Shani Mangal Yuti: ಮೂರು ದಶಕಗಳ ಬಳಿಕ ಅಶುಭ ಯೋಗ ನಿರ್ಮಾಣ, 4 ರಾಶಿಯವರಿಗೆ ಭಾರೀ ನಷ್ಟ

                                   

Shani Mangal Yuti: ಪ್ರಸ್ತುತ ಶನಿ ಮಹಾತ್ಮನು ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿದ್ದಾನೆ. ಇಂದು 10 ಮೇ 2023ರಂದು ಮಂಗಳನು ತನ್ನ ದುರ್ಬಲ ಚಿಹ್ನೆಯಾದ ಕರ್ಕಾಟಕ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಈ ರೀತಿ ಶನಿ ಮತ್ತು ಮಂಗಳ ಗ್ರಹಗಳ ಯುತಿಯಿಂದ ಅಶುಭಕರ ಷಡಷ್ಟಕ ಯೋಗ ನಿರ್ಮಾಣವಾಗುತ್ತಿದೆ. ಇದನ್ನು ನಾಲ್ಕು ರಾಶಿಯವರಿಗೆ ತುಂಬಾ ಕಷ್ಟದ ಸಮಯ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಶನಿ-ಮಂಗಳರಿಂದ ನಿರ್ಮಾಣಗೊಂಡಿರುವ ಷಡಷ್ಟಕ ಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಅಮಂಗಳಕರ, ಅಶುಭಕರ ಯೋಗ ಎಂದು ಬಣ್ಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಅಶುಭ ಸ್ಥಾನದಲ್ಲಿರುವ ಮಂಗಳನು ಹಿಂಸೆಯನ್ನು ಸೂಚಿಸಿದರೆ, ಶನಿಯು ದುಃಖ, ಬಡತನಕ್ಕೆ ಕಾರಣನಾಗುತ್ತಾನೆ. ಇದೀಗ ಷಡಷ್ಟಕ ಯೋಗವು ನಾಲ್ಕು ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟದ ಸಮಯವನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯಿರಿ. 

2 /5

ಷಡಷ್ಟಕ ಯೋಗವು ಕರ್ಕಾಟಕ ರಾಶಿಯವರ ಜೀವನದಲ್ಲಿ ತುಂಬಾ ಕಷ್ಟದ ಸಮಯವನ್ನು ತರಲಿದೆ. ಈ ಸಮಯದಲ್ಲಿ ಈ ರಾಶಿಯವರು ಯಾವುದೇ ರೀತಿಯ ಹೂಡಿಕೆ, ಆಸ್ತಿ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. 

3 /5

ಅಶುಭಕಾರ ಷಡಷ್ಟಕ ಯೋಗವು ಸಿಂಹ ರಾಶಿಯವರ ಜೀವನದಲ್ಲಿ ನಾನಾ ರೀತಿಯ ಉದ್ವಿಗ್ನತೆಯನ್ನು ಉಂಟು ಮಾಡಬಹುದು. ಮುಂದಿನ ಎರಡು ತಿಂಗಳುಗಳ ಕಾಲ ನೀವು ಯಾವುದೇ ರೀತಿಯ ವಾದ-ವಿವಾದಗಳನ್ನು ತಪ್ಪಿಸುವುದು ತುಂಬಾ ಒಳ್ಳೆಯದು. 

4 /5

ಷಡಷ್ಟಕ ಯೋಗದ ಪರಿಣಾಮವಾಗಿ ಧನು ರಾಶಿಯವರಿಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಇದರಿಂದ ನೀವು ಮಾನಸಿಕವಾಗಿ ದುರ್ಬಲಗೊಳ್ಳುವ ಸಾಧ್ಯತೆಯೂ ಇದೆ. 

5 /5

ಶನಿ ಮಂಗಳರಿಂದ ನಿರ್ಮಾಣವಾಗುವ ಷಡಷ್ಟಕ ಯೋಗವು ಕುಂಭ ರಾಶಿಯವರನು ಸಂಕಷ್ಟದ ಸುಳಿಯಲ್ಲಿ ಸಿಲುಕಿಸುತ್ತದೆ. ಈ ಸಮಯದಲ್ಲಿ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಧ್ಯಾನ-ಯೋಗದತ್ತ ಗಮನಹರಿಸಿ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.