Shani Sade Sati: ಎಲ್ಲಾ ಗ್ರಹಗಳಲ್ಲಿ ಶನಿಗೆ ವಿಶೇಷ ಸ್ಥಾನವಿದೆ. ಶನಿಯನ್ನು ಸಾಮಾನ್ಯವಾಗಿ ಶಾಸ್ತ್ರದ ಪ್ರಕಾರ ಕ್ರಮಗಳಿಗೆ ಫಲ ನೀಡುವವನು ಎಂದು ಪರಿಗಣಿಸಲಾಗಿದೆ.
Shani Sade Sati: ಎಲ್ಲಾ ಗ್ರಹಗಳಲ್ಲಿ ಶನಿಗೆ ವಿಶೇಷ ಸ್ಥಾನವಿದೆ. ಶನಿಯನ್ನು ಸಾಮಾನ್ಯವಾಗಿ ಶಾಸ್ತ್ರದ ಪ್ರಕಾರ ಕ್ರಮಗಳಿಗೆ ಫಲ ನೀಡುವವನು ಎಂದು ಪರಿಗಣಿಸಲಾಗಿದೆ.
ವಾಸ್ತವವಾಗಿ ಶನಿಯು ಜನರು ಮಾಡುವ ಕಾರ್ಯಗಳಿಗೆ ಮಾತ್ರ ತಕ್ಕ ಫಲವನ್ನು ನೀಡುತ್ತಾನೆ. ಶನಿ ಎಂದರೆ ಎಲ್ಲರಿಗೂ ಭಯ, ಶನಿಯೂ ಒಮ್ಮೆ ನಮ್ಮ ಜೀವನವನ್ನು ಒಕ್ಕರಿಸಿಕೊಂಡರೆ ನಿಮ್ಮ ಜೀವನ ಎಷ್ಟೆದುಡ್ಡು ಅಥವಾ ಎಷ್ಟೇ ಸಂಪತ್ತಿದ್ದರೂ ಕೂಡ ನಿಮ್ಮ ಜೀವನ ಸರಿಯಾಗಿ ಇರುವುದಿಲ್ಲ.
ಶನಿ ಒಳ್ಳೆಯದ್ದು ಮಾಡಿದವರಿಗೆ ಒಳ್ಳೆಯದ್ದು, ಕೆಟ್ಟದ್ದು ಮಾಡಿದವರಿಗೆ ಕೆಟ್ಟದ್ದು ಮಾತ್ರ ಮಾಡುತ್ತಾನೆ.
ಜ್ಯೋತಿಷ್ಯದಲ್ಲಿ ಶನಿ ಸಂಕ್ರಮಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶನಿಯು ಎಲ್ಲಾ ಗ್ರಹಗಳಿಗಿಂತ ನಿಧಾನವಾಗಿ ಚಲಿಸುವ ಕಾರಣ ಶನಿಯು ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
ಶನಿ ರಾಶಿ ಬದಲಾವಣೆಯು ಕೆಲವರಿಗೆ ಲಾಭ ಮತ್ತು ಕೆಲವರಿಗೆ ನಷ್ಟವನ್ನು ಉಂಟುಮಾಡುತ್ತದೆ. ಶನಿ ರಾಶಿಯ ಬದಲಾವಣೆಯಿಂದಾಗಿ, ಶನಿ ಗ್ರಹವು ಕೆಲವು ರಾಶಿಗಳಲ್ಲಿ ಎಲಿನತಿ ಶನಿ ಮತ್ತು ಅರ್ಥಾಷ್ಟಮ ಶನಿ ಎಂದು ಪ್ರಾರಂಭವಾಗುತ್ತದೆ .
ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದು, 2025ರಲ್ಲಿ ಶನಿಯು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ.
2025ರಲ್ಲಿ ಶನಿ ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಪಡೆಯಲಿದ್ದಾನೆ. ಈ ಪ್ರಭಾವದಿಂದ ಕೆಲವು ರಾಶಿಗಳು ಶನಿ ಮತ್ತು ಅರ್ಥಾಷ್ಟಮ ಶನಿಯಿಂದ ಮುಕ್ತರಾಗುತ್ತಾರೆ.
ಮಾರ್ಚ್ 29, 2025 ರಂದು, ಶನಿಯು ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿ ಬದಲಾದ ತಕ್ಷಣ ಕೆಲವರಿಗೆ ಶನಿಯಿಂದ ಉಪಶಮನ ಸಿಕ್ಕರೆ, ಇನ್ನು ಕೆಲವರಿಗೆ ಇದರಿಂದ ಸಂಕಷ್ಟ ಶುರುವಾಗಲಿದೆ.
ಶನಿ ರಾಶಿಯ ಬದಲಾವಣೆಯಿಂದ ಮಕರ ರಾಶಿಯವರು ಶನಿಯಿಂದ ಮುಕ್ತರಾಗುತ್ತಾರೆ. ಏಳು ವರ್ಷಗಳಿಂದ ಕಾಡುತ್ತಿದ್ದ ನೋವುಗಳು ದೂರವಾಗುತ್ತವೆ.
ಮಕರ ರಾಶಿ 2027 ಜೂನ್ 3 ರಿಂದ 2029 ಆಗಸ್ಟ್ 8 ರವರೆಗೆ ಶನಿಯು ಅವರ ಮೇಲೆ ಪ್ರಭಾವ ಬೀರುತ್ತದೆ. 2025 ರಲ್ಲಿ ಸ್ವಲ್ಪ ಬಿಡುವಿನ ನಂತರ, ಶನಿಯು ಮತ್ತೆ ಮಕರ ರಾಶಿಯಲ್ಲಿ ತನ್ನ ಪ್ರಭಾವವನ್ನು ಬೀರುತ್ತಾನೆ.
ಶನಿ ರಾಶಿ ಚಕ್ರದ ಬದಲಾವಣೆಯಿಂದಾಗಿ, ಶನಿಯ ಪ್ರಭಾವವು ಕುಂಭ ರಾಶಿಯಲ್ಲಿ ಪ್ರಾರಂಭವಾಗುತ್ತದೆ. ಕುಂಭ ರಾಶಿಯ ಶನಿ ಸಾಡೇ ಸತಿ 2020 ಜನವರಿ 24 ರಂದು ಪ್ರಾರಂಭವಾಗುತ್ತದೆ. ಇದು ಜೂನ್ 3, 2027 ರವರೆಗೆ ಮಾನ್ಯವಾಗಿರುತ್ತದೆ.
ಶನಿಯು ಕುಂಭ ರಾಶಿಯವರಿಗೆ ಮೂರನೇ ಹಂತ, ಮೀನ ರಾಶಿಯವರಿಗೆ ಎರಡನೇ ಹಂತ ಮತ್ತು ಮೇಷ ರಾಶಿಯವರಿಗೆ ಮೊದಲ ಹಂತವನ್ನು ಪ್ರಾರಂಭವಾಗುತ್ತದೆ.
ಇದರೊಂದಿಗೆ ಶನಿ ಸಂಕ್ರಮಣದಿಂದಾಗಿ ಸಿಂಹ ಮತ್ತು ಧನು ರಾಶಿಯವರಿಗೆ ಅರ್ಥಾಷ್ಟಮ ಶನಿಯು ಪ್ರಾರಂಭವಾಗಲಿದೆ. ಆದ್ದರಿಂದ ಮುಂದಿನ ಎರಡೂವರೆ ವರ್ಷಗಳವರೆಗೆ ಈ ಐದು ರಾಶಿಯ ಜನರು ಶನಿಯಿಂದ ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.