Solar Eclipse: ದೀಪಾವಳಿಯಂದು ಸೂರ್ಯಗ್ರಹಣ! ಗಣೇಶ-ಲಕ್ಷ್ಮಿ ಪೂಜೆ ಹೇಗೆ ಮಾಡ್ತಾರೆ ಗೊತ್ತಾ?

ಸೂರ್ಯಗ್ರಹಣದ ದಿನಾಂಕ ಮತ್ತು ಸಮಯದ ಜೊತೆಗೆ ಈ ಅವಧಿಯಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯಿರಿ.

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ಸೂರ್ಯಗ್ರಹಣವಿರುತ್ತದೆ. ಇದು ಈ ವರ್ಷದ ಮೊದಲ ಸೂರ್ಯಗ್ರಹಣವಾಗಿದ್ದು, ಇದು ಭಾರತದಲ್ಲಿಯೂ ಗೋಚರಿಸುತ್ತದೆ. ಸೂರ್ಯಗ್ರಹಣ-ದೀಪಾವಳಿಯನ್ನು ಒಟ್ಟಿಗೆ ಆಚರಿಸುವ ಬಗ್ಗೆ ಜನರಲ್ಲಿ ಗೊಂದಲ ಮತ್ತು ಅನುಮಾನಗಳು ಹುಟ್ಟಿಕೊಂಡಿವೆ. ಈ ಬಾರಿ ದೀಪಾವಳಿಯನ್ನು ಆಚರಿಸಬೇಕೇ ಅಥವಾ ಬೇಡವೇ? ಮಂಗಳಕರ ಮತ್ತು ಲಕ್ಷ್ಮಿಯ ಸಂಕೇತವಾದ ಗಣೇಶ ಮತ್ತು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆಯೇ ಅಥವಾ ಇಲ್ಲವೇ? ಇವು ಜನರನ್ನು ಕಾಡುತ್ತಿರುವ ಪ್ರಶ್ನೆಗಳು.

ಇಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮತ್ತು ಅನುಮಾನಗಳ ನಿವಾರಣೆಗೆ ಇಲ್ಲಿದೆ ಮಾಹಿತಿ. ಸೂರ್ಯಗ್ರಹಣದ ದಿನಾಂಕ ಮತ್ತು ಸಮಯದ ಜೊತೆಗೆ ಈ ಅವಧಿಯಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಸಹ ನಾವು ಇಲ್ಲಿ ನಿಮಗೆ ತಿಳಿಸುತ್ತೇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಈ ಬಾರಿ ನೀವು ಬೆಳಕಿನ ಹಬ್ಬ ದೀಪಾವಳಿ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದೆ. 2 ವರ್ಷಗಳ ಕೊರೊನಾ ಸಾಂಕ್ರಾಮಿಕದ ನಂತರ ದೀಪಾವಳಿ ಆಚರಿಸಲು ಜನರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನೀವೂ ಸಹ ನಿಮ್ಮ ಮನೆಯನ್ನು ದೀಪಗಳಿಂದ ಅಲಂಕರಿಸಿ ಗಣೇಶ ಮತ್ತು ಸಂಪತ್ತಿನ ಅಧಿದೇವತೆ ಲಕ್ಷ್ಮಿದೇವಿಯನ್ನು ಪೂಜಿಸಬೇಕು. ಇದರಿಂದ ನಿಮಗೆ ಸಂತೋಷ, ಶಾಂತಿ-ಸಂಪತ್ತು ಇತ್ಯಾದಿ ದೊರೆಯುವಂತೆ ಪಾರ್ಥಿಸಬೇಕು. ದೀಪಾವಳಿ ಹಬ್ಬವು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಬರುತ್ತದೆ. ಈ ಬಾರಿ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿಯು ಅ.24 ರಂದು ಸಂಜೆ 4.44ರವರೆಗೆ ಇದ್ದು, ನಂತರ ಅಮವಾಸ್ಯೆ ನಡೆಯುತ್ತದೆ. ಈ ರೀತಿ ನೀವು ಅ.24ರಂದು ದೀಪಾವಳಿ ಮತ್ತು ನರಕ ಚತುರ್ದಶಿಯನ್ನು ಸಹ ಆಚರಿಸಬಹುದು.

2 /4

ಖಂಡಗ್ರಾಸ ಸೂರ್ಯಗ್ರಹಣವು ಕಾರ್ತಿಕ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನದಂದು ಅಂದರೆ ಮಂಗಳವಾರ ಅ.25ರಂದು ಸಂಭವಿಸುತ್ತದೆ. ಗ್ರಹಣ ಹೇಗೇ ಇರಲಿ ಅದರ ಬಗ್ಗೆ ಭಯ ಪಡುವ ಅಗತ್ಯವಿಲ್ಲವೆಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದನ್ನು ಸಿದ್ಧಿಗಳ ಮಹಾನ್ ಹಬ್ಬವೆಂದು ಪರಿಗಣಿಸಲಾಗಿದೆ, ಆದ್ದರಿಂದ ಋಷಿಗಳು ಇದನ್ನು ಸಿದ್ಧಿಕಲ್ ಎಂದು ಕರೆಯುತ್ತಾರೆ. ಗ್ರಹಣ ಕಾಲದಲ್ಲಿಯೇ ಶ್ರೀರಾಮನು ಗುರು ವಶಿಷ್ಠರಿಂದ ಮತ್ತು ಶ್ರೀ ಕೃಷ್ಣನು ಸಂದೀಪನ ಗುರುಗಳಿಂದ ದೀಕ್ಷೆಯನ್ನು ಪಡೆದನು. ಧರ್ಮಗ್ರಂಥಗಳ ಪ್ರಕಾರ ಸೂರ್ಯಾಸ್ತದ ನಂತರ ಸಂಭವಿಸುವ ಸೂರ್ಯಗ್ರಹಣವು ಹೆಚ್ಚು ಪರಿಣಾಮಕಾರಿಯಲ್ಲ.

3 /4

ಭಾರತೀಯ ಕಾಲಮಾನದ ಪ್ರಕಾರ ಗ್ರಹಣದ ಸ್ಪರ್ಶವು ದಿನದಲ್ಲಿ 4:31ಕ್ಕೆ ಇರುತ್ತದೆ, ಮಧ್ಯದಲ್ಲಿ 5:14ಕ್ಕೆ ಮತ್ತು ಮೋಕ್ಷವು 5:57ಕ್ಕೆ ಇರುತ್ತದೆ. ಇದರ ಸೂತಕ ಭಾರತೀಯ ಕಾಲಮಾನ ಬೆಳಗ್ಗೆ 4:31ರಿಂದ ಪ್ರಾರಂಭವಾಗುತ್ತದೆ. ಗ್ರಹಣವು ಸ್ವಾತಿ ನಕ್ಷತ್ರ ಮತ್ತು ತುಲಾ ರಾಶಿಯ ಮೇಲೆ ಇರುತ್ತದೆ. ಆದ್ದರಿಂದ ಈ ರಾಶಿಯ ಜನರು ರೋಗ, ನೋವು ಮತ್ತು ಸಂಕಟಗಳಿಗೆ ತುತ್ತಾಗಬಹುದು. ಹೀಗಾಗಿ ಈ ರಾಶಿಯ ಜನರು ಗ್ರಹಣವನ್ನು ನೋಡಬಾರದು.

4 /4

ಈ ಗ್ರಹಣವು ಭಾರತ, ಗ್ರೀನ್‌ಲ್ಯಾಂಡ್, ಸ್ವೀಡನ್, ನಾರ್ವೆ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಸ್ಪೇನ್, ಯೆಮೆನ್, ಓಮನ್, ಸೌದಿ ಅರೇಬಿಯಾ, ಈಜಿಪ್ಟ್, ಇಟಲಿ, ಪೋಲೆಂಡ್, ರೊಮೇನಿಯಾ, ಆಸ್ಟ್ರಿಯಾ, ಗ್ರೀಸ್, ಟರ್ಕಿ, ಇರಾಕ್, ಇರಾನ್, ಪಾಕಿಸ್ತಾನ, ಅಫ್ಘಾನಿಸ್ತಾನ, ಉತ್ತರ ಮತ್ತು ಪಶ್ಚಿಮ ಶ್ರೀಲಂಕಾ, ಮಾಸ್ಕೋ, ಪಶ್ಚಿಮ ರಷ್ಯಾ, ನೇಪಾಳ ಮತ್ತು ಭೂತಾನ್‍ನಲ್ಲಿ ಗೋಚರಿಸುತ್ತದೆ.