SPLENDOR+ BS6 ಹೊಸ ಮಾಡೆಲ್ ಲಾಂಚ್ , ವೈಶಿಷ್ಟ್ಯಗಳೇನು ತಿಳಿಯಿರಿ

SPLENDOR + BS6 ಅನ್ನು 97.2 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಮುಂಭಾಗ ಮತ್ತು ಹಿಂಭಾಗದ ಬ್ರೇಕ್ ಡ್ರಮ್‌ಗಳು 130 ಎಂಎಂನದ್ದಾಗಿದೆ.

ನವದೆಹಲಿ : ಹೀರೋ ಕಂಪನಿಯು SPLENDOR +ನ ಹೊಸ ಮಾಡೆಲ್ ಅನ್ನು ಬಿಡುಗಡೆ ಮಾಡಿದೆ. ಹೊಸ ಮಾಡೆಲ್ ಉತ್ತಮ ತಂತ್ರಜ್ಞಾನದೊಂದಿಗೆ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಬೈಕ್‌ನ ಲುಕ್ ಗೂ ಹೆಚ್ಚಿನ ಗಮನ ನೀಡಲಾಗಿದೆ. SPLENDOR + BS6 ಸಿಲ್ವರ್ ಮತ್ತು ಕಪ್ಪು ಬಣ್ಣದಲ್ಲಿದ್ದು ಅತ್ಯಾಕರ್ಷಕವಾಗಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

SPLENDOR + BS6 ಅನ್ನು 97.2 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಮುಂಭಾಗ ಮತ್ತು ಹಿಂಭಾಗದ ಬ್ರೇಕ್ ಡ್ರಮ್‌ಗಳು 130 ಎಂಎಂನದ್ದಾಗಿದೆ. ಅಲ್ಲದೆ ಟ್ಯೂಬ್‌ಲೆಸ್ ಟೈರ್‌ಗಳನ್ನು  ಒದಗಿಸಲಾಗಿದೆ.  

2 /5

ಕಿಕ್ ಮತ್ತು ಸೆಲ್ಫ್ ಸ್ಟಾರ್ಟ್ ಎರಡೂ ಆವೃತ್ತಿಗಳಲ್ಲಿ SPLENDOR + BS6 ಅನ್ನು ಪರಿಚಯಿಸಲಾಗಿದೆ. ಕಿಕ್ ಸ್ಟಾರ್ಟ್ SPLENDOR + BS6 ಸುಮಾರು 110 ಕೆಜಿ ತೂಕವಿದ್ದರೆ, ಸೆಲ್ಫ್ ಸ್ಟಾರ್ಟ್ ಬೈಕ್ ನ ತೂಕವು ಸುಮಾರು 112 ಕೆಜಿ ಯಷ್ಟಾಗಿದೆ.   

3 /5

SPLENDOR + BS6 ಅನ್ನು ಸಮಯಕ್ಕನುಗುಣವಾಗಿ ಅಗತ್ಯಕ್ಕನುಗುಣವಾಗಿ ಅತ್ಯುತ್ತಮ ತಂತ್ರಜ್ಞಾನದೊಂದಿಗೆ ರಚಿಸಲಾಗಿದೆ. ಇನ್ನು ಬೆಲೆಯೂ ದುಬಾರಿಯಾಗಿಲ್ಲ ಎನ್ನಲಾಗಿದೆ. ದೆಹಲಿಯಲ್ಲಿ KICK START DRUM BRAKE ALLOY WHEEL-FI ಎಕ್ಸ್‌ಶೋರೂಂ ಬೆಲೆ 61,785 ರೂ ಮತ್ತು SELF START DRUM BRAKE ALLOY WHEEL-FI ಬೆಲೆ 64,085 ರೂ ಆಗಿದೆ.

4 /5

SPLENDOR + BS6 ನ ಹೊಸ ಮಾದರಿಯು 9.8 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. SPLENDOR + BS6 ಹಳೆಯ SPLENDOR ನಂತೆ ಅತ್ಯುತ್ತಮ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 

5 /5

ಭಾರತದ ಹೀರೋ ಮತ್ತು ಜಪಾನ್‌ನ ಹೋಂಡಾ ಕಂಪನಿ ಜಂಟಿಯಾಗಿ SPLENDOR ಪ್ರೊಡಕ್ಷನ್ ಶುರು ಮಾಡಿತ್ತು. . 2010 ರ ನಂತರ, ಹೀರೋ ಮತ್ತು ಹೋಂಡಾ ಕಂಪನಿ ಪ್ರತ್ಯೇಕಗೊಂಡವು. ನಂತರ ಕೂಡಾ SPLENDOR ನ ಕ್ರೇಜ್ ಮಾತ್ರ ಕಡಿಮೆಯಾಗಲಿಲ್ಲ.  SPLENDOR ನ ಲ್ಲಾ ಶ್ರೇಣಿಯ ಬೈಕ್ ಗಳನ್ನು ಮೊದಲಿನಂತೆಯೇ ಜನ ಷ್ಟಪಡುತ್ತಿದ್ದಾರೆ.