World Smallest Countries:. ಅನೇಕ ದೇಶಗಳು ಅತ್ಯಂತ ಪುಟ್ಟದಾಗಿವೆ. ಆದರೆ ಅಲ್ಲಿ ಇನ್ನೂ ಸಂಪೂರ್ಣ ಸರ್ಕಾರವಿದೆ. ಅವರದ್ದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯಗಳಿವೆ.
World Smallest Countries: ನಮ್ಮ ಪ್ರಪಂಚವು ಅದ್ಭುತ ಮತ್ತು ಸುಂದರವಾದ ಸ್ಥಳಗಳಿಂದ ತುಂಬಿದೆ. ಪ್ರಪಂಚದಲ್ಲಿ ಹಲವಾರು ದೇಶಗಳಿವೆ. ಅವುಗಳಲ್ಲಿ ಕೆಲವು ತುಂಬಾ ದೊಡ್ಡದಾಗಿದೆ ಮತ್ತು ಕೆಲವು ತುಂಬಾ ಚಿಕ್ಕದಾಗಿದೆ. ಅನೇಕ ದೇಶಗಳು ಅತ್ಯಂತ ಪುಟ್ಟದಾಗಿವೆ. ಆದರೆ ಅಲ್ಲಿ ಇನ್ನೂ ಸಂಪೂರ್ಣ ಸರ್ಕಾರವಿದೆ. ಅವರದ್ದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯಗಳಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಈ ಲಿಸ್ಟ್ ನಲ್ಲಿ ಬರುವ ಮೊದಲ ಹೆಸರು ವ್ಯಾಟಿಕನ್ ಸಿಟಿ. ಇದು ವಿಶ್ವದ ಅತ್ಯಂತ ಚಿಕ್ಕ ದೇಶವಾಗಿದೆ. ಕೇವಲ 110 ಎಕರೆ ಭೂಮಿಯಲ್ಲಿ ಹರಡಿರುವ ಈ ದೇಶದ ಜನಸಂಖ್ಯೆ ಕೇವಲ 1000 ಮಾತ್ರ. ಇದರ ಹೊರತಾಗಿಯೂ, ಈ ದೇಶವು ಪ್ರಪಂಚದಾದ್ಯಂತದ ಕ್ರಿಶ್ಚಿಯನ್ನರಿಗೆ ಅತ್ಯಂತ ಪವಿತ್ರ ನಗರವೆಂದು ಹೆಸರುವಾಸಿಯಾಗಿದೆ.
ಮೊನಾಕೊ, ವಿಶ್ವದ ಎರಡನೇ ಚಿಕ್ಕ ದೇಶ, ಕೇವಲ 499 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಆದರೆ ಚಿಕ್ಕ ರಾಷ್ಟ್ರವು ಅತ್ಯಂತ ಭವ್ಯವಾಗಿದೆ. ಈ ದೇಶದ ಸೊಬಗನ್ನು ಕಂಡರೆ ಬ ಎರಗಾಗಿ ಹೋಗಬೇಕು. ಇಲ್ಲಿನ ಮಾಂಟೆ ಕಾರ್ಲೊ ಕ್ಯಾಸಿನೊ ಮತ್ತು ಗ್ರ್ಯಾಂಡ್ ಪ್ರಿಕ್ಸ್ ಮೋಟಾರ್ ರೇಸಿಂಗ್ ಈವೆಂಟ್‌ಗಳು ವಿಶ್ವವಿಖ್ಯಾತವಾಗಿವೆ.
ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ನೌರು ಇದೆ. ಇದನ್ನು ಹಿಂದೆ ಪ್ಲೆಸೆಂಟ್ ಐಲ್ಯಾಂಡ್ ಎಂದು ಕರೆಯಲಾಗುತ್ತಿತ್ತು. ಇದು ಆಸ್ಟ್ರೇಲಿಯಾದ ಪೂರ್ವದಲ್ಲಿದೆ. ಈ ದೇಶದ ಪ್ರಸ್ತುತ ಜನಸಂಖ್ಯೆ ಸುಮಾರು 13000.
ಓಷಿಯಾನಿಯಾದ ಈ ಅದ್ಭುತ ದೇಶ, ಟುವಾಲು ಪಾಲಿನೇಷ್ಯಾ ವಿಶ್ವದ ನಾಲ್ಕನೇ ಚಿಕ್ಕ ದೇಶವಾಗಿದೆ. ಹಿಂದೆ ಎಲ್ಲಿಸ್ ದ್ವೀಪಗಳು ಎಂದು ಕರೆಯಲಾಗುತ್ತಿತ್ತು. ಈ ದ್ವೀಪ ರಾಷ್ಟ್ರದ ಜನಸಂಖ್ಯೆ ಸುಮಾರು 11000.
ಸ್ಯಾನ್ ಮರಿನೋ 61.2 ಚದರ ಕಿಲೋಮೀಟರ್‌ನಲ್ಲಿದೆ. ಇದು ಚಿಕ್ಕ ದೇಶಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ದೇಶದ ಜನಸಂಖ್ಯೆಯು ಸುಮಾರು 33000 ಜನರು. ಸುಂದರವಾದ ದೇಶದ ಪ್ರಮುಖ ಆಕರ್ಷಣೆಗಳೆಂದರೆ ಅದರ ಬಂಡೆಯ ಮೇಲಿನ ಅರಮನೆಗಳು, ಇದು ಮಾಂತ್ರಿಕವಾಗಿ ಕಾಣುತ್ತದೆ.