Chandra Grahan 2023: ಮೇ 5 ರಂದು ವರ್ಷದ ಮೊದಲ ಚಂದ್ರಗ್ರಹಣ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ, ವೃತ್ತಿ-ವ್ಯಾಪಾರದಲ್ಲಿ ಬಡ್ತಿಯ ಯೋಗ!

Lunar Eclipse 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಮೇ 5, 2023 ರಂದು ಈ ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ಈ ಚಂದ್ರ ಗ್ರಹಣ ಹಲವರ ಜೀವನದಲ್ಲಿ ಒಳ್ಳೆಯ ದಿನಗಳನ್ನು ಆರಂಭಿಸಲಿದೆ. ಯಾವ ರಾಶಿಗಳ ಪಾಲಿಗೆ ಈ ಗ್ರಹಣ ಶುಭವಾಗಿರಲಿದೆ ಬನ್ನಿ ತಿಳಿದುಕೊಳ್ಳೋಣ,
 

Lunar Eclipse 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಗ್ರಹಣ ಹಾಗೂ ಚಂದ್ರ ಗ್ರಹಣಕ್ಕೆ ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ.  ಕಾಲಕಾಲಕ್ಕೆ ಸಂಭವಿಸುವ ಈ ಸೂರ್ಯ ಹಾಗೂ ಚಂದ್ರ ಗ್ರಹಣಗಳ ಪ್ರಭಾವ ಭೂಮಿಯ ಮೇಲಿರುವ ಸಕಲ ಚರಾಚರಬಲ ಮೇಲೆ ಉಂಟಾಗುತ್ತದೆ. ಈ ಗ್ರಹಣಗಳ ಪ್ರಭಾವ ಕೆಲವರ ಪಾಲಿಗೆ ಶುಭ ಸಾಬೀತಾದರೆ, ಕೆಲವರ ಪಾಲಿಗೆ ಅಶುಭ ಸಾಬೀತಾಗುತ್ತವೆ. ವರ್ಷ 2023ರ ಮೊದಲ ಚಂದ್ರ ಗ್ರಹಣ ಮೇ 5, 2023ರ ರಾತ್ರಿ 8 ಗಂಟೆ 44 ನಿಮಿಷದಿಂದ ಆರಂಭಗೊಳ್ಳಲಿದೆ ಹಾಗೂ ತಡರಾತ್ರಿ 1 ಗಂಟೆಗೆ ಮುಕ್ತಾಯಗೊಳ್ಳಲಿದೆ. 4 ಗಂಟೆ 15 ನಿಮಿಷಗಳ ಅವಧಿಯ ಗ್ರಹಣ ಇದಾಗಿರಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಇದೊಂದು ಉಪಛಾಯಾ ಚಂದ್ರಗ್ರಹಣ ವಾಗಿರಲಿದೆ. ಹೀಗಾಗಿ ಇದರ ಸೂತಕ ಕಾಲಕ್ಕೆ ಮಾನ್ಯತೆ ಇರುವುದಿಲ್ಲ. ಆದರೂ ಕೂಡ ಈ ಗ್ರಹಣದ ಪ್ರಭಾವ ಎಲ್ಲಾ ರಾಶಿಗಳ ಜಾತಕದವರ ಮೇಲಿರಲಿದೆ. ಆದರೆ, ಮೂರು ರಾಶಿಗಳ ಜಾತಕದವರ ಮೇಲೆ ಇದು ಸಕಾರಾತ್ಮಕ ಪ್ರಭಾವ ಬೀರಲಿದ್ದು, ಈ ಜನರಿಗೆ ಅಪಾರ ಧನಲಾಭದ ಜೊತೆಗೆ ಬಡ್ತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Shukra Gochar: ಕೆಲವೇ ಗಂಟೆಗಳಲ್ಲಿ ಸ್ವರಾಶಿಗೆ ವೈಭವದಾತನ ಎಂಟ್ರಿ, ಮಾಲವ್ಯ ರಾಜಯೋಗದಿಂದ 3 ರಾಶಿಗಳ ಜನರಿಗೆ ಅಪಾರ ಧನಲಾಭ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಮಿಥುನ ರಾಶಿ: ಮಿಥುನ ರಾಶಿಯ ಜಾತಕದವರ ಪಾಲಿಗೆ ಈ ಚಂದ್ರಗ್ರಹಣ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ನೌಕಿಯರಿಯ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಈಗಾಗಲೇ ನೌಕರಿ ಮಾಡುವ ಜನರಿಗೆ ಈ ಅವಧಿಯಲ್ಲಿ ಪ್ರಮೋಷನ್ ಹಾಗೂ ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗಲಿದೆ. ಇದಲ್ಲದೆ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಬೆಂಬಲ ಕೂಡ ಸಿಗಲಿದೆ. ವಿದೇಶಕ್ಕೆ ಪ್ರಯಾಣಿಸಲು ಬಯಸುವವರ ಇಚ್ಛೆ ಈಡೇರಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಕುಟುಂಬದ ಬೆಂಬಲ ಕೂಡ ಸಿಗಲಿದೆ. ಉದ್ಯಮದಲ್ಲಿ ವ್ಯಾಪಾರ ವೃದ್ಧಿಯ ಸಂಕೇತಗಳಿವೆ. ವಿದ್ಯಾರ್ಥಿಗಳ ಪಾಲಿಗೆ ಈ ಗ್ರಹಣ ಶುಭವಾಗಿರಲಿದೆ.  

2 /3

ಮಕರ ರಾಶಿ: ಮಕರ ರಾಶಿಯ ಜಾತಕದವರ ಪಾಲಿಗೆ ಈ ಚಂದ್ರ ಗ್ರಹಣ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ. ನೌಕರಿಯಲ್ಲಿ ನಿರತರಾದ ಜನರಿಗೆ ಬಡ್ತಿ ಭಾಗ್ಯ ಪ್ರಾಪ್ತಿಯಾಗುವ ಎಲ್ಲಾ ಲಕ್ಷಣಗಳಿವೆ. ವೃತ್ತಿ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಪರಿಣಾಮಗಳು ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ನೀವು ವಾಹನ, ಆಸ್ತಿಪಾಸ್ತಿ ಇತ್ಯಾದಿಗಳನ್ನು ಖರೀದಿಸುವ ಸಾಧ್ಯತೆ ಇದೆ.  ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ನೀವು ಪ್ರಭಾವವನ್ನು ಗಮನಿಸಬಹುದು ಮತ್ತು ಇದರಿಂದ ಜನರು ನಿಮ್ಮ ಮೇಲೆ ಇಂಪ್ರೆಸ್ ಆಗುತ್ತಾರೆ. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಇದರಿಂದ ಲಾಭವಾಗುವ ಸಾಧ್ಯತೆ ಇದೆ. ಹೊಸ ಬಿಸ್ನೆಸ್ ಆರಂಭಿಸಲು ಬಯಸುವವರಿಗೆ ಸಮಯ ಉತ್ತಮವಾಗಿದೆ ಮತ್ತು ಲಾಭ ಕೂಡ ಆಗಲಿದೆ.   

3 /3

ಸಿಂಹ ರಾಶಿ: ಸಿಂಹ ರಾಶಿಯ ಜಾತಕಡವರ ಪಾಲಿಗೆ ಈ ಗ್ರಹಣ ಲಾಭಪ್ರದ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಹಲವು ಮನೋಕಾಮನೆಗಳು ಈಡೇರಲಿವೆ. ಈ ಅವಧಿಯಲ್ಲಿ ನೀವು ಯಾವುದಾದರೊಂದು ಹೊಸ ಕೆಲಸ ಪ್ರಾರಂಭಿಸುವ ಸಾಧ್ಯತೆ ಇದೆ. ಕೋರ್ಟ್-ಕಚೇರಿ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗುವ ಎಲ್ಲಾ ಲಕ್ಷಣಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳ ತೈಯಾರಿಯಲ್ಲಿ ನಿರತರಾದ ವಿಧ್ಯಾರ್ಥಿಗಳಿಗೆ ಯಶಸ್ಸು ಸಿಗುವ ಸಾಧ್ಯತೆ ಇದೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಧರ್ಮ ಕಾರ್ಯಗಳಲ್ಲಿ ನಿಮ್ಮ ಹಣ ಖರ್ಚಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯ ಸಂಪೂರ್ಣ ಬೆಂಬಲ ಸಿಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)