Home Remedis For Bad Breath: ನಿಮ್ಮ ಮಸಾಲೆ ಡಬ್ಬಿಯಲ್ಲಿ ಇರುವ ಈ ಪದಾರ್ಥಗಳಿಂದ ಬಾಯಿಯ ದುರ್ವಾಸನೆಯನ್ನು ಸುಲಭವಾಗಿ ನಿವಾರಿಸಬಹುದು.
Home Remedis For Bad Breath: ಬೆಳಿಗ್ಗೆ ಬಾಯಿಯಲ್ಲಿ ದುರ್ವಾಸನೆ ಬರುವುದು ಸಹಜ. ಕಾರಣ, ರಾತ್ರಿಯಿಡೀ ಬಾಯಿಯಲ್ಲಿ ಬಹಳಷ್ಟು ಬಾಕ್ಟೀರಿಯಾ ಸಂಗ್ರಹವಾಗುವುದರಿಂದ ಬಾಯಿಯಲ್ಲಿ ಕೆಟ್ಟ ವಾಸನೆ ಬರುತ್ತದೆ. ಆದರೆ, ಕೆಲವರಿಗೆ ಯಾವಾಗಲು ಬಾಯಿಯಿಂದ ಕೆಟ್ಟ ವಾಸನೆ ಬರುತ್ತದೆ. ಇದು ಕಿರಿ ಕಿರಿಯ ಜೊತೆಗೆ ನಾಲ್ಕು ಜನರೊಡನೆ ಮಾತನಾಡುವಾಗ ಅವರ ಆತ್ಮವಿಶ್ವಾಸವನ್ನೂ ಕುಗ್ಗಿಸುತ್ತದೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ, ಕೆಲವು ಮನೆಮದ್ದುಗಳು ನಿಮಗೆ ಪ್ರಯೋಜನಕಾರಿ ಆಗಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಾಯಿಯ ದುರ್ವಾಸನೆ ವ್ಯಕ್ತಿಯ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತದೆ. ಇದನ್ನು ತಪ್ಪಿಸಲು ಮೌತ್ ಫ್ರೆಶ್ನರ್ಗಳು ಬಹಳ ಪ್ರಯೋಜನಕಾರಿ ಆಗಿವೆ. ಆದರೆ, ಇವನ್ನು ನೀವು ಹೊರಗಿನಿಂದ ಖರೀದಿಸುವ ಅಗತ್ಯವಿಲ್ಲ, ನಿಮ್ಮ ಮನೆಯಲ್ಲಿಯೇ ಇರುವ ಮೌತ್ ಫ್ರೆಶ್ನರ್ಗಳನ್ನು ಬಳಸಿ ಬಾಯಿಯ ದುರ್ವಾಸನೆಗೆ ಬೈ ಬೈ ಹೇಳಬಹುದು.
ಪ್ರಮುಖ ಮಸಾಲೆ ಪದಾರ್ಥವಾಗಿರುವ ಲವಂಗವು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆಯುರ್ವೇದದ ಪ್ರಕಾರ, ಔಷಧೀಯ ಗುಣಗಳ ಆಗರವಾಗಿರುವ ಲವಂಗ ಹಲವು ರೋಗಗಳಿಗೆ ದಿವ್ಯೌಷಧವಾಗಿದೆ. ಬಾಯಿಯಿಂದ ಬರುವ ಕೆಟ್ಟ ವಾಸನೆಗೂ ಸಹ ಲವಂಗವನ್ನು ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ. ಲವಂಗವನ್ನು ಜಗಿಯುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಕಡಿಮೆ ಆಗಿ, ದುರ್ವಾಸನೆಯಿಂದಲೂ ಮುಕ್ತಿ ದೊರೆಯುತ್ತದೆ.
ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ನಿಮಗೆ ತಿಳಿದಿರಬಹುದು. ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಕೂಡ ಹೆಚ್ಚು ನೀರು ಸೇವಿಸುವುದು ಅತ್ಯಗತ್ಯ. ಆಗಾಗ್ಗೆ ನೀರು ಕುಡಿಯುವುದರಿಂದ ಬಾಯಿಯಲ್ಲಿ ಸಂಗ್ರಹವಾಗುವ ಹೆಚ್ಚಿನ ಬ್ಯಾಕ್ಟೀರಿಯಾಗಳು ಅದರ ಮೂಲಕ ಹೊರಬರುತ್ತವೆ.
ಸಾಮಾನ್ಯವಾಗಿ ಗಂಟಲು ನೋವಿರುವಾಗ ನೀರಿಗೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುತ್ತೇವೆ. ಗಾರ್ಗಲ್ ಮಾಡುತ್ತೇವೆ. ಬಾಯಿಯ ದುರ್ವಾಸನೆಯನ್ನು ನಿವಾರಿಸುವಲ್ಲಿಯೂ ಕೂಡ ಇದು ಅತ್ಯುತ್ತಮ ಪರಿಹಾರವಾಗಿದೆ.
ಅಡುಗೆಯಲ್ಲಿ ಪ್ರಮುಖ ಮಸಾಲೆ ಪದಾರ್ಥವಾಗಿ ಬಳಸುವ ದಾಲ್ಚಿನ್ನಿಯ ಸಣ್ಣ ತುಂಡನ್ನು ಬಾಯಿಯಲ್ಲಿ ಹಾಕಿ ಜಗಿಯುವುದರಿಂದಲೂ ಬಾಯಿಯ ದುರ್ವಾಸನೆಯನ್ನು ನಿವಾರಿಸಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.