Saving Tips: ಹಣ ಉಳಿಸಲು ಬಹಳ ಪ್ರಯೋಜನಕಾರಿ ಸಲಹೆಗಳಿವು

Saving Tips: ಹನಿ ಹನಿ ಸೇರಿದರೆ ಹಳ್ಳ ಎಂಬಂತೆ ಒಂದೊಂದು ರೂಪಾಯಿಯೂ ಕೂಡ ಉಳಿತಾಯಕ್ಕೆ ಬಹಳ ಮುಖ್ಯ. 

Saving Tips: ಹನಿ ಹನಿ ಸೇರಿದರೆ ಹಳ್ಳ ಎಂಬಂತೆ ಒಂದೊಂದು ರೂಪಾಯಿಯೂ ಕೂಡ ಉಳಿತಾಯಕ್ಕೆ ಬಹಳ ಮುಖ್ಯ. ಒಂದು ಲಕ್ಷಕ್ಕೆ ಒಂದು ರೂಪಾಯಿ ಕಡಿಮೆ ಆದರೂ ಅದು ಲಕ್ಷ ಎನಿಸಿಕೊಳ್ಳುವುದಿಲ್ಲ. ಹಾಗಾಗಿ, ಬಿಡಿಗಾಸನ್ನೂ ಕೂಡ ಇದೇನು ಮಹಾ ಎಂಬ ಭಾವನೆ ಹೊಂದಿರುವವರಿಗೆ ಉಳಿತಾಯ ಎಂಬುದು ಕಬ್ಬಿಣದ ಕಡಲೆಯೇ ಸರಿ. ಹಣ ಉಳಿಸುವುದು ಎಂದರೆ ನಮ್ಮಲ್ಲಿರುವ ಹಣವನ್ನು ಕೂಡಿಡುವುದು. ವ್ಯರ್ಥವಾಗಿ ಹಣ ಖರ್ಚು ಮಾಡದೇ ಇರುವುದು. ನೀವೂ ಉಳಿತಾಯದ ಬಗ್ಗೆ ಯೋಚಿಸುತ್ತಿದ್ದರೆ ಅದಕ್ಕಾಗಿ ಕೆಲವು ಸಲಹೆಗಳನ್ನು ನಿತ್ಯ ನಿಮ್ಮ ಜೀವನದಲ್ಲಿ ಅನುಸರಿಸುವುದು ಬಹಳ ಅಗತ್ಯ. ಅಂತಹ ಕೆಲವು ಸಲಹೆಗಳು ಇಲ್ಲಿವೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಹಣ ಉಳಿತಾಯ: ಇಂದಿನ ಯುಗದಲ್ಲಿ ಎಲ್ಲದಕ್ಕೂ ಹಣವೇ ಮುಖ್ಯ. ಪ್ರಸ್ತುತ ಜೀವನ ನಡೆಸಲು ಮಾತ್ರವಲ್ಲ, ಭವಿಷ್ಯದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕೂಡ ಹಣ ಬೇಕೇ ಬೇಕು. ಇದಕ್ಕಾಗಿ, ಹಣ ಉಳಿಕೆ, ಜೊತೆಗೆ ಸರಿಯಾದ ಸ್ಥಳದಲ್ಲಿ ಹಣದ ಹೂಡಿಕೆ ಎರಡೂ ಬಹಳ ಮುಖ್ಯ. 

2 /5

ಕೈಯಲ್ಲಿ ಕಾಸಿದ್ದರೆ ಬೇಕೆಂದಿದ್ದನ್ನೆಲ್ಲಾ ಕೊಳ್ಳುವ ಅಗತ್ಯವಿಲ್ಲ. ನೀವು ಹಣ ಉಳಿಸಲು ಅನುಸರಿಸಬೇಕಾದ ಮೊದಲ ಹೆಜ್ಜೆ ಎಂದರೆ ನೀವು ಒಂದು ಸಣ್ಣ ಪಿನ್ ಕೊಳ್ಳಬೇಕೆಂದರೂ ಅದು ನಿಮಗೆ ಅಗತ್ಯವೇ? ಎಂಬುದನ್ನು ಒಮ್ಮೆ ಯೋಚಿಸಿ. ನಿಮಗೆ ನಿಜವಾಗಿಯೂ ಅಗತ್ಯವಿದ್ದರೆ ಮಾತ್ರವೇ ಖರೀದಿಸಿ.

3 /5

ಇತ್ತೀಚಿನ ದಿನಗಳಲ್ಲಿ ಏನನ್ನಾದರೂ ಕೊಳ್ಳಲು ಮಾರುಕಟ್ಟೆಗೆ ಹೋಗಬೇಕು ಎಂಬ ಅಗತ್ಯವಿಲ್ಲ. ಆನ್‌ಲೈನ್ ಶಾಪಿಂಗ್ ನಮ್ಮ ಕೆಲಸವನ್ನು ಸುಲಭಗೊಳಿಸಿದೆ. ವಿಪರ್ಯಾಸವೆಂದರೆ ತಂತ್ರಜ್ಞಾನ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಹಾನಿಕಾರಕವೂ ಹೌದು. ಆನ್‌ಲೈನ್‌ ಶಾಪಿಂಗ್ ಒಂದು ಗೀಳಾಗಿ ಪರಿವರ್ತನೆಯಾದರೆ ಕಂಡಕಂಡದ್ದನ್ನೆಲ್ಲಾ ಕೊಳ್ಳುತ್ತಾ ಹಣ ವ್ಯರ್ಥವಾಗುತ್ತದೆ. ಹಾಗಾಗಿ, ಇದನ್ನು ತಪ್ಪಿಸಿ. 

4 /5

ನೀವು ಏನನ್ನಾದರೂ ಖರೀದಿಸುವಾಗ ಮಿಗುವ ಚಿಲ್ಲರೆಯನ್ನು ಉಳಿಸುವ ಅಭ್ಯಾಸ ರೂಢಿಸಿಕೊಳ್ಳಿ. ಒಂದು ರೂಪಾಯಿಯನ್ನೂ ನಿರ್ಲಕ್ಷಿಸಬೇಡಿ. ಕೆಲವೊಮ್ಮೆ ನೀವು ಉಳಿಸಿದ ಚಿಲ್ಲರೆಯೇ ನಿಮ್ಮ ಕಷ್ಟಕಾಲದಲ್ಲಿ ಸಹಾಯಕ್ಕೆ ಬರಬಹುದು.

5 /5

ಪ್ರಸ್ತುತ ಎಲ್ಲದಕ್ಕೂ ಚಂದಾದಾರಿಕೆ ಬಹಳ ಮುಖ್ಯ. ನೀವು ಯಾವುದೇ ಚಂದಾದಾರಿಕೆಯನ್ನು ಪಡೆದಿದ್ದರೆ ಅವುಗಳನ್ನು ಬಳಸುತ್ತಿಲ್ಲ ಎಂದಾದರೆ ಚಂದಾದಾರಿಕೆಯನ್ನು ರದ್ದುಗೊಳಿಸಿ. ಈ ರೀತಿ ಮಾಡುವುದರಿಂದ ಸಾಕಷ್ಟು ಹಣ ಉಳಿಸಬಹುದು.