ ಬ್ರಾಂಡ್‌ಗಾಗಿ ಮಾಡೆಲಿಂಗ್ ಮಾಡುವ ಮೂಲಕ ಮಾಡೆಲಿಂಗ್ ಜಗತ್ತಿಗೆ ಹೆಜ್ಜೆ ಇಟ್ಟಿದ್ದಾರೆ. ಸಾರಾ ತಮ್ಮ ಚೊಚ್ಚಲ ಪ್ರಚಾರದ ಮಾಡೆಲಿಂಗ್ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ನಟಿ ಬನಿತಾ ಸಂಧು ಮತ್ತು ತಾನಿಯಾ ಶ್ರಾಫ್ ಕೂಡ ಇದ್ದಾರೆ. ಕ್ಷಣಾರ್ಧದಲ್ಲಿ ವಿಡಿಯೋ ವೈರಲ್ ಆಗಿದೆ.