ಶಾಂತಿ ಹುಡುಕುತ್ತಾ ಸದ್ಗುರು ಸನ್ನಿಧಿ ಸೇರಿದ ಸಮಂತಾ..! ಫೋಟೋಸ್ ನೋಡಿ

Samantha Ruth Prabhu : ನಟನೆಯಿಂದ ಕೊಂಚ ಬ್ರೇಕ್‌ ಪಡೆದಿರುವ ನಟಿ ಸಮಂತಾ ಆಧ್ಯಾತ್ಮಿಕತೆಯತ್ತ ಮುಖ ಮಾಡಿದ್ದಾರೆ. ಸದ್ಯ ಸಿನಿಮಾದಿಂದ ದೂರವಿರುವ ಸ್ಯಾಮ್‌ ಇಂದು ಇಶಾ ಫೌಂಡೇಶನ್‌ಗೆ ಭೇಟಿ ನೀಡಿದರು. ಈ ವೇಳೆ ಸದ್ಗುರು ಸನ್ನಿದಾನದಲ್ಲಿ ಧ್ಯಾನಕ್ಕೆ ಕುಳಿತ ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

1 /7

ನಟಿ ಸಮಂತಾ ರುತ್ ಪ್ರಭು ನಟನೆಯಿಂದ ದೂರ ಉಳಿದಿದ್ದು, ಇಂದು ಸದ್ಗುರು ಇಶಾ ಫೌಂಡೇಶನ್‌ಗೆ ಭೇಟಿ ನೀಡಿದ್ದಾರೆ.  

2 /7

ಸಮಂತಾ ಆರೋಗ್ಯ ಸಮಸ್ಯೆಯಿಂದ ಸಂಪೂರ್ಣ ಗುಣಮುಖರಾಗಲು ಬಯಸಿದ್ದು ಕೆಲವು ದಿನಗಳ ಕಾಲ ನಟನೆಯಿಂದ ದೂರ ಉಳಿಯುವುದಾಗಿ ತಿಳಿಸಿದ್ದರು. ಅದರ ಹಿನ್ನೆಲೆ ಸದ್ಗುರು ಆಶ್ರಮಕ್ಕೆ ಭೇಟಿ ನೀಡಿದ್ದಾರೆ.  

3 /7

ಸದ್ಗುರು ಸನ್ನಿದಾನದಲ್ಲಿ ಧ್ಯಾನ ಮಾಡುತ್ತಿರುವ ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  

4 /7

ಸರಳವಾದ ಬಿಳಿ ಬಟ್ಟೆ ಧರಿಸಿ, ಕೊರಳಲ್ಲಿ ಮಾಲೆ ಹಾಕಿಕೊಂಡು ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡುತ್ತಿರುವ ದೃಶ್ಯ ಫೋಟೋದಲ್ಲಿದೆ.  

5 /7

ತನ್ನ ಪೋಸ್ಟ್‌ನ ಶೀರ್ಷಿಕೆಯಲ್ಲಿ, ಶಾಂತವಾಗಿರಲು ಮತ್ತು ಶಕ್ತಿಯನ್ನು ಪಡೆಯಲು ಧ್ಯಾನವು ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ಸಮಂತಾ ಉಲ್ಲೇಖಿಸಿದ್ದಾರೆ.  

6 /7

ಸದ್ಯ ಸಮಂತಾ ಅಭಿಮಾನಿಗಳು ಅವರ ಮುಂಬರುವ ಸಿನಿಮಾ 'ಕುಷಿ' ಗಾಗಿ ಕಾತುರದಿಂದ ಕಾಯುತ್ತಿದ್ದಾರೆ, ಇದರಲ್ಲಿ ಅವರು ವಿಜಯ್ ದೇವರಕೊಂಡ ಜೊತೆ ನಟಿಸಿದ್ದಾರೆ.  

7 /7

ಕಳೆದ ವಾರವಷ್ಟೇ ಸಮಂತಾ ರುತ್ ಪ್ರಭು ಅವರು ಸಿಟಾಡೆಲ್ ಇಂಡಿಯಾ ಸಿನಿಮಾ ಶೂಟಿಂಗ್‌ ಪೂರ್ಣಗೊಳಿಸಿ, ಇದೀಗ ರಜೆಯಲ್ಲಿದ್ದಾರೆ.