140 ವರ್ಷಗಳ ಬಳಿಕ ಶನಿಪ್ರಿಯ ಧನಯೋಗ: ನ್ಯಾಯದಾತನ ಅನಂತ ಕೃಪೆಯಿಂದ ಈ ರಾಶಿಗೆ ಅದೃಷ್ಟ-ಸಂಪತ್ತಿನ ಮಳೆ, 2025ರವರೆಗೆ ಶುಕ್ರದೆಸೆ

Saturn Direct Transit 2023: ಜ್ಯೋತಿಷ್ಯ ಪ್ರಕಾರ ಶನಿದೇವ ನಿಧಾನವಾಗಿ ಚಲಿಸುವ ಗ್ರಹ ಮತ್ತು ನ್ಯಾಯಯುತ ಫಲಿತಾಂಶಗಳನ್ನು ನೀಡುವುದೇ ಈತನ ಕಾರ್ಯ. ಅಂದಹಾಗೆ ಶನಿದೇವನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಈ ರೀತಿಯಾಗಿ ಶನಿದೇವನು ಇಡೀ ರಾಶಿಚಕ್ರದ ಮೂಲಕ ಪ್ರಯಾಣಿಸಬೇಕೆಂದರೆ ಸುಮಾರು 30 ವರ್ಷಗಳೇ ಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಶನಿದೇವನು ಪ್ರಸ್ತುತ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಆದರೆ ಇಂದಿನಿಂದ ಅಂದರೆ ನವೆಂಬರ್ 4 ರಿಂದ ಶನಿದೇವನು ನೇರವಾಗಿ ಚಲಿಸಲು ಪ್ರಾರಂಭಿಸುತ್ತಾನೆ. ಶನಿಯ ನೇರ ಚಲನೆಯು 5 ರಾಶಿಯ ಜನರಿಗೆ ಮಂಗಳವನ್ನುಂಟು ಮಾಡಲಿದೆ. ಈ ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಗೋಚರಿಸಲಿವೆ. ಇನ್ನೊಂದೆಡೆ ಸುಮಾರು 140 ವರ್ಷಗಳ ಬಳಿಕ ಶನಿಯ ನೇರ ಚಲನೆಯಿಂದ ಧನಯೋಗ ರೂಪುಗೊಳ್ಳುತ್ತಿದೆ.

2 /8

ಧನಯೋಗ ರೂಪುಗೊಳ್ಳುತ್ತಿರುವುದರಿಂದ ಕೆಲ ರಾಶಿಯ ಜನರಿಗೆ ಅದೃಷ್ಟ ತುಂಬಿ ಬರಲಿದೆ. ಜೊತೆಗೆ ಅವರ ಜೀವನದಲ್ಲಿ ಸಂಪತ್ತು ಹೆಚ್ಚಾಗುತ್ತದೆ. ಅಂತಹ ಅದೃಷ್ಟಶಾಲಿ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

3 /8

ಮೇಷ ರಾಶಿ: ಜ್ಯೋತಿಷ್ಯದ ಪ್ರಕಾರ, ಶನಿಯು ನೇರ ಚಲನೆ ಪ್ರಾರಂಭಿಸಿದಾಗಿನಿಂದ ಮೇಷ ರಾಶಿಯವರಿಗೆ ಶುಭವಾಗಲಿದೆ. ಶನಿಗ್ರಹದ ಸಂಚಾರದಿಂದ ಕೋಪ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ ಮತ್ತು ಸ್ವಭಾವವು ಸುಧಾರಿಸುತ್ತದೆ. ಇದಲ್ಲದೇ ವ್ಯಾಪಾರದ ದೃಷ್ಟಿಯಿಂದ ಈ ರಾಶಿಯವರಿಗೆ ಶನಿಯ ಸಂಕ್ರಮಣವೂ ಶುಭಕರವಾಗಿದೆ. ಸಾಕಷ್ಟು ಲಾಭವನ್ನು ಪಡೆಯುತ್ತೀರಿ. ಉದ್ಯೋಗ ಬದಲಾವಣೆಗೆ ಸಹ ಅನುಕೂಲಕರ ಸಮಯವಾಗಿರುತ್ತದೆ.

4 /8

ವೃಷಭ ರಾಶಿ: ಜ್ಯೋತಿಷ್ಯದ ಪ್ರಕಾರ, ಶನಿ ನೇರ ಚಲನೆಯಿಂದ ವೃಷಭ ರಾಶಿಯವರಿಗೆ ಅನುಕೂಲಕರ ದಿನಗಳ ಬರಲಿವೆ. ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಗಳು ಮತ್ತು ವ್ಯವಹಾರದಲ್ಲಿ ಸಾಕಷ್ಟು ಆರ್ಥಿಕ ಪ್ರಗತಿ ಇರುತ್ತದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ ಮತ್ತು ಆರೋಗ್ಯವು ಉತ್ತಮವಾಗಿರುತ್ತದೆ. ಹೂಡಿಕೆಯಿಂದ ಲಾಭ ಗಳಿಸುತ್ತೀರಿ.

5 /8

ಕನ್ಯಾ ರಾಶಿ: ಶನಿ ನೇರ ಚಲನೆಯಿಂದ ಕನ್ಯಾ ರಾಶಿಯ ಜನರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಉದ್ಯೋಗದಲ್ಲಿ ಉತ್ತಮ ಆಯ್ಕೆಗಳು ಲಭ್ಯವಾಗಲಿದೆ. ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ವ್ಯವಹಾರದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ಹಠಾತ್ ಆರ್ಥಿಕ ಲಾಭ ಉಂಟಾಗಬಹುದು.

6 /8

ತುಲಾ ರಾಶಿ: ನವೆಂಬರ್ 4ರಂದು ಶನಿಯ ರಾಶಿ ಬದಲಾವಣೆಯು ತುಲಾ ರಾಶಿಯವರಿಗೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ವ್ಯಾಪಾರ ಮತ್ತು ಉದ್ಯೋಗದಲ್ಲಿ ವಿಶೇಷ ಲಾಭಗಳನ್ನು ಪಡೆಯುತ್ತಾರೆ. ಅನಿರೀಕ್ಷಿತ ಆರ್ಥಿಕ ಲಾಭ ದೊರೆಯಲಿದೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ಕೆಲವು ರೀತಿಯ ಬೋನಸ್‌ ಕೂಡ ಪಡೆಯುತ್ತೀರಿ.

7 /8

ಧನು ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ನೇರ ಚಲನೆಯು ಧನು ರಾಶಿಯವರಿಗೆ ವರದಾನ ಎನ್ನಬಹುದು. ಈ ಅವಧಿಯಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಯಶಸ್ವಿಯಾಗುತ್ತೀರಿ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳ ಜೊತೆಗೆ ಸಂಬಳವೂ ಹೆಚ್ಚಾಗಬಹುದು. ಪೂರ್ವಿಕರ ಆಸ್ತಿಯಿಂದ ಲಾಭವನ್ನು ಪಡೆಯುತ್ತೀರಿ.

8 /8

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)