Shani Uday 2024: ಇಂದಿನಿಂದ ಈ ರಾಶಿಯವರ ಮೇಲೆ ಶನಿ ಕೃಪೆ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್

Shani Uday 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ ಆಶೀರ್ವಾದ ಒಂದಿದ್ದರೆ ಭಿಕ್ಷುಕನೂ ಕೂಡ ಕೋಟ್ಯಾದಿಪತಿ ಆಗಬಹುದು ಎಂದು ಹೇಳಲಾಗುತ್ತದೆ. ಇದೀಗಕ, ಇಂದು ಕುಂಭ ರಾಶಿಯಲ್ಲಿ ಶನಿ ಉದಯಿಸಲಿದ್ದಾನೆ. ಇದರ ಪರಿಣಾಮವಾಗಿ ಆರು ರಾಶಿಯ ಜನರ ಭಾಗ್ಯವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿ ಮಹಾತ್ಮನು ಇಂದು (ಮಾರ್ಚ್ 18) ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಆರು ರಾಶಿಯವರ ಜೀವನದ ಮೇಲೆ ಶನಿ ಕೃಪೆ ತೋರಲಿದ್ದು, ಇವರು ವೃತ್ತಿ-ವ್ಯವಹಾರದಲ್ಲಿ ಪ್ರಗತಿಯ ಜೊತೆಗೆ ಬಂಪರ್ ಧನಲಾಭವನ್ನು ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತಹ ಅದೃಷ್ಟದ ರಾಶಿಗಳೆಂದರೆ... 

2 /8

ಶನಿ ಉದಯವು ಮೇಷ ರಾಶಿಯ ಜನರಿಗೆ ಉದ್ಯೋಗದಲ್ಲಿ ಬಡ್ತಿ ಅವಕಾಶಗಳನ್ನು ತರಲಿದೆ. ಇದರಿಂದಾಗಿ ಆದಾಯವೂ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೂ ಬಂಪರ್ ಧನಯೋಗ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

3 /8

ಶನಿ ಉದಯದಿಂದ ವೃಷಭ ರಾಶಿಯವರಿಗೆ ಗೋಲ್ಡನ್ ಟೈಮ್ ಎಂತಲೇ ಹೇಳಬಹುದು. ಈ ವೇಳೆ ಉದ್ಯೋಗ ವ್ಯವಹಾರದಲ್ಲಿ ಪ್ರಗತಿಯ ಜೊತೆಗೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಳಿವೆ. ಸ್ವಂತ ಬಿಸಿನೆಸ್ ಮಾಡುವವರಿಗೆ ಸುವರ್ಣ ಯುಗ. 

4 /8

ಶನಿ ಉದಯದ ಫಲವಾಗಿ ಮಿಥುನ ರಾಶಿಯವರು ಯಾವುದೇ ಕೆಲಸಗಳಲ್ಲಿ ಶನಿಯ ಆಶೀರ್ವಾದದಿಂದ ಜಯ ಗಳಿಸುವರು. ಹಣಕಾಸಿನ ಲಾಭದ ಜೊತೆ ಜೊತೆಗೆ ಭವಿಷ್ಯಕ್ಕಾಗಿ ಒಳ್ಳೆಯ ಉಳಿತಾಯವನ್ನೂ ಮಾಡುವಿರಿ. ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ಶುಭ ಸಮಯ. 

5 /8

ಶನಿ ಉದಯದಿಂದಾಗಿ ಸಿಂಹ ರಾಶಿಯವರಿಗೆ ಮಲಗಿರುವ ಅದೃಷ್ಟವೂ ಎಚ್ಚರಗೊಳ್ಳಲಿದೆ. ಇದರಿಂದಾಗಿ ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿದ್ದು, ವ್ಯಾಪಾರಸ್ಥರಿಗೆ ವಿಶೇಷ ಧನ ಯೋಗವಿದೆ. 

6 /8

ಶನಿ ಉದಯವು ಕನ್ಯಾ ರಾಶಿಯ ಜನರಿಗೂ ಸಹ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಮನ್ನಣೆಗೆ ಪಾತ್ರರಾಗುವಿರಿ. ಹೂಡಿಕೆಯಿಂದ ಲಾಭವನ್ನು ಗಳಿಸುವಿರಿ. 

7 /8

ಶನಿ ಉದಯದ ಪರಿಣಾಮವಾಗಿ ಧನು ರಾಶಿಯ ಜನರು ಉದ್ಯೋಗ ರಂಗದಲ್ಲಿ ಉನ್ನತ ಹುದ್ದೆಗೇರಬಹುದು. ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ. ಸಂಪತ್ತು ಹೆಚ್ಚಳದಿಂದ ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಾಗಲಿದೆ. 

8 /8

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.