Budhaditya Rajyog 2023: ಶೀಘ್ರದಲ್ಲೇ ಮೇಷ ರಾಶಿಯಲ್ಲಿ ಬುದ್ಧಾದಿತ್ಯ ರಾಜಯೋಗ ನಿರ್ಮಾಣ, 3 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ-ಉನ್ನತಿಯ ಯೋಗ!

Budhaditya Rajyog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ ಹಾಗೂ ನವಗ್ರಹಗಳ ರಾಜಕುಮಾರ ಬುಧನ ಮೈತ್ರಿಯಿಂದ ಬುದ್ಧಾದಿತ್ಯ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ರಾಜಯೋಗದಿಂದ 3 ರಾಶಿಗಳ ಜಾತಕದವರಿಗೆ ಅಪಾರ ಧನಪ್ರಾಪ್ತಿಯ ಜೊತೆಗೆ ಘನತೆ ಗೌರವದ ಯೋಗ ರೂಪುಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
 

Budhaditya Rajyog In Aries: ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ಗೋಚರಿಸಿ ಶುಭ ಹಾಗೂ ಆಶುಭ ಯೋಗಗಳನ್ನು ರಚಿಸುತ್ತವೆ. ಈ ಯೋಗಗಳ ಪ್ರಭಾವ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ಬರುವ ಏಪ್ರಿಲ್ 14 ರಂದು ಮಂಗಳನ ರಾಶಿಯಾಗಿರುವ ಮೇಷ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ ಹಾಗೂ ನವಗ್ರಹಗಳ ರಾಜಕುಮಾರ ಬುಧನ ಮೈತ್ರಿ ನೆರವೇರಲಿದ್ದು, ಬುದ್ಧಾದಿತ್ಯ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ರಾಜಯೋಗ 3 ರಾಶಿಗಳ ಜಾತಕದವರಿಗೆ ಅಪಾರ ಧನಲಾಭ, ವೃತ್ತಿಜೀವನದಲ್ಲಿ ಬಡ್ತಿ ಹಾಗೂ ಅಪಾರ ಘನತೆ ಗೌರವವನ್ನು ಕರುಣಿಸಲಿದೆ. ಆ ಲಕ್ಕಿ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-Chandra Grahan 2023: ಮೇ 5 ರಂದು ವರ್ಷದ ಮೊದಲ ಚಂದ್ರಗ್ರಹಣ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ, ವೃತ್ತಿ-ವ್ಯಾಪಾರದಲ್ಲಿ ಬಡ್ತಿಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಮೇಷ ರಾಶಿ: ಬುದ್ಧಾದಿತ್ಯ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಸುಖಕರ ಹಾಗೂ ಲಾಭಪ್ರದ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ನಿಮ್ಮ ವ್ಯಕ್ತಿತ್ವದಲ್ಲಿ ಹೊಳಪನ್ನು ಗಮನಿಸಬಹುದು. ಸೂರ್ಯ ದೇವ ನಿಮ್ಮ ಜಾತಕದ ಸಂತಾನ, ಶಿಕ್ಷಣ ಹಾಗೂ ಪ್ರೇಮ-ಸಂಬಂಧಗಳ ಭಾವಕ್ಕೆ ಅಧಿಪತಿಯಾಗಿದ್ದಾನೆ. ಇದಲ್ಲದೆ ಬುಧ ಸಾಹಸ-ಪರಾಕ್ರಮ, ಕಾಯಿಲೆ ಹಾಗೂ ಶತ್ರು ಭಾವದ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಸಂತಾನದ ವತಿಯಿಂದ ಶುಭ ಸಮಾಚಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಪಾಲಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿಮಗೆ ಯಶಸ್ಸು ಸಿಗುವ ಸಾಧ್ಯತೆ ಇದೆ. ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಅವಕಾಶ ಪ್ರಾಪ್ತಿಯಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.   

2 /3

ಸಿಂಹ ರಾಶಿ: ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಬುದ್ಧಾದಿತ್ಯ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ಅದೃಷ್ಟದ ಭಾವದ ಮೇಲೆ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಕಾರ್ಯಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ಸಿಗಲಿದೆ. ಇದರ ಜೊತೆಗೆ ಪ್ರಮೋಷನ್ ಹಾಗೂ ಬಡ್ತಿಯ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಕೋರ್ಟ್ ಕಚೇರಿ ಪ್ರಕರಣಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಬುಧ ಧನ ಹಾಗೂ ಆದಾಯದ ಕಾರಕನಾಗಿರುವ ಕಾರಣ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವನ್ನು ನೀವು ಗಮನಿಸಬಹುದಾಗಿದೆ. ಆದಾಯದ ಹೊಸ ಮೂಲಗಳು ನಿರ್ಮಾಣಗೊಳ್ಳಲಿವೆ. ವ್ಯಾಪಾರಿಗಳಿಗೆ ಬರಬೇಕಾದ ಹಣ ಅವರ ಬಳಿ ಮರಳಲಿದೆ.  

3 /3

ಕರ್ಕ ರಾಶಿ: ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ಬುದ್ಧಾದಿತ್ಯ ರಾಜಯೋಗ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ನಿಮ್ಮ ರಾಶಿಯ ಕರ್ಮ ಭಾವದಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ. ಇದಲ್ಲದೆ ಸೂರ್ಯ ದೇವ ನಿಮ್ಮ ಜಾತಕದ ಧನದ ಭಾವ ಹಾಗೂ ಬುಧದೇವ ನಿಮ್ಮ ಜಾತಕದ ದ್ವಾದಶ ಹಾಗೂ ತೃತೀಯ ಭಾವಕ್ಕೆ ಅಧಿಪತಿಯಾಗಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಮತ್ತು ಪರಾಕ್ರಮ ಹೆಚ್ಚಾಗಲಿದೆ. ಕಿರಿಯ ಸಹೋದರ-ಸಹೋದರಿಯರ ಬೆಂಬಲ ನಿಮಗೆ ಸಿಗಲಿದೆ. ವೃತ್ತಿಜೀವನ ವ್ಯಾಪಾರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಬೀಳಲಿದೆ. ಕಾರ್ಯಸ್ಥಳದಲ್ಲಿ ನೀವು ನಿಮ್ಮ ಸಹೋದ್ಯೋಗಿಗಳ ಜೊತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವಲ್ಲಿ ನೀವು ಯಶಸ್ವಿಯಾಗುವಿರಿ. ವ್ಯಾಪಾರಿಗಳ ಆದಾಯದಲ್ಲಿ ಹೆಚ್ಚಳದ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ನೌಕರವರ್ಗದ ಜನರಿಗೆ ಪ್ರಮೋಷನ್ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)