ಎರಡು ದಿನಗಳ ಬಳಿಕ ಶುಕ್ರನ ನೇರ ನಡೆ ಆರಂಭ, 5 ರಾಶಿಗಳ ಜನರ ಮೇಲೆ ಹಣದ ಸುರಿಮಳೆ!

Saturn Margi In Karka Rashi 2023: ಶುಕ್ರನನ್ನು ಧನ-ಸಂಪತ್ತು, ಸಂತೋಷ, ಐಷಾರಾಮಿ, ಪ್ರೀತಿ ಮತ್ತು ಪ್ರಣಯದ ಅಂಶವೆಂದು ಪರಿಗಣಿಸಲಾಗುತ್ತದೆ. ಅವನ ದೆಸೆಗೆ ಪಾತ್ರರಾಗುವ ಜನರು, ಎಲ್ಲವನ್ನೂ ಸುಲಭವಾಗಿ ಪಡೆಯುತ್ತಾರೆ. ಆ ಜನರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ. ಶುಕ್ರವು ಪ್ರಸ್ತುತ ಸಿಂಹ ರಾಶಿಯಲ್ಲಿ ಹಿಮ್ಮುಖ ನಡೆಯನ್ನು ಅನುಸರಿಸಿದ್ದಾನೆ, ಆದರೆ ಸೆಪ್ಟೆಂಬರ್ 4 ರಿಂದ ಆತ ತನ್ನ ನೆರನಡೆಯನ್ನು ಅನುಸರಿಸುವ ಮೂಲಕ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. 
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ವಿವಿಧ ಗ್ರಹಗಳು ತಮ್ಮ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ ಎಂಬ ವಿಧಾನವಿದೆ. ಇದೇ ರೀತಿ ಗ್ರಹಗಳು ತಮ್ಮ ನಡೆಯನ್ನು ಕೂಡ ಬದಲಾಯಿಸುತ್ತವೆ ಎನ್ನಲಾಗಿದೆ. ಗ್ರಹಗಳು ಹಿಮ್ಮುಖವಾಗಿ ಚಳಿಸಿದಾಗ, ಅವು ತನ್ನ ನೇರನಡೆಯನ್ನು ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಚಲಿಸಲು ಆರಂಭಿಸುತ್ತವೆ. ಸಾಮಾನ್ಯವಾಗಿ ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಈ ಸ್ಥಿತಿಯನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದೇ ವೇಳೆ, ಗ್ರಹಗಳು ಪುನಃ ತನ್ನ ವಾಸ್ತವಿಕ ಸ್ಥಿತಿಗೆ ಮರಳಿದಾಗ, ಅವು ನೇರವಾಗಿ ಚಲಿಸಲು ಪ್ರಾರಂಭಿಸುತ್ತವೆ. ಶುಕ್ರನನ್ನು ಧನ-ಸಂಪತ್ತು, ಸಂತೋಷ, ಐಷಾರಾಮಿ, ಪ್ರೀತಿ ಮತ್ತು ಪ್ರಣಯದ ಅಂಶವೆಂದು ಪರಿಗಣಿಸಲಾಗುತ್ತದೆ. ಅವನ ದೆಸೆಗೆ ಪಾತ್ರರಾಗುವ ಜನರು, ಎಲ್ಲವನ್ನೂ ಸುಲಭವಾಗಿ ಪಡೆಯುತ್ತಾರೆ. ಆ ಜನರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ. ಶುಕ್ರವು ಪ್ರಸ್ತುತ ಸಿಂಹ ರಾಶಿಯಲ್ಲಿ ಹಿಮ್ಮುಖ ನಡೆಯನ್ನು ಅನುಸರಿಸಿದ್ದಾನೆ, ಆದರೆ ಸೆಪ್ಟೆಂಬರ್ 4 ರಿಂದ ಆತ ತನ್ನ ನೆರನಡೆಯನ್ನು ಅನುಸರಿಸುವ ಮೂಲಕ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರನ ಈ ನೇರ ನಡೆ 5 ರಾಶಿಗಳ ಜನರ ಮೇಲೆ ಅತ್ಯಂತ ಮಂಗಳಕರ ಪ್ರಭಾವವನ್ನು ಬೀರುತ್ತದೆ. 

 

ಇದನ್ನೂ ಓದಿ-ಕನ್ಯಾ ರಾಶಿಯಲ್ಲಿ ಪವರ್ಫುಲ್ ಶತ್ರುಹಂತಾ ಯೋಗ ನಿರ್ಮಾಣ , ಧನಕುಬೇರನ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ತುಲಾ ರಾಶಿ: ಶುಕ್ರನ ಸಂಕ್ರಮಣ  ತುಲಾ ರಾಶಿಯವರಿಗೆ ಒಳ್ಳೆಯ ಸುದ್ದಿಗಳನ್ನು  ತರಲಿದೆ. ಈ ಅವಧಿಯಲ್ಲಿ ನಿಮಗೆ ಅಪಾರ ಧನಲಾಭದ ಯೋಗ ಇರುತ್ತದೆ. ಇದಲ್ಲದೆ ಕಾರ್ಯಕ್ಷೇತ್ರದಲ್ಲಿ ಪ್ರತಿಭೆಯನ್ನು ತೋರಿಸಲು ಸಾಕಷ್ಟು ಅವಕಾಶವಿರುತ್ತದೆ. ಘನತೆ ಗೌರವ ಹೆಚ್ಚಾಗಲಿದೆ. ಬಾಳ ಸಂಗಾತಿಯೊಂದಿನ ಸಂಬಂಧದಲ್ಲಿ ಮಧುರತೆ ಇರಲಿದೆ ಮತ್ತು ಪ್ರೇಮ ಸಂಬಂಧಗಳಲ್ಲಿಯೂ ಯಶಸ್ಸು ಇರಲಿದೆ.  

2 /5

ಧನು ರಾಶಿ: ಶುಕ್ರನ ನೇರ ನಡೆ ಧನು ರಾಶಿಯವರ ಜೀವನದಲ್ಲಿ ಶುಭ ಫಲಿತಾಂಶಗಳನ್ನು ತರಲಿದೆ. ಈ ಅವಧಿಯಲ್ಲಿ ವೃತ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಳಿವೆ ಮತ್ತು ವಿತ್ತೀಯ ಲಾಭಕ್ಕಾಗಿ ಹೊಸ ಅವಕಾಶಗಳು ಲಭ್ಯವಾಗಲಿವೆ. ಪಿತ್ರಾರ್ಜಿತ ಆಸ್ತಿಯಿಂದ ಪಡೆದ ಲಾಭದಲ್ಲಿ ಹೆಚ್ಚಳ ಕಂಡುಬರಲಿದೆ.  

3 /5

ವೃಷಭ ರಾಶಿ: ಶುಕ್ರನ ಈ ನೇರನಡೆ ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಸಾಕಷ್ಟು ಪ್ರಗತಿಯನ್ನು ನೀಡುತ್ತದೆ. ಉದ್ಯೋಗದಲ್ಲಿ ಬಡ್ತಿಯ ವಿಪುಲ ಅವಕಾಶಗಳು ಲಭಿಸಲಿವೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುವಿರಿ. ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳಲಿವೆ. ಈ ಅವಧಿಯಲ್ಲಿ, ನೀವು ಜನರನ್ನು ನಿಮ್ಮತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗುವಿರಿ ಮತ್ತು ನಿಮ್ಮ ಮಾತುಗಳಿಂದ ಇತರರ ಹೃದಯವನ್ನು ಪ್ರಭಾವಿತಗೊಳಿಸುವಿರಿ.  

4 /5

ಮಿಥುನ ರಾಶಿ: ಶುಕ್ರನ ನೇರ ನಡೆ ಮಿಥುನ ರಾಶಿಯ ಜನರ ವೃತ್ತಿಜೀವನದಲ್ಲಿ ವಿಶೇಷ ಬದಲಾವಣೆಗಳನ್ನು ತರಲಿದೆ. ಈ ಅವಧಿಯಲ್ಲಿ ಧನಾತ್ಮಕ ಫಲಿತಾಂಶಗಳು ನಿಮ್ಮದಾಗಲಿವೆ. ನಿಮಗೆ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ನೀವು ಹೊಸ ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ಯಶಸ್ವಿಯಾಗುವಿರಿ. ವಿದೇಶಕ್ಕೆ ಹೋಗುವ ಕನಸು ಕಾಣುವವರಿಗೆ ಅದಕ್ಕೆ ಸಂಬಂಧಿಸಿದ ಯಾವುದಾದರೊಂದು ಒಳ್ಳೇಯ ಸುದ್ದಿ ಸಿಗುವ ಸಾಧ್ಯತೆ ಇದೆ.  

5 /5

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ನೇರ ಶುಕ್ರನು ಮಂಗಳಕರ ಫಲಿತಾಂಶಗಳನ್ನು ದಯಪಾಲಿಸಲಿದ್ದಾನೆ. ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಧನಲಾಭ ಪ್ರಾಪ್ತಿಯಾಗಲಿದೆ  ಮತ್ತು ವ್ಯಾಪಾರದಲ್ಲಿ ವಿಶೇಷ ಲಾಭ ಉಂಟಾಗಲಿದೆ. ಈ ಅವಧಿಯಲ್ಲಿ, ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ, ಇದರಿಂದಾಗಿ ಪ್ರತಿಯೊಂದು ಕೆಲಸವೂ ಸುಲಭವಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ ಮತ್ತು ಆರ್ಥಿಕ ಸ್ಥಿತಿಯು ಪ್ರಬಲವಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)