ಶೀಘ್ರದಲ್ಲೇ ಶುಕ್ರ-ಚಂದಿರರ ಮೈತ್ರಿಯಿಂದ ಕಲಾತ್ಮಕ ಯೋಗ ನಿರ್ಮಾಣ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ 3 ರಾಶಿಗಳ ಜನರಿಗೆ ಸಿಗಲಿದೆ ಅಪಾರ ಧನ ಸಂಪತ್ತು!

Shukra Chandra Yuti 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಶೀಘ್ರದಲ್ಲಿಯೇ ಕರ್ಕ ರಾಶಿಯಲ್ಲಿ ಶುಕ್ರ ಚಂದಿರರ ಮೈತ್ರಿಯಿಂದ ಕಲಾತ್ಮಕ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ರಾಜಯೋಗ ಮೂರು ರಾಶಿಗಳ ಜನರ ಪಾಲಿಗೆ ಅತ್ಯಂತ ಅದ್ಭುತ ಸಾಬೀತಾಗಲಿದ್ದು, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ರಾಶಿಗಳ ಜನರ ಜೀವನದಲ್ಲಿ ಅಪಾರ ಧನಪ್ರಾಪ್ತಿಯ ಯೋಗ ರೂಪುಗೊಳ್ಳುತ್ತಿದೆ (Spiritual News In Kannada).  
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಿತಿ ಪರಿವರ್ತನೆ ಪ್ರಭಾವ ಎಲ್ಲಾ ರಾಶಿಗಳ ಜಾತಕದವರ ಜೀವನದ ಮೇಲೆ ಉಂಟಾಗುತ್ತದೆ. ಹೀಗಿರುವಾಗ ವಿಲಾಸಿ ಜೀವನ ದಯಪಾಲಿಸುವ ಶುಕ್ರ ಗ್ರಹ ತನ್ನ ರಾಶಿ ಪರಿವರ್ತಿಸಿದಾಗ ಅದರ ಪ್ರಭಾವ ಕೂಡ ನವಗ್ರಹಗಳ ಮೇಲೆ ಗೋಚರಿಸುತ್ತದೆ. ಅದೇ ರೀತಿ ಚಂದ್ರ ಕೂಡ ಅತ್ಯಂತ ವೇಗವಾಗಿ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಚಂದ್ರ ಒಂದು ರಾಶಿಯಲ್ಲಿ ಎರಡೂವರೆ ದಿನ ಇರುತ್ತಾನೆ. ಜೋತಿಷ್ಯ ಪಂಚಾಂಗದ ಪ್ರಕಾರ ಆಗಸ್ಟ್ 13, 2023 ರಂದು ಚಂದ್ರ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಆದರೆ, ಕರ್ಕ ರಾಶಿಗೆ ಈಗಾಗಲೇ ವಕ್ರಾವಸ್ಥೆಯಲ್ಲಿ ಪ್ರವೇಶಿಸಿರುವ ಶುಕ್ರ ಅಸ್ತಭಾವದಲ್ಲಿದ್ದಾನೆ(Spiritual News In Kannada). ಈ ಕಾರಣದಿಂದಾಗಿ, ಅಲ್ಲಿ ಶುಕ್ರ-ಚಂದಿರನ ಮೈತ್ರಿ ನೆರವೇರಲಿದೆ ಮತ್ತು ಕಲಾತ್ಮಕ ರಾಜಯೋಗ ಎಂಬ ಶುಭ ಯೋಗ ನಿರ್ಮಾಣಗೊಳ್ಳುತ್ತಿದೆ. ಒಂದು ವೇಳೆ ವ್ಯಕ್ತಿಯ ಗೋಚರ ಜಾತಕದಲ್ಲಿ ಶುಕ್ರನ ಸ್ಥಿತಿ ಉತ್ತಮವಾಗಿದ್ದರೆ, ಅಂತಹ ವ್ಯಕ್ತಿ ರಚನಾತ್ಮಕವಾಗಿರುವುದರ ಜೊತೆಗೆ ಸುಖ-ಸೌಕರ್ಯಗಳಿಂದ ಸಂಪನ್ನರಾಗಿರುತ್ತಾರೆ. ಹಾಗಾದರೆ ಬನ್ನಿ ಕಲಾತ್ಮಕ ಯೋಗ ಯಾವಾಗ ನಿರ್ಮಾಣಗೊಳ್ಳುತ್ತಿದೆ ಮತ್ತು ಯಾವ ಯಾವ ರಾಶಿಗಳ ಜಾತಕದವರಿಗೆ ಅದು ಅತ್ಯಂತ ಶುಭ ಸಾಬೀತಾಗಲಿದೆ ತಿಳಿದುಕೊಳ್ಳೋಣ, 

 

ಇದನ್ನೂ ಓದಿ-ಮುಂದಿನ 10 ದಿನಗಳ ಕಾಲ ಈ ರಾಶಿಗಳ ಜನರಿಗೆ ಅಷ್ಟೈಶ್ವರ್ಯ ಕರುಣಿಸಲಿದ್ದಾಳೆ ಐಶ್ವರ್ಯ ಲಕ್ಷ್ಮಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಪಂಚಾಂಗದ ಪ್ರಕಾರ ಪ್ರಸ್ತುತ ಶುಕ್ರಗ್ರಹ ತನ್ನ ವಕ್ರಾವಸ್ಥೆಯಲ್ಲಿ ಕರ್ಕ ರಾಶಿಗೆ ಪ್ರವೇಶಿಸಿದ್ದಾನೆ ಮತ್ತು ಅಸ್ತ ಭಾವದಲ್ಲಿದ್ದಾನೆ. ಇದರ ಜೊತೆಗೆ ಆಗಸ್ಟ್ 13 ಬೆಳಗ್ಗೆ 4 ಗಂಟೆ 25 ನಿಮಿಷಕ್ಕೆ ಚಂದ್ರ ಕೂಡ ಕರ್ಕರಾಶಿಗೆ ಪ್ರವೇಶಿಸಲಿದ್ದಾನೆ ಮತ್ತು ಆತ ಅಲ್ಲಿ ಆಗಸ್ಟ್ 16, 2023ರ ಸಂಜೆ 4 ಗಂಟೆ 47 ನಿಮಿಷಗಳವರೆಗೆ ಇರಲಿದ್ದಾನೆ.   

2 /5

ಮಿಥುನ ರಾಶಿ: ಶುಕ್ರ ಚಂದಿರರ ಯುತಿಯಿಂದ ನಿರ್ಮಾಣ ಗೊಳ್ಳುತ್ತಿರುವ ಈ ಕಲಾತ್ಮಕ ಯೋಗ ಮಿಥುನ ರಾಶಿಯ ಜಾತಕದವರಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಹೀಗಿರುವಾಗ ಈ ರಾಶಿಯ ಜಾತಕದವರಿಗೆ ವಿದೇಶಕ್ಕೆ ಹೋಗುವ ಭಾಗ್ಯ ಪ್ರಾಪ್ತಿಯಾಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಬಿಸ್ನೆಸ್ ನಲ್ಲಿ ನೀವು ಪಟ್ಟ ಶ್ರಮಕ್ಕೆ ತಕ್ಕ ಫಲ ಪ್ರಾಪ್ತಿಯಾಗಲಿದೆ. ಇದಲ್ಲದೆ ಸಮಾಜದಲ್ಲಿ ನಿಮ್ಮ ಘನತೆ ಗೌರವ ಸಾಕಷ್ಟು ಹೆಚ್ಚಾಗಲಿದೆ.   

3 /5

ಕರ್ಕ ರಾಶಿ: ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಶುಕ್ರ ವಕ್ರನಾಗಿದ್ದಾನೆ. ಹೀಗಿರುವಾಗ ಕಲಾತ್ಮಕ ರಾಜಯೋಗ ಕರ್ಕ ಜಾತಕದವರಿಗೆ ಸಾಕಷ್ಟು ಲಾಭಗಳನ್ನು ತಂದುಕೊಡಲಿದೆ. ಒಂದು ಸುಖದಿಂದ ಕೂಡಿದ ವ್ಯಕ್ತಿತ್ವದಲ್ಲಿ ಭಾರಿ ಬದಲಾವಣೆ ಕಂಡುಬರುವ ಸಕಲ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನಿಮಗೆ ಕುಟುಂಬ ಸದಸ್ಯರ ಸಾಥ್ ಸಿಗಲಿದೆ. ಅವರು ನೀಡಿದ ಸಲಹೆಯನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಧನಲಾಭವಾಗುವ ಸಂಪೂರ್ಣ ಸಾಧ್ಯತೆಗಳಿವೆ. ರಚನಾತ್ಮಕ ಕಾರ್ಯಗಳಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ.   

4 /5

ಮಕರ ರಾಶಿ: ಕಲಾತ್ಮಕ ರಾಜಯೋಗ ನಿಮಗೂ ಕೂಡ ಅತ್ಯಂತ ಶುಭ ಸಾಬೀತಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ನೀವು ಯಾವುದಾದರೊಂದು ವಿಶೇಷ ವಿಷಯದ ಮೇಲೆ ಚರ್ಚೆ ನಡೆಸುವ ಸಾಧ್ಯತೆ ಇದೆ. ದೀರ್ಘಾವಧಿಯಿಂದ ನಡೆದುಕೊಂಡು ಬಂದಿರುವ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಬಾಳಸಂಗಾತಿಯ ಜೊತೆಗೆ ಸೇರಿ ಅಧಿಕ ಖರ್ಚು ಮಾಡುವಿರಿ. ಆದರೆ ಇದರೊಂದಿಗೆ ಆದಾಯದ ಹೊಸ ಮೂಲಗಳು ಕೂಡ ತೆರೆದುಕೊಳ್ಳಲಿದ್ದು, ನಿಮಗೆ ಧನಲಾಭದ ಜೊತೆಗೆ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)