Laxmi Narayan Yog: ಫೆಬ್ರವರಿ ತಿಂಗಳಿನಲ್ಲಿ ವಿಶೇಷ ಲಕ್ಷ್ಮೀ ನಾರಾಯಣ ಯೋಗ, 5 ರಾಶಿಯವರಿಗೆ ಸಿರಿವಂತರಾಗುವ ಯೋಗ

Laxmi Narayan Yog: ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಯೋಗಗಳನ್ನು ಶುಭ ಯೋಗಗಳು ಎಂದು ಬಣ್ಣಿಸಲಾಗುತ್ತದೆ. ಅಂತಹ ಯೋಗಗಳಲ್ಲಿ ಲಕ್ಷ್ಮೀ ನಾರಾಯಣ ಯೋಗವೂ ಒಂದು . ಮುಂದಿನ ತಿಂಗಳು ಲಕ್ಷ್ಮೀ ನಾರಾಯಣ ಯೋಗದಿಂದ ಕೆಲವು ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗಲಿವೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಲಕ್ಷ್ಮೀ ನಾರಾಯಣ ಯೋಗ:  ವೈದಿಕ ಜ್ಯೋತಿಷ್ಯದಲ್ಲಿ ಕೆಲವು ಯೋಗಗಳನ್ನು ಮಂಗಳಕರ ಯೋಗಗಳು ಎಂದು ಬಣ್ಣಿಸಲಾಗುತ್ತದೆ. ಅಂತಹ ಯೋಗಗಳಲ್ಲಿ ಲಕ್ಷ್ಮೀ ನಾರಾಯಣ ಯೋಗವೂ ಒಂದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮೀ ನಾರಾಯಣ ಯೋಗವು ಬುಧ ಮತ್ತು ಶುಕ್ರನ ಸಂಯೋಗದಿಂದ ಉಂಟಾಗುತ್ತದೆ

2 /8

ಮಕರ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗ:  ಫೆಬ್ರವರಿ ತಿಂಗಳಿನಲ್ಲಿ ಶುಕ್ರ ಮತ್ತು ಬುಧ ಗ್ರಹಗಳು ಮಕರ ರಾಶಿಯನ್ನು ಪ್ರವೇಶಿಸಲಿದ್ದು ಇದರಿಂದಾಗಿ ಅತ್ಯಂತ ಶುಭ ಯೋಗಗಳಲ್ಲಿ ಒಂದಾದ ಲಕ್ಷ್ಮೀ ನಾರಾಯಣ ಯೋಗ ನಿರ್ಮಾಣವಾಗಲಿದೆ. 

3 /8

ಲಕ್ಷ್ಮೀ ನಾರಾಯಣ ಯೋಗ ಪ್ರಭಾವ:  ಲಕ್ಷ್ಮೀ ನಾರಾಯಣ ಯೋಗವು ಎಲ್ಲಾ 12 ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದಾಗ್ಯೂ, ಫೆಬ್ರವರಿ ತಿಂಗಳಿನಲ್ಲಿ ರೂಪುಗೊಳ್ಳಲಿರುವ ಲಕ್ಷ್ಮೀ ನಾರಾಯಣ ಯೋಗವು ಐದು ರಾಶಿಯವರ ಜೀವನದಲ್ಲಿ ಆದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. ಆ ಅದೃಷ್ಟದ ರಾಶಿಗಳೆಂದರೆ.... 

4 /8

ಮೇಷ ರಾಶಿ:  ಲಕ್ಷ್ಮೀ ನಾರಾಯಣ ಯೋಗದಿಂದಾಗಿ ಮೇಷ ರಾಶಿಯವರಿಗೆ ಹಣಕಾಸಿನ ವಿಚಾರವಾಗಿ ಭಾರೀ ಲಾಭವಾಗಲಿದೆ. ಈ ಸಮಯದಲ್ಲಿ ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿ ಆಶೀರ್ವಾದಿಂದಾಗಿ ನೀವು ಕೈಹಾಕುವ ಕೆಲಸಗಳಲ್ಲೂ ಯಶಸ್ಸು ನಿಮ್ಮದಾಗಲಿದೆ. 

5 /8

ಮಿಥುನ ರಾಶಿ:  ಲಕ್ಷ್ಮೀ ನಾರಾಯಣ ಯೋಗವು ಮಿಥುನ ರಾಶಿಯವರಿಗೂ ಸಹ ಆರ್ಥಿಕ ಸ್ಥಿತಿಯನ್ನು ಸುದಾರಿಸಲಿದೆ. ಉದ್ಯೋಗಿಗಳಿಗೆ ಪ್ರಮೋಷನ್ ಸಾಧ್ಯತೆ ಇದ್ದರೆ, ವ್ಯಾಪಾರಸ್ಥರಿಗೆ ಹಣಕಾಸಿನ ಮೂಲಗಳು ಹೆಚ್ಚಾಗಲಿವೆ. ಒಟ್ಟಾರೆಯಾಗಿ ಈ ಸಮಯದಲ್ಲಿ ನೀವು ಕೈಗೊಳ್ಳುವ ಕೆಲಸಗಳೆಲ್ಲವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. 

6 /8

ಕರ್ಕಾಟಕ ರಾಶಿ:  ಕರ್ಕಾಟಕ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ ತುಂಬಾ ಫಲಪ್ರದವಾಗಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ನಿಮ್ಮ ಬದುಕಿನಲ್ಲಿ ಸಂತೋಷ ಹೆಚ್ಚಾಗಲಿದೆ. ವೃತ್ತಿ ಬದುಕಿನಲ್ಲಿ ಪ್ರಗತಿ ಹೊಂದಲು ನಿಮ್ಮ ಕುಟುಂಬ ನಿಮ್ಮ ಬೆನ್ನೆಲುಬಾಗಿ ನಿಲ್ಲಲಿದೆ. 

7 /8

ಧನು ರಾಶಿ:  ಲಕ್ಷ್ಮೀ ನಾರಾಯಣ ಯೋಗವು ಧನು ರಾಶಿಯವರ ಜೀವನದಲ್ಲಿ ಸಂತೋಷ-ಸಮೃದ್ಧಿಯನ್ನು ತರುತ್ತದೆ. ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವವರಿಗೂ ಶುಭ ಸಮಯ ಇದಾಗಿದ್ದು ಹಣಕಾಸಿನ ಪರಿಸ್ಥಿತಿಗಳು ನಿಮ್ಮ ಹಿಡಿತಕ್ಕೆ ಬರಲಿವೆ. ಇದಕ್ಕಾಗಿ ನಿಮ್ಮ ಬಾಳ ಸಂಗಾತಿಯು ಸಂಪೂರ್ಣ ಬೆಂಬಲವನ್ನು ನೀಡಲಿದ್ದಾರೆ. 

8 /8

ಮಕರ ರಾಶಿ:  ಲಕ್ಷ್ಮೀ ನಾರಾಯಣ ಯೋಗವು ಮಕರ ರಾಶಿಯವರ ಬದುಕಿನಲ್ಲಿ ಬಂಗಾರದ ಸಮಯವನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ನಿಮಗೆ ಭೂಮಿ ಖರೀದಿಯಿಂದ ಲಾಭವಾಗಲಿದೆ. ಉದ್ಯೋಗದಲ್ಲಿ ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಅನುಭವಿಸುವಿರಿ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.