Special Yoga Formation: ಹಿಂದೂ ಧರ್ಮದಲ್ಲಿ ಜಾತಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಇದು ವ್ಯಕ್ತಿಯ ಜನ್ಮದಿನದಿಂದ ಹಿಡಿದು ಸಾಯುವವರೆಗೆ ಅಗತ್ಯ ಮಾಹಿತಿಗಳನ್ನು ನೀಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜಾತಕವು ವಿಭಿನ್ನವಾಗಿರುತ್ತದೆ.
ಇನ್ನು ಜಾತಕದಲ್ಲಿ ಯಾವ ಗ್ರಹಗಳು ಬಲಶಾಲಿ ಮತ್ತು ದುರ್ಬಲವಾಗಿವೆ? ಯಾವ ಯೋಗಗಳು ರಾಶಿಗಳ ಜನರ ವೃತ್ತಿಜೀವನವನ್ನು ವೇಗಗೊಳಿಸುತ್ತವೆ? ಹಾಗೆಯೇ ಯಾವ ದೋಷಗಳು ಜೀವನದಲ್ಲಿ ತೊಂದರೆಗಳನ್ನು ಉಂಟುಮಾಡುತ್ತವೆ? ಎಂಬುದನ್ನು ತೋರಿಸುತ್ತದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕೆಲವು ಯೋಗಗಳನ್ನು ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರ ಮತ್ತು ಅಪರೂಪವೆಂದು ವಿವರಿಸಲಾಗಿದೆ. ಈ ಯೋಗಗಳು ವ್ಯಕ್ತಿಯ ಜಾತಕದಲ್ಲಿ ಇದ್ದರೆ ಜೀವನದಲ್ಲಿ ಸಂಪತ್ತು, ಸ್ಥಾನ, ಪ್ರತಿಷ್ಠೆ, ಗೌರವ ಸಿಗುತ್ತದೆ ಎನ್ನಲಾಗುತ್ತದೆ.
ಬುಧಾದಿತ್ಯ ಯೋಗ: ಜಾತಕದಲ್ಲಿ ಬುಧಾದಿತ್ಯ ಯೋಗ ಇರುವವರು ಬುದ್ಧಿವಂತಿಕೆ ಮತ್ತು ಜ್ಞಾನದಲ್ಲಿ ಪಾಂಡಿತ್ಯವನ್ನು ಪಡೆಯುತ್ತಾರೆ. ಈ ಗುಣಗಳ ಆಧಾರದ ಮೇಲೆ ಬಹಳಷ್ಟು ಹಣವನ್ನು ಗಳಿಸುತ್ತಾರೆ. ಕೈ ಹಾಕುವ ಪ್ರತೀ ಕೆಲಸದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸುತ್ತಾರೆ. ಇನ್ನು ವೃಷಭ ರಾಶಿಯವರಿಗೆ ಈ ಯೋಗವು ಶುಭ ತರಲಿದೆ.
ಧನಲಕ್ಷ್ಮೀ ಯೋಗ: ಜಾತಕದಲ್ಲಿ ಧನಲಕ್ಷ್ಮೀ ಯೋಗ ಇರುವವರ ಜೀವನದಲ್ಲಿ ಹಣದ ಕೊರತೆಯಿಲ್ಲ. ಈ ಜನರಿಗೆ ಯಶಸ್ಸು ಸಿಗುತ್ತದೆ. ಈ ಯೋಗವಿರುವವರು ಷೇರು ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಸಿಂಹ ರಾಶಿಯವರ ಅದೃಷ್ಟವನ್ನೇ ಬದಲಿಸಲಿದೆ ಈ ಧನಲಕ್ಷ್ಮೀ ಯೋಗ.
ರಾಹು: ಸಾಮಾನ್ಯವಾಗಿ ರಾಹು ದುಷ್ಟ ಗ್ರಹ ಎಂದು ಜನರು ಹೇಳುತ್ತಾರೆ. ರಾಹು ಯಾವಾಗಲೂ ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಾನೆ ಎನ್ನಲಾಗುತ್ತದೆ. ಆದರೆ ಯಾರ ಜಾತಕದಲ್ಲಿ ರಾಹು ಅನುಕೂಲಕರ ಸ್ಥಾನದಲ್ಲಿದ್ದಾನೋ, ಅಂತಹ ಜನರು ಬಹಳಷ್ಟು ಹಣವನ್ನು ಪಡೆಯುತ್ತಾರೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)