Skin Care: ಮೊಡವೆಯಿಂದ ಶೀಘ್ರದಲ್ಲೇ ಪರಿಹಾರ ಪಡೆಯಲು ಆಯುರ್ವೇದ ಸಲಹೆ

Skin Care: ಯೌವನದಲ್ಲಿ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದರಿಂದ ಅನೇಕರು ತುಂಬಾ ಬೇಸರಗೊಳ್ಳುತ್ತಾರೆ. ಮೊಡವೆಗಳನ್ನು ನಿವಾರಿಸಲು ಕೆಲವು ಆಯುರ್ವೇದ ಸಲಹೆಗಳು ತುಂಬಾ ಪ್ರಯೋಜನಕಾರಿ ಆಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮುಖದ ಮೇಲೆ ಮೂಡುವ ಮೊಡವೆಗಳು ಸೌಂದರ್ಯವನ್ನೇ ಮರೆಮಾಚುತ್ತದೆ. ಹಾಗಾಗಿ, ಮೊಡವೆಗಳನ್ನು ನಿವಾರಿಸಲು ಜನರು ಇನ್ನಿನಲ್ಲದ ಕಸರತ್ತು ಮಾಡುತ್ತಾರೆ. ಆದರೆ, ನಿಮ್ಮ ತಾಯಿ, ಅಜ್ಜಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಕೆಲವು ಮನೆಮದ್ದುಗಳು ಮೊಡವೆಗಳಿಂದ ಮುಕ್ತಿ ಪಡೆಯಲು ಅತ್ಯುತ್ತಮವಾದ ಪರಿಹಾರ ಎಂದು ನಿಮಗೆ ತಿಳಿದಿದೆಯೇ...  ಅಂತಹ ಕೆಲವು ಆಯುರ್ವೇದ ಮನೆಮದ್ದುಗಳ ಬಗ್ಗೆ ತಿಳಿಯೋಣ... 

2 /6

ಅಲೋವೆರಾ:  ಹಿಂದಿನ ಕಾಲದಲ್ಲಿ ಯಾವುದೇ ರೀತಿಯ ಕಾಸ್ಮೆಟಿಕ್ಸ್ ಲಭ್ಯವಿರಲಿಲ್ಲ. ಆಗೆಲ್ಲಾ ನಮ್ಮ ಹಿರಿಯಲು ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಲೋಳೆರಸ/ಅಲೋವೆರಾವನ್ನೇ ಬಳಸುತ್ತಿದ್ದರು. ಆಯುರ್ವೇದದ ಪ್ರಕಾರ, ಅಲೋವೆರಾ ಬಳಕೆಯಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ.  

3 /6

ಆಲೂಗೆಡ್ಡೆ ಫೇಸ್ ಪ್ಯಾಕ್:  ಆಲೂಗೆಡ್ಡೆಯನ್ನು ತುರಿದು ಆಲೂಗೆಡ್ಡೆ ಫೇಸ್ ಪ್ಯಾಕ್ ಅನ್ನು  ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಇದರಿಂದ ಮೊಡವೆ ಮಾತ್ರವಲ್ಲ, ಮೊಡವೆಯಿಂದಾಗಿ ಉಂಟಾಗಿರುವ ಕಪ್ಪುಕಲೆಗಳಿಂದಲೂ ಪರಿಹಾರ ಪಡೆಯಬಹುದು. 

4 /6

ಕಿತ್ತಳೆ ಸಿಪ್ಪೆ:  ಚರ್ಮದ ಆರೈಕೆಗೆ ಕಿತ್ತಳೆ ಸಿಪ್ಪೆ ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಇದರೊಂದಿಗೆ ಬೇವಿನ ಪುಡಿ ಮತ್ತು ರೋಸ್ ವಾಟರ್ ಅನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಹಚ್ಚುವುದರಿಂದ ಮುಖದಲ್ಲಿರುವ ಎಲ್ಲಾ ಮೊಡವೆಗಳು ಮತ್ತು ಕಲೆಗಳು ನಿವಾರಣೆಯಾಗುತ್ತದೆ.

5 /6

ಅಗಸೆ ಬೀಜದ ಪುಡಿ/  ಫ್ಲಾಕ್ಸ್ ಸೀಡ್ ಪೌಡರ್ ಅನ್ನು ರೋಸ್ ವಾಟರ್ ಜೊತೆಗೆ ಬೆರೆಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಅದು ಚೆನ್ನಾಗಿ ಒಣಗಿದ ಬಳಿಕ ಶುದ್ಧ ನೀರಿನಿಂದ ಫೇಸ್ ವಾಶ್ ಮಾಡಿ. ಇದರಿಂದ ಮುಖದ ಅಂದ ಹೆಚ್ಚಾಗುತ್ತದೆ.  

6 /6

ಹೈಡ್ರೇಟ್ ಆಗಿರಿ:  ಪ್ರತಿದಿನ ಸರಿಯಾಗಿ ನೀರು ಕುಡಿಯದಿರುವುದು ಕೂಡ ಚರ್ಮದ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಹಾಗಾಗಿ, ಇದನ್ನು ತಪ್ಪಿಸಲು ಪ್ರತಿದಿನ ಸಾಧ್ಯವಾದಷ್ಟು ನೀರು ಕುಡಿಯಬೇಕು. ಇದರಿಂದ ನಿಮ್ಮ ದೇಹವು ಸಂಪೂರ್ಣವಾಗಿ ಹೈಡ್ರೀಕರಿಸಲ್ಪಡುತ್ತದೆ ಮತ್ತು ಅದರ ಪರಿಣಾಮವು ನಿಮ್ಮ ಮುಖದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.   ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.