ಶಾರ್ಟ್‌ ಡ್ರೇಸ್‌ನಲ್ಲಿ ಮಿಂಚಿದ ʼಕಾಂತಾರʼ ಸಿಂಗಾರ ಸಿರಿ..! ಫೋಟೋಸ್‌ ಇಲ್ಲಿವೆ

Sapthami Gowda photos : ಕಾಂತಾರ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಯಶಸ್ಸು ಕಂಡ ಸಪ್ತಮಿಗೌಡ ಅವರ ಗ್ಲಾಮರ್‌ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಹಂಚಿಕೊಂಡಿರುವ ಇತ್ತೀಚಿನ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿವೆ..
 

1 /9

ಕಾಂತಾರ ಸಿನಿಮಾ ನೋಡಿದವರಿಗೆ ಲೀಲಾ ಸೌಂದರ್ಯ ಪರಿಚಯ ಹೊಸದೇನಲ್ಲ.. ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಸುಂದರಿ ಸಪ್ತಮಿ ಎಲ್ಲರ ಮೆಚ್ಚುಗೆ ಕಾರಣವಾಗಿದ್ದರು.  

2 /9

ಕಾಂತಾರ ಒಂದೇ ಚಿತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ ತಾರೆ ಸಪ್ತಮಿ ಗೌಡ.    

3 /9

ಸಪ್ತಮಿ ಗೌಡ 2020 ರಲ್ಲಿ ದುನಿಯಾ ಸೂರಿ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.  

4 /9

ಈ ಚಿತ್ರಕ್ಕಾಗಿ ಅವರು 2021 ರಲ್ಲಿ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು.  

5 /9

ಮಳೆಗಾಲದಲ್ಲಿ ಬೆಂಗಳೂರು ಸುತ್ತಾಡುತ್ತಿರುವ ಸಪ್ತಮಿ ಗೌಡ ಕೆಲವು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.  

6 /9

ಬ್ಲಾಕ್‌ ಅಂಡ್‌ ವೈಟ್‌ ಶಾರ್ಟ್‌ ಡ್ರೇಸ್‌ನಲ್ಲಿ ಕಾಣಿಸಿಕೊಂಡಿರುವ ಸುಂದರಿಯ ಫೋಟೋಸ್‌ ನೆಟ್ಟಿಗರ ಗಮನ ಸೆಳೆಯುತ್ತಿವೆ.  

7 /9

ಹಾಲಿವುಡ್ ಸ್ಟಾರ್‌ ನಟಿ ಮತ್ತು ಕೊರಿಯನ್ ಹುಡುಗಿಯರಂತೆ ಸಪ್ತಮಿ ಕಾಣುತ್ತಿದ್ದಾರೆ ಅಂತ ಅವರ ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.  

8 /9

ಸಧ್ಯ ಸಪ್ತಮಿ ಗೌಡ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಬಾಲಿವುಡ್ ಚಿತ್ರ ದಿ ವ್ಯಾಕ್ಸಿನ್ ವಾರ್‌ನಲ್ಲಿ ಅವರು ನಟಿಸಲಿದ್ದಾರೆ.  

9 /9

ಇತ್ತೀಚಿಗೆ ಯುವ ಚಿತ್ರದ ಮೂಲಕ ಯುವರಾಜ್‌ಕುಮಾರ್‌ಗೆ ಜೋಡಿಯಾಗಿ ತೆರೆ ಮೇಲೆ ಸಪ್ತಮಿ ಕಾಣಿಸಿಕೊಂಡಿದ್ದರು.