ಈ ಟ್ರಿಕ್ ಬಳಸಿದರೆ ಫೋನ್ ಅನ್ನು ಫಟಾ ಫಟ್ ಚಾರ್ಜ್ ಮಾಡಬಹುದು

 ಇವತ್ತು ನಾವು  Android ಸ್ಮಾರ್ಟ್‌ಫೋನ್ ಮತ್ತು iPhone ಎರಡರಲ್ಲೂ ಇರುವಂತಹ ಕೆಲವು ವೈಶಿಷ್ಟ್ಯಗಳ ಬಗ್ಗೆ ಮಾತನಾಡುತ್ತಿದ್ದೇವೆ. 

ನವದೆಹಲಿ :  ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್‌ ಬಳಸದ ವ್ಯಕ್ತಿಯೇ ಇಿಲ್ಲ. ವಿಭಿನ್ನ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಪ್ರತಿಯೊಂದು ಬ್ರಾಂಡ್‌ನ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು ಮರೆಮಾಡಲಾಗಿರುತ್ತದೆ. ಇವತ್ತು ನಾವು  Android ಸ್ಮಾರ್ಟ್‌ಫೋನ್ ಮತ್ತು iPhone ಎರಡರಲ್ಲೂ ಇರುವಂತಹ ಕೆಲವು ವೈಶಿಷ್ಟ್ಯಗಳ ಬಗ್ಗೆ ಮಾತನಾಡುತ್ತಿದ್ದೇವೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಎಲ್ಲಾ ಸ್ಮಾರ್ಟ್‌ಫೋನ್‌ಗಳು 'ಏರ್‌ಪ್ಲೇನ್ ಮೋಡ್' ಅನ್ನು ಹೊಂದಿರುತ್ತವೆ. ಇದನ್ನು ಸಾಮಾನ್ಯವಾಗಿ  ವಿಮಾನದಲ್ಲಿ ಪ್ರಯಾಣಿಸುವಾಗ ಬಳಸಲಾಗುತ್ತದೆ. ಫೋನ್ ಅನ್ನು ಚಾರ್ಜ್ ಮಾಡುವಾಗ ಈ ಮೋಡ್ ಅನ್ನು ಆನ್ ಮಾಡಿದರೆ,  ಫೋನ್ ಹೆಚ್ಚು ವೇಗವಾಗಿ ಚಾರ್ಜ್ ಆಗುತ್ತದೆ.

2 /5

ನಿಮ್ಮ Android ಸ್ಮಾರ್ಟ್‌ಫೋನ್ ವಿಶೇಷ ಧ್ವನಿ ಸಹಾಯಕ ವೈಶಿಷ್ಟ್ಯವನ್ನು ಹೊಂದಿದೆ, ಇದನ್ನು ಬಳಸಿಕೊಂಡು ಫೋನ್‌ನ ಹಲವು ವೈಶಿಷ್ಟ್ಯಗಳನ್ನು ಉಪಯೋಗಿಸಬಹುದು.  Siri, Google Now ಮತ್ತು Cortna ನಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ, 'turn on WiFi'turn of WiFi ಎಂಬ ವಾಯ್ಸ್ ಕಮಾಂಡ್ ಮೂಲಕ ವೈಫೈ ಅನ್ನು ನಿರ್ವಹಿಸಬಹುದು. 

3 /5

ನಿಮ್ಮ ಸ್ಮಾರ್ಟ್‌ಫೋನ್‌ನ ಪ್ರಮಾಣಿತ ಕೀಬೋರ್ಡ್ ನಿಮಗೆ ಇಷ್ಟವಾಗದಿದ್ದರೆ,  ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಥರ್ಡ್ ಪಾರ್ಟಿ ಕೀಬೋರ್ಡ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. Gboard ನಂತಹ ಈ ಅಪ್ಲಿಕೇಶನ್‌ಗಳಲ್ಲಿ, ನೀವು ಬ್ಯಾಕ್ ಗ್ರೌಂಡ್ ಚೇಂಜ್, ಆಟೋ ಕರೆಕ್ಟ್ ಫೀಚರ್, ಎಮೋಜಿ ಸಪೋರ್ಟ್ ನಂತಹ ಆಯ್ಕೆಗಳನ್ನು ಪಡೆಯಬಹುದು.  

4 /5

ಪ್ರತಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ವಿಶೇಷ 'ಸೇಫ್ ಮೋಡ್' ಅನ್ನು ಹೊಂದಿದೆ. ಅದರ ಮೂಲಕ ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಬಹುದು. ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ದೋಷನಿವಾರಣೆಗಾಗಿ ಬಳಸಲಾದ ಈ ವೈಶಿಷ್ಟ್ಯವನ್ನು ಆನ್ ಮಾಡಲು, ಪವರ್ ಆಫ್ ಜೊತೆಗೆ ಪವರ್ ಆಫ್ ಮೆನು ಬಟನ್ ಅನ್ನು ದೀರ್ಘವಾಗಿ ಒತ್ತಿ ಮತ್ತು ಹಿಡಿದುಕೊಳ್ಳಬೇಕು. 

5 /5

ನಿಮ್ಮ ಸ್ಮಾರ್ಟ್‌ಫೋನ್‌ನ ಲಾಕ್ ಸ್ಕ್ರೀನ್‌ನಲ್ಲಿ ಕೆಲವು ಪ್ರಮುಖ ಕಾಂಟಾಕ್ಟ್ ಗಳನ್ನು ಎಮರ್ಜೆನ್ಸಿ ಕಾಂಟಾಕ್ಟ್ ಗಳಾಗಿ ಸೇವ್ ಮಾಡಿಕೊಳ್ಳಿ. ಈ ರೀತಿ ಮಾಡಿಟ್ಟರೆ  ತುರ್ತು ಸಂದರ್ಭಗಳಲ್ಲಿ  ಫೋನ್ ಅನ್ನು ಅನ್‌ಲಾಕ್ ಮಾಡದೆಯೇ ಕರೆ ಮಾಡುವುದು ಸಾಧ್ಯವಾಗುತ್ತದೆ.