SBI Account Holder Benefits - ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ತನ್ನ ಗ್ರಾಹಕರಿಗೆ ಹಲವು ವಿಶೇಷ ಕೊಡುಗೆಗಳನ್ನು ನೀಡುತ್ತದೆ. ಇದರಿಂದ ನೀವು ಗೃಹ ಸಾಲ ಮತ್ತು ಪರ್ಸನಲ್ ಲೋನ್‌ನಿಂದ ಹಿಡಿದು ಹಲವು ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.
ನವದೆಹಲಿ: SBI Salary Account Holders - ನೀವು ಕೂಡ ನೌಕರ ವರ್ಗಕ್ಕೆ ಸೇರಿದ್ದರೆ ನಿಮಗೂ ಕೂಡ ಒಂದು ವೇತನ ಖಾತೆ ಇರಬಹುದು. ಪ್ರತಿ ತಿಂಗಳು ನಿಮ್ಮ ಸಂಬಳ ಈ ಖಾತೆಯಲ್ಲಿ ಬರುತ್ತದೆ. ನಿಮ್ಮ ಸಂಬಳ ಖಾತೆ ಯಾವ ಬ್ಯಾಂಕಿನಲ್ಲಿರಲಿದೆ ಎಂಬುದನ್ನು ಕಂಪನಿಗಳು ನಿರ್ಧರಿಸುತ್ತವೆ. ಅದೇ ಸಮಯದಲ್ಲಿ, ಅನೇಕ ಕಂಪನಿಗಳು ನಿಮ್ಮ ಹಳೆಯ ಖಾತೆಯನ್ನು ಸಂಬಳ ಖಾತೆಗೆ ಪರಿವರ್ತಿಸುತ್ತವೆ. ಇದರ ಹೊರತಾಗಿ, ಕೆಲವು ಕಂಪನಿಗಳು ಕೆಲವು ಬ್ಯಾಂಕುಗಳ ಆಯ್ಕೆಯನ್ನು (SBI Account Holder Benefits) ಸಹ ನೀಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಬಳ ಖಾತೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದಲ್ಲಿದ್ದರೆ, ಶೂನ್ಯ ಬ್ಯಾಲೆನ್ಸ್ ಖಾತೆಯ ಹೊರತಾಗಿ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಇದನ್ನೂ ಓದಿ-LIC Jeevan Anand Policy : LIC ಯ ಈ ಯೋಜನೆಯಲ್ಲಿ ಪ್ರತಿದಿನ 76 ರೂ. ಹೂಡಿಕೆ ಮಾಡಿ ಪಡೆಯಿರಿ 10.33 ಲಕ್ಷ ರೂ.
SBI ನಲ್ಲಿ ವೇತನ ಖಾತೆ ಹೊಂದುವುದರ ಲಾಭಗಳು (SBI Latest News)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ ಸೈಟ್ ಆಗಿರುವ sbi.co.in ಪ್ರಕಾರ, SBI Salary Account ನಲ್ಲಿ ವಿಮಾ ಲಾಭ ಮತ್ತು ವೈಯಕ್ತಿಕ ಸಾಲ, ಹೋಂ ಲೋನ್, ಕಾರ್ ಲೋನ್, ಎಜುಕೇಶನ್ ಲೋನ್ ಶಾಮೀಲಾಗಿದ್ದು. ಇವುಗಳಲ್ಲಿ ನಿಮಗೆ ರಿಯಾಯಿತಿ ಕೂಡ ಸಿಗುತ್ತದೆ. ಇದಲ್ಲದೆ ಇತರೆ ಕೆಲ ಲಾಭಗಳು ಕೂಡ ಶಾಮೀಲಾಗಿವೆ. SBI ವೇತನ ಖಾತೆ ಹೊಂದಿದವರಿಗೆ ಈ ಸಂಗತಿಗಳು ತಿಳಿದಿರಲೇಬೇಕು.
SBI ವೇತನ ಖಾತೆಯ 5 ಲಾಭಗಳು (SBI Latest Update)
ನೀವು ಎಸ್‌ಬಿಐನ ಗ್ರಾಹಕರಾಗಿದ್ದರೆ, ಬ್ಯಾಂಕ್ ನಿಮಗೆ ಹಲವು ವಿಶೇಷ ಸೌಲಭ್ಯಗಳನ್ನು ನೀಡುತ್ತದೆ. ಬ್ಯಾಂಕಿನ ವಿಶೇಷ 5 ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ವಿವರ.
ಇದನ್ನೂ ಓದಿ-ನಿಮ್ಮ ಬಳಿ 5 ಮತ್ತು 10 ರೂ. ನಾಣ್ಯಗಳಿದ್ದರೆ 10 ಲಕ್ಷ ಗಳಿಸಬಹುದು: ಮಾಹಿತಿ ಇಲ್ಲಿದೆ ನೋಡಿ…
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಡೆತ್ ಬೆನಿಫಿಟ್ ಸಿಗಲಿದೆ - ನೀವು ಎಸ್‌ಬಿಐನಲ್ಲಿ ವೇತನ ಖಾತೆಯನ್ನು ಹೊಂದಿದ್ದರೆ, ನಿಮಗೆ 20 ಲಕ್ಷದವರೆಗೆ ಆಕಸ್ಮಿಕ ಮರಣದ ರಕ್ಷಣೆಯ ಅರ್ಹತೆ ಇದೆ. ಅಂದರೆ, ಎಸ್‌ಬಿಐ ಕೂಡ ಡೆತ್ ಬೆನಿಫಿಟ್ ನೀಡುತ್ತದೆ.
2. ಏರ್ ಆಕ್ಸಿಡೆಂಟ್ ಡೆತ್ ಕವರ್ - SBI ಅಧಿಕೃತ ವೆಬ್ ಸೈಟ್ sbi.co.in ನಲ್ಲಿ ನೀಡಲಾಗಿರುವ ಅಧಿಕೃತ ಮಾಹಿತಿ ಪ್ರಕಾರ , ಏರ್ ಆಕ್ಸಿಡೆಂಟ್ ಸಂಭವಿಸಿದಲ್ಲಿ, SBI ವೇತನ ಖಾತೆದಾರರಿಗೆ 30 ಲಕ್ಷದವರೆಗೆ ಏರ್ ಆಕ್ಸಿಡೆಂಟಲ್ ಇನ್ಶೂರೆನ್ಸ್ (ಡೆತ್) ರಕ್ಷಣೆ ಒದಗಿಸುತ್ತದೆ.
3. ಲೋನ್ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯ್ತಿ - SBI ವೇತನ ಖಾತೆದಾರರಿಗೆ ಪರ್ಸನಲ್ ಲೋನ್, ಕಾರ್ ಲೋನ್, ಹೋಮ್ ಲೋನ್ ಇತ್ಯಾದಿಗಳ ಸಂಸ್ಕರಣಾ ಶುಲ್ಖದಲ್ಲಿ ಶೇ.50ರಷ್ಟು ರಿಯಾಯ್ತಿ ಸಿಗುತ್ತದೆ.
4. ಓವರ್ ಡ್ರಾಫ್ಟ್ ಸೌಕರ್ಯ - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವೇತನ ಖಾತೆ ಹೊಂದಿರುವ ಗ್ರಾಹಕರಿಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಒದಗಿಸುತ್ತದೆ. ಎಸ್‌ಬಿಐ ವೇತನ ಖಾತೆದಾರರು ಓವರ್‌ಡ್ರಾಫ್ಟ್ ಸೌಲಭ್ಯದ ಅಡಿಯಲ್ಲಿ ಎರಡು ತಿಂಗಳ ವೇತನದವರೆಗೆ ಓವರ್‌ಡ್ರಾಫ್ಟ್ ಪಡೆಯಬಹುದು.
5. ಲಾಕರ್ ಶುಲ್ಕದಲ್ಲಿ ಸಿಗುತ್ತದೆ ರಿಯಾಯ್ತಿ - ಎಸ್‌ಬಿಐ ತನ್ನ ಗ್ರಾಹಕರಿಗೆ ಸಂಬಳ ಖಾತೆಯಲ್ಲಿ ಲಾಕರ್ ಶುಲ್ಕದ ಮೇಲೆ ಶೇಕಡಾ 25 ರಷ್ಟು ರಿಯಾಯಿತಿ ನೀಡುತ್ತದೆ. ಅಂದರೆ, ನೀವು ಎಸ್‌ಬಿಐನಲ್ಲಿ ಸಂಬಳ ಖಾತೆಯನ್ನು ಹೊಂದಿದ್ದರೆ, ನೀವು ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.