Sai Pallavi Dating With Bollywood Star: ಸೌತ್ ಬ್ಯೂಟಿ ಸಾಯಿ ಪಲ್ಲವಿ ಬಗ್ಗೆ ವಿಶೇಷವಾಗಿ ಹೇಳಲೂ ಏನು ಇಲ್ಲ.. ತಮ್ಮ ಅದ್ಭುತ ಸೌಂದರ್ಯ ಹಾಗೂ ನಟನೆಯ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಇದೀಗ ಈ ನಟಿಯ ಡೇಟಿಂಗ್ ಕುರಿತಾದ ಶಾಕಿಂಗ್ ಮಾಹಿತಿ ಹೊರಬಿದ್ದಿದೆ..
ಸೌತ್ ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಸಾಯಿ ಪಲ್ಲವಿ ಅವರ ಸಿನಿಮಾಗಳು ಅಷ್ಟಾಗಿ ಹಿಟ್ ಆಗದೇ ಇದ್ದರೂ ಅವರ ಜನಪ್ರಿಯತೆಗೆ ಕಮ್ಮಿಯಿಲ್ಲ.. ಸ್ಟಾರ್ ನಟಿಯರಿಗೆ ಇರುವಷ್ಟು ಕ್ರೇಜ್ ಅವರಿಗಿದೆ..
ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಈ ನ್ಯಾಚುರಲ್ ಬ್ಯೂಟಿ ಸದ್ಯ ಬಾಲಿವುಡ್‌ಗೆ ಪ್ರವೇಶ ಮಾಡಿದ್ದಾರೆ.. ರಾಮಾಯಣ ಸಿನಿಮಾದ ಮೂಲಕ ನಟಿ ಅಲ್ಲಿಯೂ ಮಿಂಚಹೊರಟಿದ್ದಾರೆ..
ಸದ್ಯ ಬಾಲಿವುಡ್ ವಲಯದಲ್ಲಿ ಸಾಯಿ ಪಲ್ಲವಿ ಕುರಿತಾದ ಕೆಲವು ವದಂತಿಗಳು ಹರಿದಾಡುತ್ತಿವೆ.. ದಕ್ಷಿಣ ಭಾರತದ ಚೆಲುವೆಯರಲ್ಲಿ ಅಗ್ರಸ್ಥಾನದಲ್ಲಿರುನ ನಟಿ ಮೇಕಪ್ ಮಾಡಿಕೊಳ್ಳದೇ ನ್ಯಾಚುರಲ್ ಆಗಿ ನಟಿಸಿ ಹೆಸರು ಮಾಡುತ್ತಿದ್ದಾರೆ.. ಆದರೆ ಇವರು ಎಷ್ಟೇ ಶಾಂತವಾಗಿದ್ರೂ ವಿವಾದಗಳು ಇವರನ್ನು ಹುಡುಕಿಕೊಂಡು ಬರುತ್ತವೆ..
ರಾಮಾಯಣದಲ್ಲಿ ಬ್ಯುಸಿಯಾಗಿರುವ ನಟಿ ಸಾಯಿ ಪಲ್ಲವಿ ವಿರುದ್ಧ ಸಾಕಷ್ಟು ಗಾಸಿಪ್‌ಗಳನ್ನು ಹುಟ್ಟುಹಾಕಲಾಗುತ್ತಿದೆ.. ಈ ಸಿನಿಮಾದಲ್ಲಿ ನಟಿ ರಣಬೀರ್ ಕಪೂರ್ ಅವರೊಂದಿಗೆ ನಟಿಸಲಿದ್ದಾರೆ.. ಇದೇ ಹೊತ್ತಲ್ಲೇ ಅವರ ಡೇಟಿಂಗ್ ಸುದ್ದಿಯೊಂದು ಸಖತ್ ಸದ್ದು ಮಾಡುತ್ತಿದೆ..
ಸಾಯಿ ಪಲ್ಲವಿ ಸುತ್ತ ಹರಿದಾಡುತ್ತಿರೋ ಈ ವದಂತಿ ಏನೆಂದರೇ ಅವರು ಎರಡು ಮಕ್ಕಳ ತಂದೆಯೊಂದಿಗೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.. ಆದರೆ ಅವರೂ ನಟ ಎನ್ನುವುದು.. ಆದರೆ ಇದು ನಂಬಲಾರ್ಹವಾದ ಸುದ್ದಿಯಂತೂ ಅಲ್ಲ.. ಹೀಗಾಗಿ ಅವರ ಫ್ಯಾನ್ಸ್ ಇದು ಅವರ ಇಮೇಜ್ ಡ್ಯಾಮೇಜ್ ಮಾಡುವ ಹುನ್ನಾರ ಎಂದು ಇಗ್ನೋರ್ ಮಾಡಿದ್ದಾರೆ..
ಯಾವಾಗಲೂ ವಿವಾದಗಳಿಂದ ದೂರವಿರುವ ನಟಿ ಸಾಯಿ ಪಲ್ಲವಿ ಮೇಲೆ ಈ ರೀತಿಯ ಗಾಸಿಪ್ ಕ್ರಿಯೆಟ್ ಮಾಡಿ ಅವರನ್ನು ಕೆಳಗೆ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಚರ್ಚೆಯೊಂದು ಸೋಷಿಯಲ್ ಮಿಡಿಯಾದಲ್ಲಿ ನಡೆಯುತ್ತಿದೆ..