ಕನ್ಯಾ ರಾಶಿಯಲ್ಲಿ ತ್ರಿಗ್ರಹಿ ಯೋಗ, ಎರಡು ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿಯ ಯೋಗ!

Shukra Ketu Chandra Yuti 2023 In Kanya: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯಲ್ಲಿ ಮೂರು ಗ್ರಹಗಳ ಮೈತ್ರಿ ನೆರವೇರುತ್ತಿದೆ. ಇದರಿಂದ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. ಅವರ ಜೀವನದಲ್ಲಿ ಧನ-ಧಾನ್ಯ ದುಪ್ಪಟ್ಟಾಗಲಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದ ನಂತರ ತನ್ನ ರಾಶಿಯನ್ನು  ಬದಲಾಯಿಸುತ್ತದೆ. ಇದರ ಪರಿಣಾಮ ಎಲ್ಲಾ ದ್ವಾದಶ ಮೇಲೆ ಬೀಳುತ್ತದೆ. ಶನಿ ಮತ್ತು ರಾಹು 18 ತಿಂಗಳ ಕಾಲ ಒಂದೇ ರಾಶಿಯಲ್ಲಿ ಇರುತ್ತಾರೆ. ಆದರೆ ಚಂದ್ರನು ಕೇವಲ ಎರಡೂವರೆ ತಿಂಗಳಲ್ಲಿ ಒಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಚಂದ್ರನು ಈಗ ಬುಧನ ಅಧಿಪತ್ಯದ ಕನ್ಯಾರಾಶಿಗೆ ಪ್ರವೇಶಿಸಿದ್ದಾನೆ. ಈ ಗ್ರಹಗಳು ಧನತ್ರಯೋದಶಿಯ ಮಾರನೇ ದಿನ ಅಂದರೆ ನವೆಂಬರ್ 11 ರಂದು ತುಲಾ ರಾಶಿಯನ್ನು ಪ್ರವೇಶಿಸುತ್ತವೆ. ಹೀಗಿರುವಾಗ, ಈಗಾಗಲೇ ಕನ್ಯಾರಾಶಿಯಲ್ಲಿ ಕೇತು ಮತ್ತು ಶುಕ್ರರು ಇದ್ದಾರೆ. ಇದರಿಂದ ಕನ್ಯಾರಾಶಿಯಲ್ಲಿ ತ್ರಿಗ್ರಹಿ ಯೋಗವು ರೂಪುಗೊಳ್ಳುತ್ತಿದೆ. ಈ ಯೋಗವು ಕೆಲವರ ಜೀವನದಲ್ಲಿ ಸಾಕಷ್ಟು ಅದೃಷ್ಟವನ್ನು ತರಲಿದೆ. ಈ ತ್ರಿಗ್ರಹಿ ಯೋಗವು ಈ ಜನರಿಗೆ ರಾಜಯೋಗಕ್ಕಿಂತ ಕಡಿಮೆಯಿಲ್ಲ ಎಂದರೆ ತಪ್ಪಾಗಲಾರದು. ಯಾವ ರಾಶಿಯವರಿಗೆ ತ್ರಿಗ್ರಹಿ ಯೋಗದ ಲಾಭ ಸಿಗಲಿದೆ ಮತ್ತು ಅವರ ಜೀವನದಲ್ಲಿ  ಸುಖ ಮತ್ತು ಸಮೃದ್ಧಿಯು ಭಾರೀ ಮಳೆಯನ್ನೇ ಸುರಿಸಲಿದೆ ತಿಳಿದುಕೊಳ್ಳೋಣ ಬನ್ನಿ, (Spiritual News In Kannada)

 

ಇದನ್ನೂ ಓದಿ-Diwali 2023ರ ಮೊದಲೇ ಬುಧನಿಂದ ಮಹಾವಿಪರೀತ ರಾಜಯೋಗ ನಿರ್ಮಾಣ, ಈ ಜನರ ಮೇಲೆ ಲಕ್ಷ್ಮಿ ಕೃಪೆಯಿಂದ ಭಾರಿ ಕನಕವೃಷ್ಟಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಕನ್ಯಾ ರಾಶಿಯ ಜಾತಕದಲ್ಲಿ ಶುಕ್ರ, ಕೇತು ಮತ್ತು ಚಂದ್ರರ ಮೈತ್ರಿ ಅದರ ಮೊದಲ ಮನೆಯಲ್ಲಿ ನಡೆಯುತ್ತಿದೆ. ಈ ರಾಶಿಯಲ್ಲಿ ಶುಕ್ರ ಮತ್ತು ಕೇತು ಈಗಾಗಲೇ ವಿರಾಜಮಾನನಾಗಿದ್ದಾರೆ. ಈಗ ಚಂದ್ರನ ಆಗಮನದಿಂದ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ. ಇದು ಕನ್ಯಾ ರಾಶಿಯ ಜನರಿಗೆ  ತುಂಬಾ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ಇದರಿಂದ ಕನ್ಯಾ ರಾಶಿಯವರ ಎಲ್ಲಾ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ. ಕನ್ಯಾ ರಾಶಿಯ ನೌಕರಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಜನರಿಗೆ ಇದರಿಂದ ಸಾಕಷ್ಟು ಸಮೃದ್ಧರಾಗಲಿದ್ದಾರೆ. ಧನ-ಸಂಪತ್ತು ಹೆಚ್ಚಳದ ಜೊತೆಗೆ ವ್ಯಾಪಾರದಲ್ಲಿಯೂ ಕೂಡ ಸಾಕಷ್ಟು ಲಾಭಗಳಿಕೆಯ ಯೋಗಗಳಿವೆ. 

2 /5

ಇದಲ್ಲದೇ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕೆಲ ದಿನಗಳಿಂದ ಪತಿ-ಪತ್ನಿಯರ ನಡುವೆ ಇದ್ದ ಮನಸ್ತಾಪ ದೂರಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಒಳ್ಳೆಯ ಕಾಲ ಕಳೆಯುವಲ್ಲಿ ನೀವು ಯಶಸ್ವಿಯಾಗುವಿರಿ. ಇದರೊಂದಿಗೆ ಈ ಕ್ಷಣಗಳು ತುಂಬಾ ಆಹ್ಲಾದಕರವಾಗಿರುತ್ತದೆ. ಉದ್ಯೋಗಿಗಳು ಬೋನಸ್ ಸಿಗುವ ಸಾಧ್ಯತೆ ಇದೆ. ಇದರ ಹೊರತಾಗಿ, ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆಯಿದೆ, ಹೂಡಿಕೆ ಮಾಡಲು ಯೋಚಿಸುತ್ತಿರುವವರು, ಈ ಸಮಯದಲ್ಲಿ ಹೂಡಿಕೆ ಮಾಡಿದರೆ ಅದು ಭವಿಷ್ಯದಲ್ಲಿ ಲಾಭದಾಯಕವೆಂದು ಸಾಬೀತಾಗಲಿದೆ. .

3 /5

ಮಕರ ರಾಶಿಯಲ್ಲಿ ಶುಕ್ರ ಮತ್ತು ಕೇತುಗಳ ಸಂಯೋಗವು ಒಂಬತ್ತನೇ ಮನೆಯಲ್ಲಿ ನೆರವೇರುತ್ತಿದೆ. ಚಂದ್ರನ ಆಗಮನದಿಂದ ತ್ರಿಗ್ರಹಿ ಯೋಗವು ರೂಪುಗೊಳ್ಳುತ್ತಿದೆ. ಮಕರ ರಾಶಿಯವರಿಗೆ ಈ ಯೋಗದಿಂದ ಲಾಭ ಖಂಡಿತ ಸಿಗಲಿದೆ. ಈ ಯೋಗದ ಪ್ರಭಾವದಿಂದ ಈ ಜನರು ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಪ್ರತಿದಿನ ದುಪ್ಪಟ್ಟು ಪ್ರಗತಿಯ ಸಾಧ್ಯತೆಗಳಿವೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ.

4 /5

ಇದಲ್ಲದೆ, ಶುಕ್ರನ ಅನುಗ್ರಹದಿಂದ ನೀವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಹಬ್ಬ ಹರಿದಿನಗಳಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಸಂಬಂಧಗಳಲ್ಲಿ ಮಧುರತೆ ಬರಲಿದೆ. ಈ ರಾಶಿಯ ಜನರ ಎಲ್ಲಾ ಆಸೆಗಳು ಈಡೇರುವ ಸಾಧ್ಯತೆ ಇದೆ. ಕುಟುಂಬದವರ ಬೆಂಬಲದಿಂದ ಮನೆ ಅಥವಾ ವಾಹನ ಖರೀದಿಯ ನಿಮ್ಮ ಕನಸು ನನಸಾಗಬಹುದು. ಬಹುಕಾಲದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಸಾಧಿಸಬಹುದು.

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)