ಅಂಬಾನಿ ಮದುವೆ ಸಂಭ್ರಮ ಹೆಚ್ಚಿಸಿದ ಸಾರಾ ಸೌಂದರ್ಯ..! ಸಚಿನ್‌ ಪುತ್ರಿಯ ಫೋಟೋಸ್‌ ಇಲ್ಲಿವೆ

Sara Tendulkar photos : ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ವೈಭೋಗದಿಂದ ನಡೆಯಿತು. ಈ ಸಮಾರಂಭದಲ್ಲಿ ಬಾಲಿವುಡ್‌, ಹಾಲಿವುಡ್‌ ಸೇರಿದಂತೆ ಹಲವಾರು ಸ್ಟಾರ್‌ಗಳು ಭಾಗಿಯಾಗಿದ್ದರು. ಈ ಪೈಕಿ ಸಚಿನ್‌ ತೆಂಡೂಲ್ಕರ್‌ ಪುತ್ರಿ ಸಾರಾ ತನ್ನ ಸೌಂದರ್ಯ ಪ್ರದರ್ಶನದಿಂದ ವಿವಾಹ ಮಹೋತ್ಸವದ ಮುಖ್ಯ ಆಕರ್ಷಣೆ ಬಿಂದುವಾಗಿದ್ದರು.. 
 

1 /8

ಕಳೆದ ವರ್ಷ ಡಿಸೆಂಬರ್‌ನಲ್ಲಿ ಅನಂತ್‌ ಅಂಬಾನಿ ನಿಶ್ಚಿತಾರ್ಥ ನಡೆದಿತ್ತು, ಮಾರ್ಚ್‌ನಲ್ಲಿ ಜಾಮ್‌ನಗರದಲ್ಲಿ ವಿವಾಹ ಪೂರ್ವ ಕಾರ್ಯಕ್ರಮ ನಡೆದಿದ್ದವು.   

2 /8

ಜುಲೈ 12 ರಂದು, ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ, ಅವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರ ಮುದ್ದು ಮಗಳು ಸಾರಾ ತೆಂಡೂಲ್ಕರ್ ವಿಶೇಷ ಆಕರ್ಷಣೆಯಾದರು.  

3 /8

ಸಾರಾ ತೆಂಡೂಲ್ಕರ್ ತಿಳಿ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ರಾಯಲ್ ಲುಕ್‌ನಲ್ಲಿ ಮಿಂಚಿದ್ದರು. ಇತ್ತೀಚೆಗೆ ತಮ್ಮ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.   

4 /8

ಅನಂತ್ ಮತ್ತು ರಾಧಿಕಾ ಮದುವೆಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರಾ ಭಾಗವಹಿಸಿದ್ದರು.  

5 /8

ಸಾರಾ ತೆಂಡೂಲ್ಕರ್ ತಿಳಿ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದರು. ಅವರು ಧರಿಸಿದ್ದ ಆಭರಣಗಳು ಮತ್ತು ಬಳೆಗಳು ಸಾರಾ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವಂತಿದ್ದವು. ಸದ್ಯ, ಈ ಸುಂದರಿಯ ಸೌಂದರ್ಯ ನೋಡಿ ಅಭಿಮಾನಿಗಳು ಹೊಗಳುತ್ತಿದ್ದಾರೆ..  

6 /8

ಸಾರಾ ತೆಂಡೂಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. Instagram ನಲ್ಲಿ ಸುಮಾರು 7 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.   

7 /8

ನಿಯಮಿತವಾಗಿ ತಮ್ಮ ಜೀವನದಲ್ಲಿ ನಡೆಯುವ ಘಟನೆಗಳು, ಖುಷಿ ವಿಚಾರಗಳು, ಉದ್ಯಮಕ್ಕೆ ಸಂಬಂಧಿಸಿ ಫೋಟೋಸ್‌ ಹಂಚಿಕೊಳ್ಳುತ್ತಾರೆ.. ಸಾರಾ ತೆಂಡೂಲ್ಕರ್ ವೈದ್ಯಕೀಯ ಶಿಕ್ಷಣವನ್ನು ಓದುತ್ತಿದ್ದಾರೆ.  

8 /8

ಸಾರಾ ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಸಹ ಹೆಸರುವಾಸಿ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುತ್ತಾರೆ. ಸಚಿನ್‌, ಪತ್ನಿ ಅಂಜಲಿ ಮತ್ತು ಸಾರಾ ತೆಂಡೂಲ್ಕರ್ ಅವರೊಂದಿಗೆ ಅಂಬಾನಿ ವಿವಾಹದಲ್ಲಿ ಭಾಗವಹಿಸಿದ್ದರು.