SBI KAVACH Personal Loan : ಈ ಲೋನ್ ಗೆ ಯಾರು, ಹೇಗೆ ಅಪ್ಲೈ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

SBI KAVACH Personal Loan Scheme : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋವಿಡ್ 19 ರೋಗಿಗಳಿಗಾಗಿ SBI KAVACH Personal Loan Scheme ಅನ್ನು ಪ್ರಾರಂಭಿಸಿದೆ. ಇದು ಯೂನಿಕ್ ಕೋಲೆಟರಲ್ ಫ್ರೀ ಲೋನ್ ಸ್ಕೀಮ್ ಆಗಿದೆ.

ನವದೆಹಲಿ : SBI KAVACH Personal Loan Scheme : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋವಿಡ್ 19 ರೋಗಿಗಳಿಗಾಗಿ SBI KAVACH Personal Loan Scheme ಅನ್ನು ಪ್ರಾರಂಭಿಸಿದೆ. ಇದು ಯೂನಿಕ್ ಕೋಲೆಟರಲ್ ಫ್ರೀ ಲೋನ್ ಸ್ಕೀಮ್ ಆಗಿದೆ. ಈ ಯೋಜನೆಯ ಅನ್ವಯ COVID ಚಿಕಿತ್ಸೆಯ, ಖರ್ಚಿನ ರೀಎಂಬೆಸ್ಮೆಂಟ್ ಕೂಡಾ ಪಡೆಯಬಹುದಾಗಿದೆ. ಹಾಗಿದ್ದರೆ ಈ ಲೋನ್ ಗೆ ಆನ್ ಲೈನ್ ಆಪ್ಲೈ ಹೇಗೆ ಮಾಡಬಹುದು ನೋಡೋಣ.  ಪ್ರೊಸೆಸಿಂಗ್ ಶುಲ್ಕ ಎಷ್ಟಿರಲಿದೆ? ಮಾರೆಟೇರಿಯಂ ಸೌಲಭ್ಯ ಇದೆಯಾ ಎನ್ನುವ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಈ ಯೋಜನೆಯಡಿ, ಸ್ಯಾಲರಿಡ್ ಮತ್ತು ನಾನ್ ಸ್ಯಾಲರೀಡ್ ಗ್ರಾಹಕರು ಸಾಲ ಪಡೆಯಬಹುದು. ಪಿಂಚಣಿದಾರರು ಸಹ ಇದರ ಲಾಭವನ್ನು  ಪಡೆಯಬಹುದು. 1 ಏಪ್ರಿಲ್ 2021 ಅಥವಾ ನಂತರ ಕೋವಿಡ್ ಸೋಂಕಿಗೆ ಒಳಗಾದವರು ತಮಗೆ ಅಥವಾ ಕುಟುಂಬದ ಚಿಕಿತ್ಸೆಗಾಗಿ ಈ ಲೋನ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.

2 /6

 ಈ ವೈಯಕ್ತಿಕ ಸಾಲವನ್ನು ಪಡೆಯಬೇಕಾದರೆ, ಗ್ರಾಹಕ ಅಥವಾ ಅವರ ಕುಟುಂಬ ಸದಸ್ಯರ ಕೋವಿಡ್ ಪಾಸಿಟಿವ್ ವರದಿ ಹೊಂದಿರಬೇಕು. ಈ ಯೋಜನೆಯ ಲಾಭ ಪಡೆಯಲು ಕೊಲೆಟರಲ್ ಅಗತ್ಯವಿಲ್ಲ . ಇದೊಂದು ಟರ್ಮ್ ಲೋನ್ ಆಗಿದೆ. 

3 /6

ಅರ್ಹತೆಗೆ ಅನುಗುಣವಾಗಿ, ಗ್ರಾಹಕರು,  25 ಸಾವಿರ ರೂ.ಗಳಿಂದ 5 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ಈಗಾಗಲೇ ನಿಮ್ಮ ಹೆಸರಿನಲ್ಲಿ ಬೇರೆ ಸಾಲವಿದ್ದರೂ ಈ ಸಾಲ ಪಡೆಯಬಹುದು. 

4 /6

ಈ ವಿಭಾಗದಲ್ಲಿ ಗ್ರಾಹಕರು ಶೇಕಡಾ 8.5 ರಷ್ಟು ಅಗ್ಗದ ದರದಲ್ಲಿ ಸಾಲವನ್ನು ಪಡೆಯಬಹುದು. ಈ ಸಾಲದ ಮರುಪಾವತಿ ಅವಧಿ 60 ತಿಂಗಳುಗಳು. ಇನ್ನು 3 ತಿಂಗಳ ಮಾರೆಟೋರಿಯಂ ಅನ್ನು ಕೂಡಾ ಒಳಗೊಂಡಿದೆ.

5 /6

ಎಸ್‌ಬಿಐ ಶಾಖೆಗೆ ಭೇಟಿ ನೀಡುವ ಮೂಲಕ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಯೋನೊ ಮೂಲಕ ಪ್ರೀ ಅಪ್ರೂವ್ಡ್ ಮಾಡಿಕೊಳ್ಳಬಹುದು.

6 /6

ಈ ಯೋಜನೆಯಲ್ಲಿ, ಎಸ್‌ಬಿಐ ತನ್ನ ಗ್ರಾಹಕರಿಗೆ ಪ್ರೋಸೆಸಿಂಗ್ ಶುಲ್ಕ ಕೂಡಾ ಇರುವುದಿಲ್ಲ. ಇದಲ್ಲದೆ, ಬ್ಯಾಂಕ್ ಗ್ರಾಹಕರಿಗೆ ಪ್ರೀ ಕ್ಲೋಸಿಂಗ್ ಮತ್ತು ಪ್ರೀ ಪೆಮೆಂಟ್ ಪೆನಲ್ಟಿ ಯನ್ನು ಕೂಡಾ ಮನ್ನಾ ಮಾಡಿದೆ.