Saturn Combust 2024: ಕುಂಭ ರಾಶಿಯಲ್ಲಿ ಅಸ್ತನಾದ ಶನಿ, ಈ ಜನರಿಗೆ ಸಾಡೇಸಾತಿಯಿಂದ ಮುಕ್ತಿ, ಧನ ಸಂಪತ್ತಿನಲ್ಲಿ ಅಪಾರ ಹೆಚ್ಚಳ!

Shai Asta 2024: ಶನಿ ಪ್ರಸ್ತುತ ತನ್ನ ಮೂಲ ತ್ರಿಕೋನ ಹಾಗೂ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಅಸ್ತನಾಗಿದ್ದಾನೆ. ಇದರಿಂದ ಕೆಲ ರಾಶಿಗಳ ಜನರ ಕಷ್ಟ ಕಾಲ ಅಂತ್ಯವಾಗಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ (Spiritual News In Kannada)
 

Shani Asta 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿಯ ನಡೆಯಲ್ಲಿ ಆಗುವ ಬದಲಾವಣೆ ಯಾವುದಾದರೊಂದು ರಾಶಿಗೆ ಸಾಡೇಸಾತಿ ತಂದೊಡ್ಡಿದರೆ, ಬೇರೆ ರಾಶಿಗೆ ಆತನ ಎರಡೂವರೆ ವರ್ಷಗಳ ಕಾಟ ತಂದೊಡ್ಡುತ್ತದೆ. ಪ್ರಸ್ತುತ ಫೆಬ್ರುವರಿ 3 ರಂದು ಶನಿ ಅಸ್ತನಾಗಿದ್ದು, ಮಾರ್ಚ್ 9 ರಂದು ಆತ ಪುನಃ ಉದಯಿಸಲಿದ್ದಾನೆ. (Spiritual News In Kannada) 

 

ಇದನ್ನೂ ಓದಿ-Three Rajyogas 2024: ಇನ್ನೂರು ವರ್ಷಗಳ ಬಳಿಕ ರುಚಕ, ಮಾಲವ್ಯ ಸೇರಿದಂತೆ ಮೂರು ರಾಜಯೋಗಗಳ ರಚನೆ, ಧನ-ಸಂಪತ್ತು-ಪ್ರತಿಷ್ಠೆಯಲ್ಲಿ ಭಾರಿ ವೃದ್ಧಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಅಲ್ಲಿಯವರೆಗೆ ಕೆಲ ರಾಶಿಗಳ ಜನರಿಗೆ ಶನಿಯ ಸಾಡೇಸಾತಿ ಹಾಗೂ ಎರಡೂವರೆ ವರ್ಷಗಳ ಆಶುಭ ಪ್ರಭಾವದಿಂದ ಮುಕ್ತಿ ಸಿಗಲಿದೆ. ಏಕೆಂದರೆ ಶನಿಯ ಅಸ್ತನಾಗಿರುವ ಕಾರಣ ಆತನ ಪ್ರಭಾವ ಈ ರಾಶಿಗಳ ಜನರ ಮೇಲೆ ಇರುವುದಿಲ್ಲ. ಇದಲ್ಲದೆ ಅವರ ಧನ-ಸಂಪತ್ತಿನಲ್ಲಿ ಅಪಾರ ವೃದ್ಧಿ ಕಾಣಲು ಸಿಗಲಿದೆ.   

2 /6

ಈ ರಾಶಿಗಳ ಜನರ ಮೇಲೆ ಎರಡೂವರ್ಷಗಳ ಕಾಟ ಅಂತ್ಯ: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವ ಕುಂಭ ರಾಶಿಯಲ್ಲಿ ಅಸ್ತನಾಗಿರುವ ಕಾರಣ ಕರ್ಕ ಹಾಗೂ ವೃಶ್ಚಿಕ ರಾಶಿಯ ಜಾತಕದವರಿಗೆ ಎರಡೂವರೆ ವರ್ಷಗಳ ಆತನ ಕಾಟದಿಂದ ಮುಕ್ತಿ ಸಿಗಲಿದೆ. ಪ್ರಸ್ತುತ ಕರ್ಕ ರಾಶಿಯ ಜನರ ಜಾತಕದ 8ನೇ ಭಾವದಲ್ಲಿ ಮತ್ತು ವೃಶ್ಚಿಕ ರಾಶಿಯ ಜನರ ಚತುರ್ಥ ಭಾವದಲ್ಲಿ ಶನಿ ಸಂಚರಿಸುತ್ತಿದ್ದಾನೆ.   

3 /6

ಹೀಗಾಗಿ ಶನಿ ದೇವ ಅಸ್ತನಾಗುವುದು ನಿಮ್ಮ ಪಾಲಿಗೆ ಲಾಭ ತರಲಿದ್ದು, ನಿಮ್ಮ ಧನ-ಸಂಪತ್ತು ಅಪಾರ ಹೆಚ್ಚಾಗಲಿದೆ. ಇದರ ಜೊತೆಗೆ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ಕಾಯಿಲೆಗಳಿಂದ ನಿಮಗೆ ಮುಕ್ತಿ ಸಿಗಲಿದೆ. ನಿಧಾನಗತಿಯಲ್ಲಿ ಸಾಗುತ್ತಿರುವ ವ್ಯಾಪಾರ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ.   

4 /6

ಈ ರಾಶಿಗಳ ಜನರ ಮೇಲೆ ಸಾಡೇಸಾತಿ ಪ್ರಭಾವ ಅಂತ್ಯವಾಗಲಿದೆ: ಶನಿ ದೇವ ಅಸ್ತನಾಗುವ ಕಾರಣ ಮೀನ ರಾಶಿಯ ಜಾತಕದವರ ಮೇಲೆ ಶನಿದೇವನ ಸಾಡೇಸಾತಿಯ ಆಶುಭ ಪ್ರಭಾವ ಕಡಿಮೆಯಾಗಲಿದೆ. ಇನ್ನೊಂದೆಡೆ ಕುಂಭ ರಾಶಿಯ ಎರಡನೇ ಚರಣ ಹಾಗೂ ಮಕರ ರಾಶಿಯ ಮೂರನೇ  ಚರಣವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಶನಿ ದೇವನ ಅಸ್ತನಾಗುವುದು ಮೀನ, ಕುಂಭ ಹಾಗೂ ಮಕರ ರಾಶಿಯ ಜಾತಕದ ಜನರಿಗ ಮಾನಸಿಕ ಒತ್ತಡದಿಂದ ಮುಕ್ತಿ ಸಿಗಲಿದೆ.   

5 /6

ಇದರ ಜೊತೆಗೆ ಆಕಸ್ಮಿಕ ಧನಲಾಭದ ಯೋಗ ಕೂಡ ರಚನೆಯಾಗುತ್ತಿದೆ. ಆರೋಗ್ಯ ಸುಧಾರಿಸಲಿದೆ. ಅಂದುಕೊಂಡ ಯೋಜನೆಗಳು ಪೂರ್ಣಗೊಳ್ಳಲಿವೆ. ಹೂಡಿಕೆಯಿಂದ ಲಾಭದ ಯೋಗಗಳು ಸೃಷ್ಟಿಯಾಗುತ್ತಿವೆ. ಈ ಅವಧಿಯಲ್ಲಿ ನೀವು ದೇಶ ವಿದೇಶದ ಯಾತ್ರೆ ಕೈಗೊಳ್ಳುವಿರಿ. ವ್ಯಾಪಾರಿಗಳಿಗೆ ವ್ಯಾಪಾರ ಮೊದಲಿಗಿಂತ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ನೀವು ಕೆಲ ವ್ಯಾಪಾರಿ ಒಪ್ಪಂದಗಳನ್ನು ಮಾಡಿಕೊಳ್ಳಬಹುದು.   

6 /6

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)